“ಆಸಕ್ತಿಯುಳ್ಳ ಕಲಾವಿದ ಉತ್ತಮ ಕಲೆಗಾರನಾಗಬಲ್ಲ’
Team Udayavani, May 7, 2019, 5:50 AM IST
ಸುಬ್ರಹ್ಮಣ್ಯ: ಸಾಹಿತ್ಯ ಕೃಷಿ ಇನ್ನಷ್ಟು ಬಲಾಡ್ಯವಾಗಿ ಬೆಳೆಯಲು ಸ್ಥಳೀಯವಾಗಿ ಕಲಿಕೆಗೆ ಅವಕಾಶ ಸಿಗಬೇಕು. ವಿದ್ಯಾರ್ಥಿಯ ಸಂಗೀತ ಆಸಕ್ತಿ ಗಮನಿಸಿ ತರಬೇತಿ ನೀಡಿದರೆ ಆತ ಓರ್ವ ಉತ್ತಮ ಕಲೆಗಾರನಾಗಬಲ್ಲ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನಲ್ಲಿ ರವಿವಾರ ನಡೆದ ಶ್ರೀ ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ ಇದರ ವತಿಯಿಂದ ನಡೆದ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರೋತ್ಸಾಹ ಅಗತ್ಯ
ಯಾಂತ್ರಿಕ ಜೀವನದ ಇಂದಿನ ದಿನಗಳಲ್ಲಿ ಕಲೆಗೆ ಪ್ರೋತ್ಸಾಹ ಅಗತ್ಯ. ಸಂಸ್ಕೃತಿ, ಕಲೆ ಉಳಿಯಲು ದೇವಸ್ಥಾನದ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪುತ್ತೂರು ವಿವೆಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೇದವ್ಯಾಸ ಕಾಮತ್ ಮಾತನಾಡಿ, ಮನುಷ್ಯ ಎಲ್ಲ ಸೌಭಾಗ್ಯಗಳನ್ನು ಪಡೆಯಬೇಕು. ಅದರಲ್ಲಿ ಕಲೆ, ಸಾಹಿತ್ಯ, ಸಂಗೀತ ಕೂಡ ಸೇರಿರಬೇಕು. ಕಲಾವಿದನನ್ನು ಗಾತ್ರ ಬಣ್ಣದ ಆಧಾರದಲ್ಲಿ ಅಳೆಯದೆ ಆತನಲ್ಲಿನ ಪ್ರತಿಭೆಯನ್ನು ಆಸ್ವಾದಿಸಬೇಕು ಎಂದರು.
ವಿದುಷಿ ಕಾಂಚನ ಎಸ್. ಶೃತಿರಂಜನಿ, ಸಂಗೀತ ಶಿಕ್ಷಕಿ ವಿದ್ಯಾಗೋವಿಂದ. ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಪ್ರೊ| ಉದಯಕುಮಾರ್ ಭಟ್, ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಣೇಶ್ ಪ್ರಸಾದ್, ಸಂಗೀತ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಸಂಗೀತ ಅಭಿಮಾನಿಗಳು ಉಪಸ್ಥಿತರಿದ್ದರು. ವಿನೂಪ್ ಮಲ್ಲಾರ ಸ್ವಾಗತಿಸಿದರು. ಶಿಕ್ಷಕ ಕೃಷ್ಣ ಭಟ್ ವಂದಿಸಿದರು. ಹರೀಶ್ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು.
ಚೈತನ್ಯ ಶಕ್ತಿ
ಕೆ.ವಿ.ಜಿ. ಶಿಕ್ಷಣ ಸಂಸ್ಥೆಯ ತಾಂತ್ರಿಕ ವಿಭಾಗದ ಉಪಪ್ರಾಂಶುಪಾಲ ಡಾ| ಶಿವಕುಮಾರ್ ಹೊಸೋಳಿಕೆ ಮಾತನಾಡಿ, ಸಂಗೀತದಲ್ಲಿ ಹಿಂದೂಸ್ತಾನಿ, ಕರ್ನಾಟಕ, ಪಾಶ್ಚಿಮಾತ್ಯ ಹೀಗೆ ಹಲವು ಪ್ರಕಾರಗಳಿದ್ದರೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಯಿಂದ ಸಿಗುವ ಆನಂದ ಬಹಳಷ್ಟಿದೆ. ಮನುಷ್ಯ, ಪ್ರಾಣಿ ಪಕ್ಷಿಗಳಿಗೆ ಚೈತನ್ಯ ನೀಡುವ ಶಕ್ತಿ ಸಂಗೀತಕ್ಕಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.