ಮಂಗಳೂರಿನಲ್ಲಿದೆ ಪಾರಂಪರಿಕ ವಸ್ತು ಸಂಗ್ರಹಾಲಯ
Team Udayavani, Apr 18, 2019, 6:05 AM IST
ಶ್ರೀಮತಿಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯ ಕಟ್ಟಡ.
ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸಿ ಅಮೂಲ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಗತ್ತಿನಾದ್ಯಂತ ಇಂದು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತಿದೆ.
ಕರಾವಳಿಯ ಸಂಸ್ಕೃತಿಯೇ ಭಿನ್ನ. ಅಷ್ಟೇ ಅಲ್ಲ ಇಲ್ಲಿನ ಐತಿಹಾಸಿಕ ಪರಂಪರೆಗೆ ಭವ್ಯ ಇತಿಹಾಸವಿದೆ. ಮುಂದಿನ ಪೀಳಿಗೆಗೆ ಇದನ್ನು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲೂ ಇದೆ. ಕರಾವಳಿಯ ಐತಿಹಾಸಿಕ ಸ್ಮಾರಕಗಳು, ಪರಂಪರೆ ರಕ್ಷಿಸಿ, ಮುಂದಿನ ಪೀಳಿಗೆಗೆ ತೋರಿಸುವ ಬಹುದೊಡ್ಡ ವಸ್ತು ಸಂಗ್ರಹಾಲಯವೂ ಮಂಗಳೂರಿನಲ್ಲಿದೆ.
ನಗರದ ಬಿಜೈ ಬಳಿಕ ಕದ್ರಿ ಮಾರುಕಟ್ಟೆಯಿಂದ ನಂತೂರಿನ ತೆರಳುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಕ್ರಮಿಸಿದರೆ, ಎಡ ಭಾಗದಲ್ಲಿಯೇ ಶ್ರೀಮತಿಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯ ಮತ್ತು ಪುರಾತಣ್ತೀ ಇಲಾಖೆ ಇದೆ. ಇದರಲ್ಲಿ ಅಪರೂಪದ ಪ್ರಾಚೀನ ವಸ್ತುಗಳ ಸಂಗ್ರಹವಿದ್ದು, ಪ್ರವಾಸಿಗರ ಮತ್ತು ಸಂಶೋಧಕರ ಗಮನ ಸೆಳೆಯುತ್ತಿದೆ.
ಈ ವಸ್ತು ಸಂಗ್ರಹಾಲಯವು ಪ್ರಾಚೀನ ಪರಂಪರೆಯನ್ನು ನೆನಪಿಸುವಂತಿದೆ. ಸಂಗ್ರಹಾಲಯದ ಹೊರಗೆ ಹಳೆ ಕಾಲದ ಶಾಸನಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು, ಅಧ್ಯಯನಕ್ಕೆ ಪೂರಕವಾಗುವಂತಿದೆ. ಅಂದಹಾಗೆ, ಈ ಮ್ಯೂಸಿಯಂ ಸ್ಥಾಪನೆಯಾಗಿದ್ದು 1960ನೇ ಇಸವಿಯಲ್ಲಿ.
ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಸೇನಾ ವೈದ್ಯರಾಗಿದ್ದ ಮಿರಾಜRರ್ ಈ ಮ್ಯೂಸಿಯಂ ಅನ್ನು ಸ್ಥಾಪಿಸಿದರು. ತನ್ನ ತಾಯಿ ಶ್ರೀಮಂತಿಬಾಯಿ ಅವರ ಸವಿ ನೆನಪಿಗಾಗಿ 1960ರಲ್ಲಿ ಬಿಜೈನಲ್ಲಿ ಗುಡ್ಡ ಪ್ರದೇಶದಲ್ಲಿ ಈ ಮ್ಯೂಸಿಯಂ ಸ್ಥಾಪನೆ ಮಾಡಲಾಯಿತು. ಈ ಮ್ಯೂಸಿಯಂನಲ್ಲಿ ಪ್ರಾಚೀನ ಕಾಲದ ಅನೇಕ ವಸ್ತುಗಳು ಇವೆ. ಅದರಲ್ಲಿಯೂ ರಾಮಾಯಣ, ಮಹಾಭಾರತದ ತಾಳೆಗರಿಗಳು, ಪ್ರಾಚೀನ ಇತಿಹಾಸವನ್ನು ಸಾರುವಂತಹ ಶಾಸನಗಳು ಇಲ್ಲಿವೆ. ರಾಮ ಸೀತೆಯರ ವಿಗ್ರಹ, ಚೋಳರು, ಅಳುಪರು, ಹೊಯ್ಸಳರ ಕಾಲದ ಆಯುಧಗಳು, ಶಿಲಾಯುಗದಲ್ಲಿ ಬಳಕೆ ಮಾಡುತ್ತಿದ್ದಂತಹ ಪರಿಕರಗಳು, ದೇಶ ನಾಯಕರ ಅಪರೂಪದ ಚಿತ್ರಗಳು, 2ನೇ ಮಹಾಯುದ್ಧದ ಸಮಯದಲ್ಲಿನ ಅಪರೂಪದ ದಾಖಲೆಗಳು ಸೇರಿದಂತೆ ಅಪರೂಪದ ಸಂಗ್ರಹ ಈ ಮ್ಯೂಸಿಯಂನಲ್ಲಿದೆ.
ಪುರಾತನ ಕಟ್ಟಡ
ಪ್ರಾಚ್ಯ ವಸ್ತು ಸಂಗ್ರಹಾಲಯವು ಮಂಗಳೂರು ನಗರದ ಪ್ರಮುಖ ವಸ್ತು ಸಂಗ್ರಹಾಲಯವಾಗಿದೆ. ಬಿಜೈನ ಗುಡ್ಡ ಪ್ರದೇಶದಲ್ಲಿರುವ ಈ ಕಟ್ಟಡವು ಅತ್ಯಂತ ಹಳೆಯ ಕಟ್ಟಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಆದರೆ, ಇಲ್ಲೊಂದು ಅದ್ಬುತ ಮ್ಯೂಸಿಯಂ ಇದೆ ಎನ್ನುವುದು ಅನೇಕ ಮಂದಿಗೆ ತಿಳಿದಿಲ್ಲ. ಈ ಮ್ಯೂಸಿಯಂಗೆ ಮತ್ತಷ್ಟು ಮೂಲಸೌಕರ್ಯಗಳನ್ನು ಒದಗಿಸಿದರೆ, ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವುದರಲ್ಲಿ ಸಂಶಯವಿಲ್ಲ.
ಸಾಂಸ್ಕೃತಿಕ ಪರಂಪರೆ ಸರಂಕ್ಷಣೆಗೆ ಜಾಗೃತಿ
ಅಮೂಲ್ಯ ಸಂಪತ್ತನ್ನು ಉಳಿಸುವ ಉದ್ದೇಶದಿಂದ ವಿಶ್ವದಾದ್ಯಂತ ಎ. 18ರಂದು ವಿಶ್ವ ಪಾರಂಪರಿಕ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮಹತ್ವ. 1982ರ ಎ.18ರಂದು ಮೊದಲ ಬಾರಿಗೆ ಟುನಿಷಿಯಾದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಸ್ಮಾರಕ ಮತ್ತು ಸೈಟ್ ಮಂಡಳಿ ಮೂಲಕ ವಿಶ್ವ ಪರಂಪರೆ ದಿನವನ್ನು ಆಚರಿಸಲಾಯಿತು. ಬಳಿಕ ಯುನೆಸ್ಕೋ 1983ರಲ್ಲಿ ಇದನ್ನು ಅಂಗೀಕರಿಸಿದರು. ಈಗ ವಿಶ್ವದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ.
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.