ಮಾತಿನ ಮತ, ಸಂದರ್ಶನ
Team Udayavani, Mar 22, 2018, 12:51 PM IST
ಪಾಳೇಗಾರಿಕೆ, ಸರ್ವಾಧಿಕಾರಿ ಆಡಳಿತದಿಂದ ಜನ ಬೇಸತ್ತಿದ್ದಾರೆ
ಬಿಜೆಪಿಯ ಮೂಡಬಿದಿರೆ ಕ್ಷೇತ್ರ ಉಸ್ತುವಾರಿಯಾಗಿರುವ ಬಾಲಕೃಷ್ಣ ಶೆಟ್ಟಿ ಅವರು ಕೃಷಿಕ. ತಾಳ್ಮೆಯ ವ್ಯಕ್ತಿತ್ವ. ಸಂಘಟನೆಯಲ್ಲಿ ಕುಶಲಿಗ. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರು. ಬೆಳ್ತಂಗಡಿ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷರು. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಅವರು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾಗಿದ್ದಾಗ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್ ತಂದುಕೊಟ್ಟವರು. ಸಾರ್ವಜನಿಕ ಸೇವಾ ಸಂಘಟನೆಗಳಲ್ಲಿ ಸಕ್ರಿಯರು. ರಾಮಕೃಷ್ಣ ಸೇವಾ ಸಮಿತಿ ಸ್ಥಾಪಕಾಧ್ಯಕ್ಷರಾಗಿ 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಚುನಾವಣೆಯ ತಯಾರಿ ಬಗ್ಗೆ ‘ಉದಯವಾಣಿ’ಯೊಂದಿಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ…
ಚುನಾವಣೆಗೆ ಹೇಗೆ ತಯಾರಿ ನಡೆದಿದೆ?
ನಮ್ಮ ಶಕ್ತಿ ಕೇಂದ್ರಗಳ ಸಂಖ್ಯೆಯನ್ನು 50ರ ವರೆಗೆ ಹೆಚ್ಚಿಸಿದ್ದೇವೆ. ಸದಸ್ಯತ್ವವನ್ನು ವೃದ್ಧಿಸಿದ್ದೇವೆ. ಕಾರ್ಯಕರ್ತರನ್ನು ಬೂತ್ ಮಟ್ಟಕ್ಕೆ ಕಳುಹಿಸಿ ಕೆಲಸ ನಿರ್ವಹಿಸಲು ಸನ್ನದ್ಧರಾಗುವಂತೆ ಮಾಡುತ್ತಿದ್ದೇವೆ. ಒಟ್ಟಿನಲ್ಲಿ ತಳಮಟ್ಟದಿಂದ ನಮ್ಮ ಕೆಲಸ ನಡೆಯುತ್ತ ಇದೆ.
ಅಭ್ಯರ್ಥಿಯ ಆಯ್ಕೆ ಯಾವ ಹಂತದಲ್ಲಿದೆ? ಪಟ್ಟಿ ಬಿಡುಗಡೆ?
ಅಭ್ಯರ್ಥಿಯ ಆಯ್ಕೆ ಈ ತನಕ ಅಂತಿಮ ನಿಷ್ಕರ್ಷೆ ಆಗಿಲ್ಲ. ಪಟ್ಟಿ ಬಿಡುಗಡೆಯ ದಿನಾಂಕ ಇನ್ನೂ ನಿಶ್ಚಯವಾಗಿಲ್ಲ. ನಮ್ಮ ಚಿಹ್ನೆ-ನಮ್ಮ ಅಭ್ಯರ್ಥಿ.
ಯಾವ ಅಂಶಗಳಿಗೆ ಈ ಬಾರಿ ಒತ್ತು ನೀಡಲಾಗುತ್ತಿದೆ?
ರಾಜ್ಯ ಸರಕಾರದ ಹಿಂದೂ ವಿರೋಧಿ, ರೈತ ವಿರೋಧಿ ನೀತಿಯನ್ನು ಪ್ರಮುಖವಾಗಿ ಎತ್ತಲಾಗುವುದು. ಹಿಂದೂಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ಉಂಟಾಗಿದೆ. ಇದನ್ನು ಬಿಜೆಪಿ ಕಳವಳದಿಂದ ನೋಡುತ್ತಿದೆ ಮತ್ತು ವಿರೋಧಿಸುತ್ತಿದೆ.
ಹಿಂದೂಯೇತರರನ್ನು ಸೆಳೆಯಲು ಏನು ಮಾಡಲಾಗುತ್ತಿದೆ?
ಯಡಿಯೂರಪ್ಪ ಸರಕಾರ ಇದ್ದಾಗ ಅಲ್ಪಸಂಖ್ಯಾಕರಿಗೆ ಬಹಳಷ್ಟು ಕೊಡುಗೆ ನೀಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ. ಹಾಗಾಗಿ ಹಿಂದೂಯೇತರರೂ ನಮ್ಮನ್ನು ಬೆಂಬಲಿಸುವರು ಎಂಬ ವಿಶ್ವಾಸವಿದೆ.
ಕಳೆದ ಚುನಾವಣೆಯಲ್ಲಿ 4,000 ಮತಗಳ ಅಂತರದಿಂದ ಸೋಲಾಗಿದೆ, ಈ ಬಾರಿ ಯಾವ ನಿರೀಕ್ಷೆ ಇದೆ?
ಕಳೆದ ಚುನಾವಣೆಯ ಬಳಿಕ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ನಾವು ನಮ್ಮ ಶಕ್ತಿಯನ್ನು ವೃದ್ಧಿಸಿರುವಂತೆಯೇ ಇಲ್ಲಿ ಪಾಳೇಗಾರಿಕೆ, ಸರ್ವಾಧಿಕಾರಿ ಧೋರಣೆಯ ಆಡಳಿತ ಕಂಡುಬಂದಿದೆ. ಜನ ಬೇಸತ್ತಿದ್ದಾರೆ. ಹಾಗಾಗಿ ನಮ್ಮ ಗೆಲುವು ಖಂಡಿತ.
ಧನಂಜಯ ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.