ಇಂದಿನಿಂದ ಜೈನಕಾಶಿಯಲ್ಲಿ ವಿಶ್ವ ಸಾಂಸ್ಕೃತಿಕ ಜಾಂಬೂರಿ
ಮಂಗಳೂರು ರೈಲು ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ
Team Udayavani, Dec 21, 2022, 7:05 AM IST
ಮೂಡುಬಿದಿರೆ: ಮೊದಲ ಬಾರಿಗೆ ದೇಶದಲ್ಲಿ ಯೋಜಿಸಿರುವ 25ನೇ ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ ಮೂಡುಬಿದಿರೆ ಸರ್ವಸಜ್ಜಾಗಿದೆ.
ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಸ್ಕೌಟ್, ಗೈಡ್, ರೋವರ್ ಮತ್ತು ರೇಂಜರ್ಸ್ ಶಿಬಿರಾರ್ಥಿಗಳು ಈಗಾಗಲೇ ಆಗಮಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ 60 ಸಾವಿರ ಮಂದಿ ಆಗ ಮಿಸುವರು. ಬೆಳಗ್ಗೆಯಿಂದಲೇ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದ್ದು, ಡಿ. 27ರ ವರೆಗೂ ಮುಂದು ವರಿಯಲಿದೆ.
ಸಾರ್ವಜನಿಕರ ಪಾಲ್ಗೊಳ್ಳುವಿಕೆಗೂ ಅವಕಾಶವಿರುವುದರಿಂದ ಈ ಜಾಂಬೂರಿ ವಿಶೇಷವೆನಿಸಿದೆ. ಶಿಬಿರಾರ್ಥಿಗಳಿಗೆ ದೈನಂದಿನ ಚಟುವಟಿಕೆಗಳಿಗೆ ಪ್ರತ್ಯೇಕ ತಂಡಗಳನ್ನಾಗಿ ಮಾಡಿ ಒಂದೊಂದು ಕ್ರಿಯೆಗೆ ನಿಯೋಜಿಸಲಾಗುತ್ತದೆ. ಕೆಲವರು ಪಿಲಿಕುಳ, ದೇವಾಲಯ, ಕಡಲತೀರ ಇತ್ಯಾದಿ ಪ್ರವಾಸಕ್ಕೆ ಹೋದರೆ ಕೆಲವರನ್ನು ಸಾಹಸ ಕ್ರೀಡೆಗೆ, ಮೋಜಿನ ಆಟಗಳ ತಾಣಕ್ಕೆ, ಕಾಡಿನ ಪರಿಚಯಕ್ಕೆ, ಮಾರ್ಗಗಳ ಸ್ವಚ್ಛತೆಗೆ ಎಂದು ಪ್ರತ್ಯೇಕಿಸಲಾಗುತ್ತದೆ.
ಸಂಜೆ 5ರಿಂದ 8.30ರ ವರೆಗೆ ಬಹುತೇಕ ಮಂದಿ ವನಜಾಕ್ಷಿ ಶ್ರೀಪತಿ ಭಟ್ ಸಭಾಂಗಣದಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವರು. ಇಲ್ಲೇ ಯೋಗ, ಧ್ಯಾನ ನಡೆಯಲಿದೆ. ವಿವಿಧೆಡೆ ನಡೆಯುವ ಕೃಷಿ, ವಿಜ್ಞಾನ, ಕಲಾ ಇತ್ಯಾದಿ ಮೇಳಗಳಲ್ಲೂ ಶಿಬಿರಾರ್ಥಿಗಳು ಭಾಗವಹಿಸುವರು.
ಸಂಜೆ ಉದ್ಘಾಟನೆ
ಡಿ. 21ರಂದು ಸಂಜೆ 5 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಾಂಬೂರಿಗೆ ಚಾಲನೆ ನೀಡುವರು. ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ವಿಶ್ವ ಸ್ಕೌಟ್ ಅಭಿಯಾನದ ಮಹಾಕಾರ್ಯದರ್ಶಿ ಅಹಮದ್ ಅಲ್‌ಹಂದಾವಿ, ಸಚಿವರಾದ ವಿ. ಸುನಿಲ್ ಕುಮಾರ್, ಸಚಿವ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಒಡಿಶಾ ಸಚಿವ ಅತನು ಸಬ್ಯಸಾಚಿ ನಾಯಕ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷ ಡಾ| ಅನಿಲ್ ಕುಮಾರ್ ಜೈನ್ ಮತ್ತಿತರರು ಪಾಲ್ಗೊಳ್ಳುವರು.
ದೇಶದ ಸಂಸ್ಕೃತಿಯನ್ನು ಬಿಂಬಿಸುವ ಮೂರು ಸಾವಿರ ಜನಪದೀಯ ಕಲಾವಿದರು 150 ಕಲಾ ಪ್ರದರ್ಶನಗಳನ್ನು ದರ ಮೆರವಣಿಗೆ ಉದ್ಘಾಟನೆ ವೇಳೆ ನಡೆಸಿಕೊಡುವರು. ಇದು ಸಾಂಸ್ಕೃತಿಕ ಪಥಸಂಚಲನ ಶೈಲಿಯಲ್ಲಿ ಇರಲಿದೆ. ಶ್ರೀಲಂಕಾದ ಕಲಾವಿದರೂ ಪಾಲ್ಗೊಳ್ಳುವರು.
