ಫೇಸ್‌ಬುಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಮಾಫಿಯಾ ಶಂಕೆ
Team Udayavani, Jul 5, 2017, 3:45 AM IST
ಬೆಳ್ತಂಗಡಿ: ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಮಾಫಿಯಾ ಈಗ ಫೇಸ್‌ಬುಕ್ ಮೂಲಕ ನಡೆಯುತ್ತಿದೆ ಎಂಬ ಗುಮಾನಿ ಇದೆ. ಅಮಾಯಕರನ್ನು ಈ ಜಾಲದಲ್ಲಿ ಸಿಲುಕಿಸುವ ಮೂಲಕ ಮಾದಕ ವಸ್ತುಗಳ ಮಾಫಿಯಾ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಒಂದು ಕಂಪನಿಗೆ ನೀವು ಕೆಲಸ ಮಾಡಬೇಕಿದೆ. ನಮ್ಮ ಕಂಪೆನಿ ಒಂದು ಪ್ರಾಡಕ್ಟ್ ಬಾಂಗ್ಲಾದೇಶದಿಂದ ಕೊಂಡುಕೊಳ್ಳುತ್ತಿತ್ತು. ಈಗ ಆ ವಸ್ತುಗಳು ಭಾರತದಲ್ಲಿ ಲಭ್ಯವಿದೆ.ಆ ವಸ್ತುಗಳನ್ನು ನಮಗೆ ತಲುಪಿಸುವ ಕೆಲಸ ಮಾಡಿ, ನೀವು ಮಧ್ಯವರ್ತಿಗಳಾಕೈತುಂಬಾ ಹಣ ಸಿಗುತ್ತದೆ ಎಂಬ ಮೆಸೇಜ್‌ಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಹಣ ದೊರೆಯುವ ಆಸೆಯಿಂದ ಈ ಮೆಸೇಜ್‌ಗಳಿಗೆ ಉತ್ತರ ನೀಡಿ ಅವರು ಹೇಳಿದ ಕೆಲಸ ಮಾಡಲು ಹೋದರೆ ಅರಿವಿಲ್ಲದಂತೆ ಡ್ರಗ್ ಮಾಫಿಯಾಗೆ ನಾವು ತೊಡಗಿಸಿಕೊಂಡಂತಾಗಲೂಬಹುದು.
ಹೇಗೆ ನಡೀತಿದೆ ಈ ಮಾಫಿಯಾ
ಫೇಸ್ಬುಕ್‌ನಲ್ಲಿ ಮಹಿಳೆಯೊಬ್ಬಳು ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ. ಬಳಿಕ ಮಹಿಳೆಯು ತನ್ನ ಬಗ್ಗೆ ಹೇಳಿಕೊಳ್ಳುವ ಮೆಸೇಜ್ ಮಾಡುತ್ತಾಳೆ. ರಿಕ್ವೆಸ್ಟ್ ಒಪ್ಪಿಗೆಯಾದ ಮೇಲೆ ಲೋಕಾಭಿರಾಮ ಮಾತು ಆಡುತ್ತಾಳೆ. ಕೆಲಸ ನೀಡುತ್ತೇವೆ ಕೈ ತುಂಬಾ ಸಂಬಳ ಇದೆ. ಮಧ್ಯವರ್ತಿಯಾಗಿ ಒಂದು ಕಾರ್ಖಾನೆಗೆ ಸಂಬಂಧಿತ ಕಚ್ಚಾವಸ್ತು ತಲುಪಿಸುವ ಕೆಲಸ ಮಾಡಿದರೆ ಸಾಕು ಎಂದು ಹೇಳಿ, ಒಂದು ವೇಳೆ ಕೆಲಸಕ್ಕೆ ನಾವು ಒಪ್ಪಿಕೊಂಡರೆ ಸುಲಭ ಸಂವಹನಕ್ಕಾಗಿ ಮಹಿಳೆಯನ್ನು ಎದುರಿಟ್ಟುಕೊಂಡ ಮೆಸೇಜ್ ಮಾಡುವ ಆ ಗುಂಪು ಮೊಬೈಲ್ ನಂಬರ್ ಪಡೆಯುತ್ತದೆ. ಬಳಿಕ ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳುಹಿಸಲಾಗುತ್ತದೆ.
