ಕುರುಂಜಿಬಾಗ್‌ ರಸ್ತೆಯಲ್ಲಿ ಕಿತ್ತುಹೋದ ‘ಇಂಟರ್‌ ಲಾಕ್‌’


Team Udayavani, Oct 26, 2017, 4:12 PM IST

26-Mng–16.jpg

ಸುಳ್ಯ: ಶಿಕ್ಷಣ ಸಂಸ್ಥೆಗಳಿಗೆ, ತಾಲೂಕು ಕಚೇರಿ, ನ್ಯಾಯಾಲಯ ಅಲ್ಲದೆ ವೈದ್ಯಕೀಯ ಚಿಕಿತ್ಸೆಗೆಂದು ನಿತ್ಯ ಸಾವಿರಾರು ಮಂದಿ ಓಡಾಡುವ ಕುರುಂಜಿಬಾಗ್‌ನ ವೃತ್ತದಲ್ಲಿ ಅಳವಡಿಸಿದ್ದ ಇಂಟರ್‌ಲಾಕ್‌ ಕಿತ್ತುಹೋಗಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಪ್ರತಿ ನಿತ್ಯ ವಾಹನಗಳು ಹರಸಾಹಸಪಡುತ್ತ ಸಂಚರಿಸಿದರೆ, ಪಾದಚಾರಿಗಳು ಕಿತ್ತುಹೋದ ಇಂಟರ್‌ ಲಾಕ್‌ನ ಕಲ್ಲುಗಳನ್ನು ಎಡವಿಕೊಂಡು ತೆರಳಬೇಕಾಗಿದ್ದು, ನಗರಾಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ಮುಂದುವರಿಯುತ್ತಾರೆ.

ಕುರುಂಜಿಬಾಗ್‌ನ ಜಂಕ್ಷನ್‌ ನಗರದ ಪ್ರಮುಖ ವೃತ್ತಗಳಲ್ಲೊಂದು. ದಿ| ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಯನ್ನು ಇಲ್ಲಿ ಅಳವಡಿಸಲಾಗಿದೆ. ಹಿಂದಿನ  ನ.ಪಂ. ಆಡಳಿತದಲ್ಲಿ ಈ ಭಾಗದ ಸದಸ್ಯರಾಗಿದ್ದ ಎನ್‌.ಎ. ರಾಮಚಂದ್ರ ಅವರ ಪ್ರಯತ್ನದಿಂದ ಇಂಟರ್‌ ಲಾಕ್‌ ಅಳವಡಿಸಲಾಗಿತ್ತು. ಇದೀಗ ಇಂಟರ್‌ಲಾಕ್‌ ಕಿತ್ತುಹೋಗಿ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ.

ಈ ವೃತ್ತ ನ.ಪಂ.ನ ಕುರುಂಜಿಬಾಗ್‌ ವಾರ್ಡ್‌ಗೆ ಒಳಪಟ್ಟಿದ್ದರೂ, ಇದೇ ಮಾರ್ಗವಾಗಿ ನ.ಪಂ.ನ ಇತರ ವಾರ್ಡ್‌ನ ಸದಸ್ಯರು ಸಂಚರಿಸಬೇಕಾಗಿದೆ. ಆದರೆ ಪ್ರಮುಖವಾಗಿ ಶಿಕ್ಷಣ ಸಂಸ್ಥೆ, ಹಲವಾರು ಸರಕಾರಿ ಕಚೇರಿಗಳ ಸಹಿತ ಆಡಳಿತ ಕೇಂದ್ರವಾಗಿರುವ ಈ ಜನಸಂಚಾರದ ವೃತ್ತಕ್ಕೆ ನ.ಪಂ. ಸದಸ್ಯರು ಸ್ವಲ್ಪಮಟ್ಟಿನ ಗಮನ ಹರಿಸುತ್ತಿದ್ದರೆ ಈ ಸಂಚಾರ ಅವ್ಯವಸ್ಥೆಯನ್ನು  ಗೆಹರಿಸಬಹುದಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

ಕಚೇರಿ, ಸಂಸ್ಥೆಗಳು
ಒಂದೆಡೆ ಕೆವಿಜಿ ಕ್ಯಾಂಪಸ್‌ನ ಮೆಡಿಕಲ್‌ ಕಾಲೇಜು, ಡೆಂಟಲ್‌ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಪಾಲಿಟೆಕ್ನಿಕ್‌, ನರ್ಸಿಂಗ್‌ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತದೆ. ಮತ್ತೂಂದೆಡೆ ಜೆಎಂಎಫ್‌ಸಿ ನ್ಯಾಯಾಲಯ, ಶಿಕ್ಷಣ ಕಚೇರಿ, ಅಲ್ಲದೆ ಇನ್ನೆರಡು ರಸ್ತೆಗಳು ತಾಲೂಕು ಕಚೇರಿ, ಮೆಸ್ಕಾಂ, ಕೃಷಿ ಇಲಾಖೆ, ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿ, ಗ್ರಂಥಾಲಯ, ಕಂದಾಯ ನಿರೀಕ್ಷಕರ ಕಚೇರಿ, ತಾಲೂಕು  ಚಾಯತ್‌ಗಳನ್ನು ಸಂಪರ್ಕಿಸುತ್ತದೆ.

