ಸುಬ್ರಹ್ಮಣ್ಯ: ಶಂಕಿತ ನಕ್ಸಲರಿಗೆ ತೀವ್ರ ಶೋಧ
Team Udayavani, Jul 28, 2019, 11:02 AM IST
ಸುಬ್ರಹ್ಮಣ್ಯ: ಶಿರಾಡಿ ಘಾಟಿಯ ಎಡಕುಮೇರಿ ರೈಲು ಹಳಿಯಲ್ಲಿ ಗಸ್ತು ನಿರತ ಸಿಬಂದಿಗೆ ಅಪರಿಚಿತ ವ್ಯಕ್ತಿಗಳು ಬೆದರಿಕೆ ಒಡ್ಡಿದ ಘಟನೆ ನಡೆದ ಬಳಿಕ ಅವರು ನಕ್ಸಲರೆನ್ನುವ ಸಂದೇಹದ ಮೇರೆಗೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್)ಯ ಯೋಧರು ಗಡಿಭಾಗದಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಕಾರ್ಕಳ ಎಎನ್‌ಎಫ್ ಪಡೆಯ ಯೋಧರ ತಂಡವು ಶನಿವಾರವೂ ಸಕಲೇಶಪುರ ಮತ್ತು ದ.ಕ. ಗಡಿಭಾಗದಲ್ಲಿ ಶೋಧ ನಡೆಸಿತು. ಸಕಲೇಶಪುರಭಾಗದ ಬಿಸಿಲೆ ಘಾಟಿ, ಗಡಿ ಚಾಮುಂಡೇಶ್ವರಿ ಗುಡಿ ಹಾಗೂ ಪರಿಸರದ ಅರಣ್ಯದಲ್ಲಿ 12 ಮಂದಿಯ ಒಂದು ತಂಡ ಶೋಧ ಕಾರ್ಯ ನಡೆಸಿದರೆ ಇನ್ನೊಂದು ತಂಡವು ಸಂಪಾಜೆ, ಸುಬ್ರಹ್ಮಣ್ಯ, ಶಿರಾಡಿ ಮೊದಲಾದೆಡೆ ಶೋಧ ನಿರತವಾಗಿದೆ. ಈ ವೇಳೆ ನಕ್ಸಲರ ಚಲನವಲನ ಕುರಿತು ತಂಡಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ.
ಕಾರ್ಮಿಕರಿಗೆ ಅಭಯ
ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೇ ವಿಭಾಗದ ಕಾರ್ಮಿಕರು ಭೀತಿಗೆ ಒಳಗಾಗದಂತೆ ಧೈರ್ಯ ತುಂಬುವ ಕೆಲಸವನ್ನು ಎಎನ್‌ಎಫ್ ಯೋಧರು ಮತ್ತು ಪೊಲೀಸರು ನಡೆಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳ ಕುರಿತು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಎಡಕುಮೇರಿ ಸುರಂಗ ಮಾರ್ಗದ ಸಮೀಪ ಕರ್ತವ್ಯ ನಿರತ ರೈಲ್ವೇ ಕಾರ್ಮಿಕ ರಾಜು ಅವರಿಗೆ ಪಿಸ್ತೂಲ್‌ಧಾರಿಗಳಿಬ್ಬರು ಜು. 22ರಂದು ಬೆದರಿಕೆ ಹಾಕಿದ್ದರು. ಅವರು ಶಂಕಿತ ನಕ್ಸಲರು ಎಂಬ ಅನುಮಾನದ ಮೇರೆಗೆ ದ.ಕ. – ಸಕಲೇಶಪುರ – ಕೊಡಗು ಜಿಲ್ಲೆಗಳ ಗಡಿ ಭಾಗದ ಅರಣ್ಯ ಹಾಗೂ ಜನವಸತಿ ಪ್ರದೇಶಗಳ ಮೇಲೆ ಎಎನ್‌ಎಫ್ ಪಡೆ ಹದ್ದಿನ ಕಣ್ಣಿರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.