ಅಂತರ್ಜಾತಿ ವಿವಾಹ: ಯುವತಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Team Udayavani, Jan 26, 2019, 9:29 AM IST
ಮಳವಳ್ಳಿ: ಅಂತರ್ಜಾತಿ ವಿವಾಹವಾಗಿದ್ದಳೆಂಬ ಕಾರಣಕ್ಕೆ ಯುವತಿ ಮತ್ತು ಆಕೆಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆಯೊಂದು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಶೋಧ ಮತ್ತು ಆಕೆಯ ಕುಟುಂಬವನ್ನು ಗ್ರಾಮಸ್ಥರು ಸಾಮಾಜಿಕವಾಗಿ ಬಹಿಷ್ಕರಿಸಿದ್ದಲ್ಲದೆ, 25 ಸಾವಿರ ರೂ. ದಂಡ ಹಾಕಿದ್ದಾರೆ.
ಘಟನೆಯ ವಿವಿರ: ಗೊಲ್ಲರಹಳ್ಳಿ ಗ್ರಾಮದ ದಲಿತ ಕೋಮಿಗೆ ಸೇರಿದ ಯಶೋಧ ಕಳೆದ ಎರಡು ವರ್ಷಗಳ ಹಿಂದೆ ಸವರ್ಣೀಯ ಸಮುದಾಯ ಯುವಕ ಕರಕಲಕಟ್ಟೆ ವೆಂಕಟರಾಜು ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಕುಪಿತಗೊಂಡ ಗೊಲ್ಲರಹಳ್ಳಿ ಗ್ರಾಮದ ದಲಿತ ಸಮುದಾಯವೇ ಆಕೆಯನ್ನು ತಮ್ಮ ಜಾತಿಯಿಂದ ಬಹಿಷ್ಕರಿಸಿದ್ದೂ ಅಲ್ಲದೆ, 25 ಸಾವಿರ ರೂ. ದಂಡ ಹಾಕಿದ್ದರು. ಜೊತೆಗೆ ಯಶೋಧಾಳನ್ನು ಮನೆಗೆ ಸೇರಿಸಿದಂತೆ ತಾಕೀತು ಮಾಡಿದ್ದಾರೆ.
ಮಾತನಾಡಿದವರಿಗೂ ಸಾವಿರ ದಂಡ: ಆಕೆ ಗರ್ಭಿಣಿಯಾಗಿ ಮನೆಗೆ ವಾಪಸ್ಸಾದ್ದಳು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮದ ಮುಖಂಡರು ಪಂಚಾಯಿತಿ ಸೇರಿ ಸಭೆ ನಡೆಸಿ, ಇಡೀ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಆ ಕುಟುಂಬದೊಂದಿಗೆ ಯಾರೂ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ ಒಂದು ಸಾವಿರ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಪತ್ನಿ ನೋಡಲು ಮನೆಗೆ ಬರುತ್ತಿದ್ದ ಯಶೋಧ ಪತಿ ಕರಕಲಕಟ್ಟೆ ವೆಂಕಟರಾಜು ಕುಟುಂಬಕ್ಕೂ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ವಕೀಲರಿಗೂ ಬಹಿಷ್ಕಾರ: ಯಶೋಧ ಕುಟುಂಬದೊಂದಿಗೆ ಯಾರಾದರೂ ಮಾತನಾಡಿರುವುದು, ಸಹಾಯ ಮಾಡಿದವರ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರಿಗೂ 500 ರೂ. ಬಹುಮಾನವನ್ನೂ ಘೋಷಿಸಿದ್ದಾರೆ. ಗ್ರಾಮದಲ್ಲಿರುವ ದೇವಸ್ಥಾನ ಪ್ರವೇಶವಕ್ಕೂ ಅವಕಾಶ ನೀಡಿರಲಿಲ್ಲ. ಈ ವಿಚಾರ ತಿಳಿದ ಸ್ಥಳೀಯ ವಕೀಲ ಪುಟ್ಟಮಾದು ಅವರು ಕುಟುಂಬಕ್ಕೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕೊಡಿಸಿದರೆಂಬ ಕಾರಣಕ್ಕೆ ಅವರನ್ನೂ ಬಹಿಷ್ಕರಿಸಲಾಗಿದೆ.
ಇದರಿಂದ ಮನನೊಂದ ಯಶೋಧ ಕುಟುಂಬ ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಯಶೋಧಾ ನಿವಾಸಕ್ಕೆ ಭೇಟಿ ನೀಡಿ ಆಕೆ ಮತ್ತವರ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಯಶೋಧ ತಾಯಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
21ನೇ ಶತಮಾನದಲ್ಲೂ ಇಂತಹ ಸಾಮಾಜಿಕ ಅನಿಷ್ಠ ಪದ್ಧತಿ ಜಾರಿಯಲ್ಲಿರುವುದು, ಅಲ್ಲದೇ ಸ್ವಜಾತಿಯವರೇ ಸಾಮಾಜಿಕ ಬಹಿಷ್ಕಾರದಂತಹ ಆಚರಣೆ ಮಾಡುವುದು ನಾಚಿಕೆಗೇಡಿನ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.