ಇದೇ ರಸ್ತೆಯಲ್ಲಿ ಸಂಚರಿಸಿದರೆ ಇಲ್ಲಿಯ ಭಸ್ಮಡ್ಕ, ಕುರುಂಜಿಗುಡ್ಡೆ ಮೊದಲಾದ ಪ್ರದೇಶಗಳಿಗೆ ಸಂಪರ್ಕವಿದೆ. ಇಲ್ಲಿ ಸಾವಿರಾರು ಮನೆಗಳಿವೆ. ಅಲ್ಲದೆ ತುರ್ತು ಚಿಕಿತ್ಸೆಗೆಂದು ಇಲ್ಲಿನ ವೈದ್ಯಕೀಯ ಕಾಲೇಜಿಗೆ ರೋಗಿಗಳನ್ನು ಕರೆತರುವ ಸಂದರ್ಭದಲ್ಲೂ ಸಮಸ್ಯೆಯುಂಟಾಗುತ್ತಿದೆ.

ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಸಾಧಾರಣ ಸಾಮರ್ಥ್ಯದ ಇಂಟರ್‌ ಲಾಕ್‌ ಅಳವಡಿಸಿದರೆ ಅದು ವ್ಯರ್ಥವಾಗಬಹುದು. ಆದ್ದರಿಂದ ಇಲ್ಲಿಗೆ ಶಾಶ್ವತ ವ್ಯವಸ್ಥೆಗಾಗಿ ಕಾಂಕ್ರೀಟ್‌ ಕಾಮಗಾರಿ ನಡೆಸುವುದೇ ಸೂಕ್ತವೆನಿಸಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಶಾಶ್ವತ ವ್ಯವಸ್ಥೆ ಅಗತ್ಯ
ಶಾಶ್ವತ ವ್ಯವಸ್ಥೆಗಾಗಿ ಕಾಂಕ್ರೀಟ್‌ ಕಾಮಗಾರಿ ಸೂಕ್ತವಾಗಿದ್ದು, ಅಂದಾಜು ರೂ. 10 ಲಕ್ಷಕ್ಕೂ ಅಧಿಕ ಮೊತ್ತದ ಅಗತ್ಯವಿದೆ. ಆದರೆ ಇಷ್ಟೊಂದು ಮೊತ್ತ ನಗರ ಪಂಚಾಯತ್‌ನಲ್ಲಿ ಇಲ್ಲದ ಕಾರಣ ಅಸಾಧ್ಯವಾಗಿದೆ. ಕೆವಿಜಿ ಎಂಜಿನಿಯರಿಂಗ್‌ ಕಾಲೇಜಿನವರು ಅಂದಾಜುಪಟ್ಟಿ ತಯಾರಿಸಿ ಮನವಿ ಮಾಡಿದ್ದರು. ನಾನೂ ನ.ಪಂ.ಗೆ ಹಲವಾರು ಬಾರಿ ಮನವಿ ಮಾಡಿದ್ದೆ.
ಕಿರಣ್‌ ಕುರುಂಜಿ,
 ನ. ಪಂ. ವಾರ್ಡ್‌ ಸದಸ್ಯ

ಕಿತ್ತುಹೋದ ಇಂಟರ್‌ಲಾಕ್‌
ಇಲ್ಲಿನ ರಸ್ತೆಗೆ ಹಾಕಿರುವ ಇಂಟರ್‌ಲಾಕ್‌ ಕಿತ್ತುಹೋಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಹಿತ ಪಾದಚಾರಿಗಳಿಗೆ ತೊಡಕಾಗುತ್ತಿದೆ. ಇದರಿಂದಾಗಿ ಇಲ್ಲಿ ವಾಹನ ಅಪಘಾತಗಳು ಸಂಭವಿಸಿವೆ. ಇಲ್ಲಿಯ ಸಮಸ್ಯೆಯ ಬಗ್ಗೆ ನಗರ ಪಂಚಾಯತ್‌ಗೆ ನಾವು ತಿಳಿಸಿದ್ದರೂ ಭರವಸೆ ಮಾತ್ರ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ರಾಧಾಕೃಷ್ಣ,
  ಬಿಎಂಎಸ್‌ ಆಟೋರಿಕ್ಷಾ ಯೂನಿಯನ್‌
  ತಾಲೂಕಾಧ್ಯಕ

    ಭರತ್‌ ಕನ್ನಡ್ಕ

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.