ಎನ್ ಎಂಪಿಟಿ ಸಮುದ್ರ ತಟದಲ್ಲಿ ಇಂಟರ್ ಸೆಪ್ಟರ್ ನೌಕೆಗೆ ಚಾಲನೆ
Team Udayavani, Jan 29, 2020, 1:08 PM IST
ಪಣಂಬೂರು: ಇಲ್ಲಿನ ಎನ್ ಎಂಪಿಟಿ ಸಮುದ್ರ ತಟದಲ್ಲಿ ಇಂದು ಭಾರತೀಯ ಕರಾವಳಿ ಪಡೆಯ ಇಂಟರ್ ಸೆಪ್ಟರ್ ಬೋಟ್ ಸಿ-488ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಬುಧವಾರ ಚಾಲನೆ ನೀಡಿದರು.
ಕೆಐಎಡಿಬಿಯಿಂದ ಕರಾವಳಿ ಪಡೆ ಅಕಾಡೆಮೆ ನಿರ್ಮಾಣಕ್ಕೆ ಕೆಂಜಾರುವಿನಲ್ಲಿ 160 ಜಾಗ ಒದಗಿಸಲಾಗಿದೆ. ಇದರ ಪ್ರಕ್ರಿಯೆಗಳು ನಡೆಯುತ್ತಿದೆ. ಕರ್ನಾಟಕದ 320ಕಿ,ಮೀ ಉದ್ದದ ಕರಾವಳಿ ತೀರದ ಭದ್ರತೆ ಮತ್ತು ರಕ್ಷಣೆಯಲ್ಲಿ ಈ ನೂತನ ಇಂಟರ್ ಸೆಪ್ಟರ್ ನೆವಾಗಲಿದೆ ಎಂದು ವಿಜಯ್ ಭಾಸ್ಕರ್ ಹೇಳಿದರು.
ಎಲ್ ಆಂಡ್ ಟಿ ನೌಕಾನೆಲೆಯಲ್ಲಿ ಈ ನೌಕೆಯನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ನೌಕೆ ಗಸ್ತು ಕಾರ್ಯದ ಜೊತೆಗೆ ರಕ್ಷಣಾ ಕಾರ್ಯದಲ್ಲಿ ಸಹಾಯಕವಾಗಲಿದೆ.
106 ಟನ್ ತೂಗುವ ಈ ಇಂಟರ್ ಸೆಪ್ಟರ್ 27.80 ಮೀಟರ್ ಉದ್ದವಿದೆ. ಇದು 4 ನಾಟ್ ಗರಿಷ್ಠ ವೇಗದಲ್ಲಿ 500 ನಾಟಿಕಲ್ ದೂರ ಕ್ರಮಿಸಬಲ್ಲದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.