ನೆಹರೂ ಮನೆತನದ 4 ತಲೆಮಾರಿನ ಬಾಂಧವ್ಯ ಕುಡ್ಲದ ಕೇಂದ್ರ ಮೈದಾನ
Team Udayavani, Mar 20, 2018, 11:52 PM IST
ಸಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದ ತ್ಯಾಗಮಯ ಇತಿಹಾಸಕ್ಕೆ ಸಂಬಂಧಿಸಿ ಮಂಗಳೂರಿನ ಕೇಂದ್ರ- ಸೆಂಟ್ರಲ್ (ಈಗ ನೆಹರೂ) ಮೈದಾನಕ್ಕೆ ಅತ್ಯಂತ ಮಹತ್ವದ ಇತಿಹಾಸವಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಇಲ್ಲಿ 3 ಬಾರಿ ಸ್ವಾತಂತ್ರ್ಯ ಹೋರಾಟಗಾರರನ್ನುದ್ದೇಶಿಸಿ ಸಂದೇಶ ನೀಡಿದ್ದರು. ಇದರ ಜತೆಯಲ್ಲಿ ಈ ಮೈದಾನಕ್ಕೆ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿ ದೇಶದಲ್ಲೇ ವಿರಳ ಎಂದು ಹೇಳಬಹುದಾದ ಇನ್ನೊಂದು ವಿಶೇಷವಿದೆ: ಅದೆಂದರೆ ದೇಶದಲ್ಲಿ ಅನೇಕ ಕಾರಣಗಳಿಂದ ವಿಶಿಷ್ಟವಾಗಿರುವ ನೆಹರೂ ಮನೆತನದ ನಾಲ್ಕು ತಲೆಮಾರಿನ ಪ್ರಮುಖರು ಇಲ್ಲಿ ಚುನಾವಣಾ ಪ್ರಚಾರ – ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದಾರೆ! ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಅವರ ಪುತ್ರಿ ಮೂರನೇ ಪ್ರಧಾನಿ- ಇಂದಿರಾ ಗಾಂಧಿ, ಇಂದಿರಾ ಅವರ ಪುತ್ರ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮತ್ತು ರಾಜೀವ್ ಪುತ್ರ ರಾಹುಲ್ ಗಾಂಧಿ.
ಈ ಮೈದಾನದ ಮೂಲ ಹೆಸರು ಕೇಂದ್ರ ಮೈದಾನ ಅಥವಾ ಸೆಂಟ್ರಲ್ ಮೈದಾನ್. ಪ್ರಥಮ ಪ್ರಧಾನಿ ನೆಹರೂ ಇಲ್ಲಿ ಪೆವಿಲಿಯನ್ ಉದ್ಘಾಟಿಸಿದ ಬಳಿಕ ಇದು ನೆಹರೂ ಮೈದಾನ ಎಂದಾಯಿತು. ವಿಶೇಷವೆಂದರೆ ಪಂಡಿತ್ ನೆಹರೂ ಸ್ವಾತಂತ್ರ್ಯಪೂರ್ವದ ಆಗಿನ ಕಾಂಗ್ರೆಸ್ ಪರವಾಗಿ ಇಲ್ಲಿ ಪ್ರಥಮ ಭಾಷಣ ಮಾಡಿದ್ದು 10-2-1937ರಂದು. 1935ರಲ್ಲಿ ರಾಜ್ಯಾಂಗ ಘಟನೆಯ ತಿದ್ದುಪಡಿಯ ಅನುಸಾರವಾಗಿ, ಸ್ವಲ್ಪ ಆಡಳಿತವನ್ನು ಪ್ರಜಾಪ್ರತಿನಿಧಿಗಳಿಗೆ ನೀಡಲಾಗಿತ್ತು. ಕಾಂಗ್ರೆಸ್ಸಿಗರು ಸ್ಪರ್ಧೆಗೆ ನಿರ್ಧರಿಸಿದರು. ಆಗಿನ ಇಲ್ಲಿನ ಕಾಂಗ್ರೆಸ್ ನಾಯಕರು ಕಾರ್ನಾಡು ಸದಾಶಿವ ರಾಯರ ನೇತೃತ್ವದಲ್ಲಿ ವಿನಂತಿಸಿದಂತೆ ಪ್ರಚಾರಕ್ಕೆ ನೆಹರೂ ಮಂಗಳೂರಿಗೆ ಬಂದಿದ್ದರು. ಸ್ವಾತಂತ್ರ್ಯಾನಂತರವೂ ನೆಹರೂ ಮಂಗಳೂರಿಗೆ ಬಂದಿದ್ದರು. 25-12-1951ರಂದು ಅವರು ಮುಂಬಯಿಯಿಂದ ಪ್ರಥಮ ವಿಮಾನದಲ್ಲಿ ಆಗಮಿಸುವ ಮೂಲಕ ಬಜಪೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು.
