ಅವಮಾನ: ಮಹಿಳಾ ಮೋರ್ಚಾ ಪ್ರತಿಭಟನೆ
Team Udayavani, Oct 15, 2017, 3:36 PM IST
ಸುಳ್ಯ: ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯನ್ನು ಪ್ರತಿಯೊಬ್ಬ ಪ್ರಜೆಯೂ ಸ್ವಾಗತಿಸುತ್ತಿದ್ದು, ಕಾಂಗ್ರೆಸ್ಸಿಗರ ರಾಜಕಾರಣಕ್ಕೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುವುದರೊಂದಿಗೆ ಎಡವಟ್ಟುಗಳನ್ನು ಮಾಡುತ್ತಿದ್ದಾರೆ ಎಂದು ಸುಳ್ಯಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಮಹಿಳೆಯರಿಗೆ ಅಗೌರವ ತೋರಿಸಿ ಕೀಳುಮಟ್ಟದ ಹೇಳಿಕೆ ನೀಡಿ ರಾಹುಲ್ ಗಾಂಧಿ ಅವಮಾನ ಎಸಗಿದ್ದಾರೆ ಎಂದು ಖಂಡಿಸಿ ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಸುಳ್ಯನಗರದಲ್ಲಿ ಹಮ್ಮಿಕೊಂಡ ಪ್ರತಿಭಟನ ಸಭೆಯನ್ನುದೇಶಿಸಿ ಮಾತನಾಡಿದರು.
ಕಾಂಗ್ರೆಸ್ಸಿಗರ ಹೇಳಿಕೆಯಂತೆ ಶಾಸಕ ಅಂಗಾರ ಅವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸಿನ ನಾಯಕರು ಬಿಜೆಪಿ ಮುಖಂಡರ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಆರೆಸ್ಸೆಸ್ ಹಿನ್ನೆಲೆಯುಳ್ಳ ಕಾಂಗ್ರೆಸ್ ಅಧ್ಯಕ್ಷರು ಹಿಂದೆ ಸುಳ್ಯ ಎಪಿಎಂಸಿ ಅಧ್ಯಕ್ಷರಂತಹ ಹುದ್ದೆಗಳ ಲಾಭ ಗಿಟ್ಟಿಸಿಕೊಂಡಿದ್ದಾರೆ. ಈಗ ನಮ್ಮ ವಿರುದ್ಧವೇ ಸವಾರಿ ಮಾಡುವ ಪ್ರಯತ್ನ ಸರಿಯಲ್ಲ ಎಂದರು.
ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಸಚಿವ ರಮಾನಾಥ ರೈ ಅವರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ನೀಡಿದ ಹೇಳಿಕೆ, ಸಚಿವ ರೋಷನ್ ಬೇಗ್ ಮೋದಿ ವಿರುದ್ಧ ಆಡಿದ ಮಾತುಗಳು ಮತ್ತು ರಾಹುಲ್ ಗಾಂಧಿ ರಾಷ್ಟ್ರ ಸೇವಿಕಾ ಸಮಿತಿ ವಿರುದ್ಧ ನೀಡಿದ ಹೇಳಿಕೆ ಅವರ ಭಾವನೆ ಮತ್ತು ಮನೋಸ್ಥಿತಿಯನ್ನು ಸೂಚಿಸುತ್ತದೆ ಎಂದರಲ್ಲದೇ, ಕೇರಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕಾರಣವಾದ ವೇಣುಗೋಪಾಲನ್ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿಯಾಗಿದ್ದು ಅವರನ್ನು ಇಲ್ಲಿಗೆ ಆಗಮಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬಾಲಿಶ ಹೇಳಿಕೆ
ತಾಲೂಕು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಪ್ರಧಾನಿ ಮೋದಿ ಅವರು ಸಾಂಸ್ಕೃತಿಕ ನೆಲೆಗಟ್ಟಿನೊಂದಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿ ದ್ದಾರೆ. ಆದರೆ ಕಾಂಗ್ರೆಸ್ಸಿಗರು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ದೇಶದ ಬಗ್ಗೆ ಅರಿವಿಲ್ಲದ ರಾಹುಲ್‌ಗಾಂಧಿಯಂತವರಿಗೆ ಅಧಿಕಾರ ನೀಡಿದರೆ ದೇಶದ ಪರಿಸ್ಥಿತಿ ಅಧೋಗತಿಗೆ ಇಳಿಯಲಿದೆ ಎಂದರು.
