ಇಂದ್ರಪ್ರಸ್ಥ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ
Team Udayavani, Jul 31, 2019, 6:57 AM IST
ಉಪ್ಪಿನಂಗಡಿ: ಅಮೆರಿಕದ ಕ್ಯಾಲಿಪೋರ್ನಿಯಾದ ಗೂಗಲ್ ಕೇಂದ್ರ ಕಚೇರಿಯಲ್ಲಿ ನಡೆದ ಗೂಗಲ್ ಸೈನ್ಸ್ ಫೇರ್ 2018-19ರಲ್ಲಿ ನ್ಯಾಶನಲ್ ಜಿಯೋಗ್ರಾಫಿಕ್ ಎಕ್ಸ್ ಪ್ಲೋರರ್ ಅವಾರ್ಡ್ ಅನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್ ಹಾಗೂ ಅಮನ್ ಕೆ.ಎ. ಅವರ ತಂಡ ಗೆದ್ದುಕೊಂಡಿದೆ. ಇನ್ಸ್‌ಫಯರಿಂಗ್ ಎಜುಕೇಟರ್ ಅವಾರ್ಡ್ ಅದೇ ಸಂಸ್ಥೆಯ ವಿಜ್ಞಾನ ಶಿಕ್ಷಕಿ, ತಂಡದ ಮಾರ್ಗದರ್ಶಿ ಶಿಕ್ಷಕಿ ನಿಶಿತಾ ಕೆ. ಅವರಿಗೆ ಲಭಿಸಿದೆ.
ಜಾಗತಿಕ ಮಟ್ಟದಲ್ಲಿ ವಿಜ್ಞಾನ ಸಂಶೋಧನೆಗಳನ್ನು ಸ್ಪರ್ಧೆಗೆ ಆಹ್ವಾನಿಸುವ ಗೂಗಲ್ ಸೈನ್ಸ್ ಫೇರ್ ವಿಭಾಗವು ಮೊದಲ ಹಂತದಲ್ಲಿ 1,000 ಸಂಶೋಧನೆಗಳನ್ನು ಆಯ್ಕೆ ಮಾಡುತ್ತದೆ. ಅವುಗಳಲ್ಲಿ ರೀಜನಲ್ ಫೈನಲಿಸ್ಟ್ ಆಗಿ 100 ತಂಡಗಳನ್ನು ಆರಿಸಲಾಗುತ್ತದೆ. ಅವುಗಳಲ್ಲಿ 20 ತಂಡಗಳನ್ನು ಗ್ಲೋಬಲ್ ಫೈನಲಿಸ್ಟ್ ಆಗಿ ಆರಿಸಿ ಅಂತಹ ತಂಡಗಳನ್ನು ಕ್ಯಾಲಿಪೋರ್ನಿಯಾದಲ್ಲಿ ನಡೆಯುವ ಪ್ರಶಸ್ತಿ ಪ್ರದಾನಕ್ಕೆ ಆಹ್ವಾನಿಸಲಾಗುತ್ತದೆ.
ಗಾರ್ಡಿಯನ್ ಆಗಿ ಸಹಕರಿಸಿದರು
ನಚಿಕೇತ್ ಹಾಗೂ ಅಮನ್ ಅಪ್ರಾಪ್ತ ವಯಸ್ಕರಾಗಿರುವುದರಿಂದ ಗಾರ್ಡಿಯನ್ ಆಗಿ ಭಾಗವಹಿಸಲು ಅವರ ಹೆತ್ತವರಿಗೆ ಗೂಗಲ್ ಸಂಸ್ಥೆ ವ್ಯವಸ್ಥೆ ಕಲ್ಪಿಸಿತ್ತು. ಸಕಾಲದಲ್ಲಿ ವೀಸಾ ದೊರೆಯದ ಕಾರಣ ಹೆತ್ತವರಿಗೆ ಪ್ರಯಾಣ ಬೆಳೆಸಲು ಅಸಾಧ್ಯವಾಯಿತು. ಮಕ್ಕಳ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತದೆ ಎಂದಾದಾಗ ನಚಿಕೇತ್ ಸಂಬಂಧಿ ಪೊಲೀಸ್ ಇಲಾಖೆ ನಿವೃತ್ತ ಸಿಬಂದಿ ದಿನೇಶ್ ಕುಮಾರ್ ಎಂ. ಮತ್ತು ಅಮನ್ ಅವರ ತಂದೆಯ ಸ್ನೇಹಿತ ಸಾಮ್ಯುಯೆಲ್ ಜೋಸ್ ಅಮನ್ ಅವರು ಗಾರ್ಡಿಯನ್‌ಗಳಾಗಿ ಜತೆಗೂಡಿದ್ದರು.