ಆ ಬಳಿಕ ಅವರ ಪುತ್ರಿ ಇಂದಿರಾ ಗಾಂಧಿಗೆ ನೆಹರೂ ಮೈದಾನ ಅಚ್ಚುಮೆಚ್ಚಿನ ವೇದಿಕೆಯಾಗಿತ್ತು. ಲೋಕಸಭೆ – ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಅವರು ಬರುತ್ತಿದ್ದರು. ಸ್ಥಳೀಯ ಕೃಷಿ ಪರಂಪರೆಯ ಮುಟ್ಟಾಳೆ ಧರಿಸಿ ಮಹಿಳೆಯರೊಂದಿಗೆ ಸಂಭ್ರಮಿಸುತ್ತಿದ್ದರು. 31-10-1984ರಂದು ಇಂದಿರಾ ಹತ್ಯೆಯಾಯಿತು. ಬಳಿಕದ ಲೋಕಸಭಾ ಚುನಾವಣೆಯು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯಿತು. ನೆಹರೂ ಮೈದಾನದಲ್ಲಿ ಆ ಚುನಾವಣೆಯ ಪ್ರಚಾರ ಭಾಷಣದಲ್ಲಿ ಅವರು ಭಾಗವಹಿಸಿದರು. 1991ರಲ್ಲಿ (ಹತ್ಯೆಗೆ ಮೊದಲು) ಅವರು ಇಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. 1991ರಲ್ಲಿ ಅವರು ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಬದಿಗಿರಿಸಿ, ಜನತೆಯೊಡನೆ ಈ ಪರಿಸರದಲ್ಲಿ ನಡೆದುಕೊಂಡು ಬಂದು ವೇದಿಕೆಯನ್ನೇರಿದ್ದರು.
ರಾಜೀವ್ ಹತ್ಯೆಯ ಬಳಿಕ ಈಗ ಅವರ ಪುತ್ರ ರಾಹುಲ್ ಪಕ್ಷದ ಹೊಣೆ ವಹಿಸಿಕೊಂಡಿದ್ದಾರೆ. ಕಳೆದ ಚುನಾವಣೆ ಸಂದರ್ಭ ಅವರು ಸಾರ್ವಜನಿಕ ಪ್ರಚಾರ ಸಭೆಯಲ್ಲಿ ನೆಹರೂ ಮೈದಾನದಲ್ಲಿ ಭಾಗವಹಿಸಿದರು. ಈ ಮೂಲಕ ಇಲ್ಲಿ ನೆಹರೂ ಮೈದಾನದಲ್ಲಿ ನೆಹರೂ ಕುಟುಂಬದ ನಾಲ್ಕು ತಲೆಮಾರುಗಳ ನಾಯಕರು ಭಾಗವಹಿಸಿದಂತಾಯಿತು. ಸೋನಿಯಾ ಗಾಂಧಿ ಅವರು ಕೂಡ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಪ್ರಿಯಾಂಕಾ ಕೂಡ ತಾಯಿಯ ಜತೆ ಭಾಗವಹಿಸಿದ್ದಾರೆ. ನೆಹರೂ, ಇಂದಿರಾ, ರಾಜೀವ್ ಅವರು ಅಖೀಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಂಬ ನೆಲೆಯಲ್ಲೂ ನೆಹರೂ ಮೈದಾನದಲ್ಲಿ ಭಾಷಣ ಮಾಡಿದ್ದಾರೆ. ಈಗ ರಾಹುಲ್ ಕೂಡ ಪಕ್ಷಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತನ್ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನೆಹರೂ ಕುಟುಂಬದ ನಾಲ್ಕು ತಲೆಮಾರಿನ ನಾಯಕರು ಇಲ್ಲಿ ಭಾಗವಹಿಸಿದ ದಾಖಲೆ ನಿರ್ಮಾಣ.
— ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.