ಲೇಡಿಹಿಲ್ ವೃತ್ತದಿಂದ ಕೆನರಾ ಪ್ರೌಢಶಾಲೆ: ರಸ್ತೆಯಲ್ಲಿ ಸಾವಿರದ ಇನ್ನೂರು ಮಂದಿಯಿಂದ ಯೋಗ
ನಗರದ ವಿವಿಧೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Team Udayavani, Jun 22, 2019, 5:00 AM IST
ಲಾಲ್ಬಾಗ್: ಎಸ್ಪಿವೈಎಸ್ಎಸ್ ಹಾಗೂ ಪತಂಜಲಿ ಯೋಗ ಪೀಠ ಹರಿದ್ವಾರ ಇವುಗಳ ನೇತೃತ್ವದಲ್ಲಿ ವಿವಿಧ ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಯೋಗ ಜಾಗೃತಿ ಕಾರ್ಯಕ್ರಮವು ಮಂಗಳಾ ಕ್ರೀಡಾಂಗಣ ಮುಂಭಾಗದ ಲೇಡಿಹಿಲ್ ವೃತ್ತದಿಂದ ಕೆನರಾ ಪ್ರೌಢಶಾಲೆವರೆಗಿನ ರಸ್ತೆಯಲ್ಲಿ ನಡೆಯಿತು. 1,200ಕ್ಕಿಂತಲೂ ಹೆಚ್ಚು ಯೋಗ ಬಂಧುಗಳು, ಸಾರ್ವಜನಿಕರು ಭಾಗವಹಿಸಿದರು.
ಮುಂಜಾನೆ 5ರಿಂದ 6.30ರ ವರೆಗೆ ಕಾರ್ಯಕ್ರಮ ಜರಗಿತು. ಭಜನೆ, ಅಗ್ನಿಹೋತ್ರ, ಅಮೃತವಚನ, ಪಂಚಾಂಗ ಪಠನದೊಂದಿಗೆ ಆರಂಭವಾಗಿ ಯೋಗಾಸನ, ಪ್ರಾಣಾಯಾಮ, ಸಂಕಲ್ಪದೊಂದಿಗೆ ನೆರವೇರಿತು. ಕೇಂದ್ರ ಸರಕಾರದ ಆಯುಷ್ ಇಲಾಖೆಯ ಪಠ್ಯಕ್ರಮದಂತೆ ಜಿಲ್ಲಾ ಶಿಕ್ಷಣ ಪ್ರಮುಖರಾದ ಆರ್.ಜಿ. ಬಿರಾದಾರ್ ಆಸನಗಳನ್ನು ಹೇಳಿಕೊಟ್ಟರು. ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಡಾ| ಜ್ಞಾನೇಶ್ವರ ನಾಯಕ್ ಪ್ರಾಣಾಯಾಮದೊಂದಿಗೆ ಸಂಕಲ್ಪವನ್ನು ನಡೆಸಿಕೊಟ್ಟರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ಸಿನೆಮಾ ನಟ ರೂಪೇಶ್ ಶೆಟ್ಟಿ , ನಟಿ ತನುಜಾ ಪವಾರ್ ಯೋಗ ಜ್ಯೋತಿಯನ್ನು ಬೆಳಗಿಸಿದರು. ಲೇಡಿ ಹಿಲ್ ಪೊಂಪೈ ಮಾತಾ ಚರ್ಚ್ನ ಧರ್ಮ ಗುರು ಸ್ಟಾನಿ ಪಿರೇರಾ, ಡಿಸಿಪಿ ಹನುಮಂತರಾಯ, ಜಿಲ್ಲಾ ಸಂಚಾಲಕ ಗೋಕುಲನಾಥ್ ಶೆಣೈ, ಪ್ರಾಂತ ಸೇವಾ ಪ್ರಮುಖ ಶಿವಾನಂದ ರೈ, ನೇತ್ರಾವತಿ ವಲಯ ಸಂಚಾಲಕ ಹರೀಶ್ ಕೋಟ್ಯಾನ್, ಕಾರ್ಯಕ್ರಮ ಸಂಚಾಲಕ ಅಶೋಕ್ ಜೈನ್ ಉಪಸ್ಥಿತರಿದ್ದರು. ಜಗದೀಶ್ ಶೆಟ್ಟಿ ವಂದಿಸಿದರು. ಸಮಿತಿಯ ದಯಾನಂದ ಕಟೀಲು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.