1 ಸಾವಿರ ಬಾಣಸಿಗರು
ಊಟೋಪಚಾರಕ್ಕೆ ಸಾರ್ವಜನಿಕರು ಹಾಗೂ ಶಿಬಿರಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆಯಿದ್ದು ಒಟ್ಟಾರೆ 1 ಸಾವಿರ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಸುಸಜ್ಜಿತ ಪಾಕಶಾಲೆ, ಉಗ್ರಾಣಗಳನ್ನು ನಿರ್ಮಿಸಲಾಗಿದೆ.
ಪ್ರತಿನಿತ್ಯ 5 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲಾಪ
ಆಳ್ವಾಸ್ ನುಡಿಸಿರಿ ವೇದಿಕೆ, ಡಾ| ವಿ.ಎಸ್. ಆಚಾರ್ಯ ವೇದಿಕೆ, ಕೃಷಿಸಿರಿ ವೇದಿಕೆಗಳಲ್ಲಿ ಬೆಳಗ್ಗೆ 10ರಿಂದ ರಾತ್ರಿ 6 ರ ವರೆಗೆ, ಕೆ.ವಿ. ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 9ರ ವರೆಗೆ ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ.
ವಿದೇಶಿ ಪ್ರತಿನಿಧಿಗಳು
ಮಲೇಷ್ಯಾ, ದ. ಕೊರಿಯಾವಲ್ಲದೇ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ರಾಜ್ಯಗಳಿಂದ ಸ್ಕೌಟ್ಸ್, ಗೈಡ್ಸ್, ರೇಂಜರ್, ರೋವರ್ ಹಾಗೂ ದಕ್ಷಿಣ ರೈಲ್ವೇ ಪ್ರತಿನಿಧಿಗಳು ಭಾಗಿ.
ಜಾಂಬೂರಿಯ ವಿಶೇಷತೆಗಳು
35 ಸಾಹಸಮಯ ಕ್ರೀಡೆಗಳು, ಜಂಗಲ್ ಟ್ರಯಲ್, 168 ಕಿ.ಮೀ ಸ್ವಚ್ಛತಾ ಕಾರ್ಯ, ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ಆಹಾರ ಮಳಿಗೆಗಳು ಸೇರಿದಂತೆ 1000ಕ್ಕೂ ಮಿಕ್ಕಿ ವೈವಿಧ್ಯಮಯ ಮಳಿಗೆಗಳು.
ಹೊರೆಕಾಣಿಕೆ
ಮೂಲ್ಕಿ, ಕಿನ್ನಿಗೋಳಿ, ಬಜಪೆ, ಬಂಟ್ವಾಳ, ಬಿಸಿರೋಡು, ಉಳ್ಳಾಲ, ಬೆಳ್ತಂಗಡಿ, ಉಡುಪಿ, ಕೊಡಗು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಕ್ಕಿ, ತೆಂಗಿನಕಾಯಿ ತರಕಾರಿಗಳು, ಸಕ್ಕರೆ ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ಬೃಹತ್ ಹೊರೆಕಾಣಿಕೆ ಹರಿದುಬರುತ್ತಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಊಟೋಪಚಾರ ಉಚಿತವಾಗಿದೆ.
ಪಂಚ ಮೇಳಗಳು
ಕೃಷಿ ಮೇಳ: 12 ಎಕ್ರೆ ಕೃಷಿ ಲೋಕ ದಲ್ಲಿ 4 ಎಕ್ರೆ ತರಕಾರಿ ಸೊಬಗು
ವಿಜ್ಞಾನ ಮೇಳ: ವಿಜ್ಞಾನ ಮಾದರಿಗಳ ಪ್ರದರ್ಶನ, ವೈಜ್ಞಾ ನಿಕ ಆಟಿಕೆ ಪ್ರದರ್ಶನ ಇತ್ಯಾದಿ.
ಪುಸ್ತಕ ಮೇಳ: ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಪುಸ್ತಕಗಳ ಪ್ರದರ್ಶನ.
ಕಲಾಮೇಳ: ಕಲಾವಿದರ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ, ಛಾಯಾಚಿತ್ರಗಳ ಪ್ರದರ್ಶನ.
ಆಹಾರ ಮೇಳ:ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳು, ಹಣ್ಣುಹಂಪಲುಗಳ ಪ್ರದರ್ಶನ.
ಜಾಂಬೂರಿ: ವಿಶೇಷ ಬಸ್ ಸೌಲಭ್ಯ
ಜಾಂಬೂರಿಗೆ ವಿವಿಧ ರಾಜ್ಯಗಳಿಂದ ತಂಡೋಪ ತಂಡವಾಗಿ ಜನರು ಮೂಡುಬಿದಿರೆಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರು ರೈಲು ನಿಲ್ದಾಣದಿಂದ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ಗೆ ಕೆಎಸ್ಸಾರ್ಟಿಸಿಯ 40ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಿಸಿವೆ. ಬುಧವಾರವೂ ವಿಶೇಷ ಕಾರ್ಯಾಚರಣೆ ಮುಂದುವರಿ ಯಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.