ಐವರ್ನಾಡು ವಿಚಾರವಾಗಿ ಕಾಂಗ್ರೆಸ್ಸಿಗರು ದಾರಿತಪ್ಪಿಸುವ ಹೇಳಿಕೆ ಮತ್ತು ಸಮರ್ಥನೆ ನೀಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.
ಇಟಲಿಯಿಂದ ಬಂದವರಿಲ್ಲ
ಮಾಜಿ ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ರಾಷ್ಟ್ರ ಸೇವಿಕಾ ಸಮಿತಿ ಬಗ್ಗೆ ರಾಹುಲ್‌ಗಾಂಧಿ ತುಚ್ಚವಾಗಿ ಮಾತನಾಡಿ, ಅವಮಾನಿಸಿದ್ದಾರೆ. ಭಾರತೀಯ ಮಹಿಳೆಯರು ಇಟಲಿಯಿಂದ ಬಂದಿಲ್ಲ. ರಾಹುಲ್ ಗಾಂಧಿಯಿಂದ ಪಾಠ ಕಲಿಯಬೇಕಾಗಿಲ್ಲ ಎಂದರು.
ಓಲೈಕೆ ನಡೆಯದು
ಬಿಜೆಪಿ ಮಂಡಲ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಅಶ್ರಫ್ ಖಾಸಿಲೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾಕರನ್ನು ಓಲೈಸುವ ರಾಜಕಾರಣ ಮಾಡುತ್ತಿದೆ. ಆದರೆ ಅಲ್ಪಸಂಖ್ಯಾಕರು ಇದಕ್ಕೆ ಮರುಳಾಗುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯಕಲ್ತಡ್ಕ, ಎಪಿಎಂಸಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಸದಸ್ಯ ಸಂತೋಷ್ ಜಾಕೆ, ಉಪಾಧ್ಯಕ್ಷೆ ಸುಕನ್ಯಾ ಭಟ್, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ, ಬಿಜೆಪಿ ಸಂಘಟನ ಕಾರ್ಯದರ್ಶಿ ಯತೀಶ್, ತಾಲೂಕು ಬಿಜೆಪಿ ಕಾರ್ಯದರ್ಶಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ನಲ್ಲೂರಾಯ, ಕಾರ್ಯದರ್ಶಿ ಜಯಂತಿ, ಪ್ರಮುಖರಾದ ಭಾಗ್ಯಪ್ರಸನ್ನ, ಸರೋಜಿನಿ ಪೆಲ್ತಡ್ಕ, ಶಂಕರ್ ಪೆರಾಜೆ ಮತ್ತಿತರಿದ್ದರು.
ತಪ್ಪೊಪ್ಪಿ ಕೊಳ್ಳಬೇಕು
ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಕಾಂಗ್ರೆಸ್ಸಿಗರು ಭ್ರಮನಿರಸನಗೊಂಡು ಸಚಿವ ರಮಾನಾಥ ರೈ, ಸಚಿವ ರೋಷನ್ ಬೇಗ್ ಸಹಿತ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಜನತೆಗೆ ಮೋಸ, ವಂಚನೆ, ಕಪಟವೇ ನಡೆದಿದ್ದು. ರಾಜ್ಯಡಳಿತದ ಕಾರ್ಯವೈಖರಿಯಿಂದ ಅಧಿಕಾರ ವ್ಯವಸ್ಥೆ ಕುಸಿದಿದೆ. ಅವಮಾನಕಾರಿ ಹೇಳಿಕೆಗಳನ್ನು ನೀಡಿದವರು ಕ್ಷಮೆ ಯಾಚಿಸುವುದು ಮಾತ್ರವಲ್ಲ, ಸುದ್ದಿ ಗೋಷ್ಠಿಯಲ್ಲಿ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.