ವಾಟ್ಸಾಪ್‌ನಲ್ಲಿ ಮಾತುಕತೆ
ಒಮ್ಮೆ ವಾಟ್ಸಾಪ್ ಮೂಲಕ ಸಂಪರ್ಕ ದೊರೆತ ಮೇಲೆ ಮೆಸೇಜ್ ಕಳುಹಿಸುವ ಅವರು ಅವರ ಕಂಪೆನಿ ಮತ್ತು ಅದರ ನಿಯಮ ತಿಳಿಸಿ ಡೀಲ್ ವಿಷಯ ಮಾತನಾಡುತ್ತಾರೆ. ಜತೆಗೆ ಮನೆಯ ವಿಳಾಸವನ್ನು ಪಡೆದುಕೊಳ್ಳುತ್ತಾರೆ. 400-500 ಗ್ರಾಂ.ನ ಚಿಕ್ಕ ಪೊಟ್ಟಣವನ್ನು ಭಾರತದಲ್ಲಿರುವ ಅವರ ಏಜೆಂಟರಿಂದ ಮತ್ತೂಬ್ಬರಿಗೆ ತಲುಪಿಸಬೇಕಾಗಿರುವುದುಅವರು ನೀಡುವ ಕೆಲಸ. ಇದಕ್ಕೆ ಸಹಸ್ರಾರು ಡಾಲರ್ ರೂಪದಲ್ಲಿ ಸಂಭಾವನೆ ಕೊಡುತ್ತಾರೆ. ಅವರ ಕಂಪೆನಿಯ ಏಜೆಂಟರು ನೀಡುವ ವಸ್ತುವನ್ನು ಪಡೆದು ಅವರು ಹೇಳಿದ ಪ್ರದೇಶಕ್ಕೆ ತಲುಪಿಸುವ ಕಾರ್ಯ ಮಾಡಿದರೆ ಸಾಕು ಎಂದು ತಿಳಿಸುತ್ತಾರೆ.
ಹಂದಿ ನಾಯಿಗೆ ಬಳಸುವ ಔಷಧವಂತೆ
ಅವರು ಒದಗಿಸುವ ಕಚ್ಛಾ ವಸ್ತುಗಳು ಹಂದಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ತಯಾರಿಸುವ ಔಷಧಕ್ಕೆ ಉಪಯೋಗಿಸುವುದು ಎಂದು ತಿಳಿಸುತ್ತಾರೆ. ಈ ಕಚ್ಛಾ ವಸ್ತುವಿನ ವಿವರ ಕೇಳಿದ್ದಕೆ ಅದು ಸಸ್ಯಜನ್ಯ ಕಚ್ಛಾ ವಸ್ತು ಎಂದು ಉತ್ತರಿಸುತ್ತಾರೆ. ಅಷ್ಟಕ್ಕೂ ಅವನ್ನೆಲ್ಲ ಈ ರೀತಿಯಾಗಿ ಯಾಕೆ ಸಾಗಿಸುವ ಪ್ರಯತ್ನ ಮಾಡಬೇಕು ಎಂಬ ಪ್ರಶ್ನೆ ಮೂಡಿದರೆ ಡ್ರಗ್ ಮಾಫಿಯಾ ಎಂಬ ಸಂಶಯ ಕಾಡುತ್ತದೆ. ಏಕೆಂದರೆ ಅಧಿಕೃತವಾಗಿ ಕಳುಹಿಸಬಹುದಾದ ಔಷಧಿಗೆ ಇಂತಹ ಅಡ್ಡದಾರಿ ಏಕೆ.
ಹಣದ ಆಸೆಗೆ ಖೆಡ್ಡಾಗೆ ಬೀಳದಿರಿ
ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಹಣ ಸಿಗುತ್ತದೆ ಎಂದು ಹೇಳಿದ ತತ್‌ಕ್ಷಣ ಹಿಂದೆ ಮುಂದೆ ಯೋಚಿಸದೆ ಅವರು ಹೇಳುವ ಕೆಲಸಕ್ಕೆ ತೊಡಗಿಕೊಂಡರೆ ಅಪಾಯದ ಜಾಲದಲ್ಲಿ ಸಿಲುಕಿಕೊಂಡಿರಿ ಎಂದೇ ಅರ್ಥ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.