ಭಾರತದ ನಾಲ್ಕು ತಂಡ
ಜಗತ್ತಿನ ವಿವಿಧೆಡೆಗಳ ಒಟ್ಟು 20 ಗ್ಲೋಬಲ್ ಫೈನಲಿಸ್ಟ್‌ಗಳಲ್ಲಿ ಭಾರತದ 4 ತಂಡಗಳು ಇದ್ದವು. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಹೆಗ್ಗಳಿಕೆ ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶದ ವಿದ್ಯಾಲಯದ್ದಾಗಿರುವುದು ವಿಶೇಷ.
ಪ್ರಶಸ್ತಿ ಪುರಸ್ಕೃತರು
ಸರ್ವಾಂಗೀಣ ಸಾಧನೆಗಾಗಿ ಅಯರ್‌ಲ್ಯಾಂಡಿನ ಫಿಯಾನ್ ಪೆರೆರಾ ತಂಡಕ್ಕೆ ಗೂಗಲ್ ಗ್ರ್ಯಾಂಡ್ ಪ್ರçಜ್ (50 ಸಾವಿರ ಅಮೆರಿಕನ್ ಡಾಲರ್) ಲಭಿಸಿದೆ.
ಪರಿಸರದಲ್ಲಿನ ಸಂಶೋಧನೆಗಾಗಿ ನೀಡಲಾಗುವ ನ್ಯಾಶನಲ್ ಜಿಯೋಗ್ರಫಿಕ್ ಎಕ್ಸ್ ಪ್ಲೋರರ್ ಪ್ರಶಸ್ತಿಯು (15 ಸಾವಿರ ಅಮೆರಿಕನ್ ಡಾಲರ್) ಭಾರತವನ್ನು ಪ್ರತಿನಿಧಿಸಿದ ಇಂದ್ರಪ್ರಸ್ಥ ಕಾಲೇಜಿನ ತಂಡದ ಪಾಲಾಗಿದೆ.
ತಲಾ 15 ಸಾವಿರ ಅಮೆರಿಕನ್ ಡಾಲರ್ ಬಹುಮಾನವುಳ್ಳ ಲೀಗೋ ಎಜುಕೇಶನ್ , ಸೈಂಟಿಫಿಕ್ ಅಮೆರಿಕನ್ ಇನೋವೇಟರ್ ಮತ್ತು ಫಯೋನಿಕ್ ಅವಾರ್ಡ್‌ಗಳನ್ನು ರಷ್ಯಾದ ಡ್ಯಾನಿಯಲ್ ಕಜನೆr$Õàವ್, ಟರ್ಕಿಯ ತೌನ್ ಡೋಲ್‌ವುನ್ ಹಾಗೂ ಇಂಡೋನೇಷ್ಯಾದ ಸೆಲೆಸ್ಟಿನ್ ವೆನಾರ್ಡಿ ಗೆದ್ದುಕೊಂಡಿದ್ದಾರೆ. ಮಾರ್ಗದರ್ಶಿ ಶಿಕ್ಷಕರಿಗೆ ನೀಡಲಾಗುವ ಇನ್ಸ್‌ಫಯರಿಂಗ್ ಎಜುಕೇಟರ್ ಪ್ರಶಸ್ತಿ 5 ಸಾವಿರ ಅಮೆರಿಕನ್ ಡಾಲರ್ ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ನಿಶಿತಾ ಕೆ. ಗೆದ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.