ಮಾತಿನ ಮತ, ಸಂದರ್ಶನ
Team Udayavani, Mar 29, 2018, 2:07 PM IST
ಸುಳ್ಳು ಆರೋಪಕ್ಕೆ ಜನ ಉತ್ತರಿಸುತ್ತಾರೆ
ಕಳೆದ ಬಾರಿಯ ಸೋಲಿಗೆ ಕಾರಣ ಏನು?
ಮೂರು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪ್ರತಿ ಬಾರಿಯು ಸೋಲಿನ ಅಂತರ ಕಡಿಮೆ ಆಗಿದೆ. ಕಳೆದ ಬಾರಿ ಸೋಲಿಗೆ ಹೇಳಿಕೊಳ್ಳುವಂತಹ ನಕಾರಾತ್ಮಕ ಕಾರಣಗಳೇನೂ ಇಲ್ಲ. ಆದರೆ ಸಣ್ಣ ಅಂತರದಿಂದ ಸೋಲಾಗಿದೆ. ಮತದಾರರ ತೀರ್ಮಾನವನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ.
ವಿಪಕ್ಷ ಬಿಜೆಪಿಯನ್ನು ಎದುರಿಸುವಲ್ಲಿ ಎಡವಿದ್ದು ಸೋಲಿಗೆ ಕಾರಣವೇ?
ಬಿಜೆಪಿ ಆಡಳಿತದ ವೈಫಲ್ಯ ಮತದಾರರಿಗೆ ತಿಳಿದಿದೆ. ಕಳೆದ ಬಾರಿ ಅವರು ಸುಳ್ಳು ಪ್ರಚಾರ ಮಾಡಿದರು. ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿ ಕಾಂಗ್ರೆಸ್‌ಗಿದೆ. ಈ ಬಾರಿ
ಮತ್ತೆ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಮಾಹಿತಿ ಸಿಕ್ಕಿದೆ. ಸುಳ್ಳು ಆರೋಪಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ.
ಈ ಬಾರಿ ಮತ್ತೆ ಸ್ಪರ್ಧೆ ಮಾಡುತ್ತೀರಾ? ಟಿಕೇಟ್ ದೊರೆಯುವ ಸಾಧ್ಯತೆ ಇದೆಯೇ?
ಸ್ಪರ್ಧಿಸುವ ಇರಾದೆ ಇದ್ದು, ಟಿಕೇಟ್ ಸಿಗುವ ಬಗ್ಗೆ ವಿಶ್ವಾಸ ಇದೆ. ಕಳೆದ ಐದು ಅವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಆಗದಿರುವುದರಿಂದ ಜನರು ಬದಲಾವಣೆ ಬಯಸಿದ್ದಾರೆ. ಕಳೆದ ಬಾರಿ ಅಂತಹ ಅವಕಾಶ ಸಣ್ಣ ಅಂತರದಿಂದ ತಪ್ಪಿತ್ತು. ಈ ಬಾರಿ ಬದಲಾವಣೆ ಆಗುವುದು ನಿಶ್ಚಿತ. ಜನರು ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ.
ಪ್ರಚಾರ ಹೇಗೆ ಸಾಗಿದೆ?
ಮನೆ ಮನೆ ಭೇಟಿ, ಸಾಧನಾ ಸಮಾವೇಶದ ಮೂಲಕ ಈಗಾಗಲೇ ಪ್ರಚಾರ ಕಾರ್ಯವೇಗ ಪಡೆದಿದೆ. 48 ಗ್ರಾಮಗಳಲ್ಲಿಯು ಜನರನ್ನು ಭೇಟಿ ಮಾಡಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ ವಿಶ್ವಾಸ ಇದೆ. ಕಾರ್ಯಕರ್ತರು ರಾಜ್ಯ ಸರಕಾರದ ಸಾಧನೆ, ಬಿಜೆಪಿಯ ವೈಫಲ್ಯವನ್ನು ಜನರ ಮುಂದಿಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಕ್ಷೇತ್ರದಲ್ಲಿ ವೈಯಕ್ತಿಕವಾಗಿ ನಿಮ್ಮ ಸಾಧನೆ ಏನು?
ಈ ಹಿಂದಿನ ಚುನಾವಣೆಯಲ್ಲಿ ಸೋತಿದ್ದರೂ ಕ್ಷೇತ್ರದ ಸಂಪರ್ಕ ಕಳೆದುಕೊಂಡಿಲ್ಲ. ನಿರಂತರ ಓಡಾಟ ನಡೆಸಿದ್ದೇನೆ. ರಾಜ್ಯ ಸರಕಾರದಿಂದ 30 ಕೋಟಿ ರೂ. ವಿಶೇಷ ಅನುದಾನ ತರಿಸಿದ್ದೇನೆ. ಐದು ವರ್ಷದಲ್ಲಿ ಜನರು ಬೇಡಿಕೆ ಇಟ್ಟ ಪ್ರತಿ ಸಂದರ್ಭದಲ್ಲೂ ಭೇಟಿ ಮಾಡಿ ಸಮಸ್ಯೆ ಆಲಿಸಿದ್ದೇನೆ. ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
The Rise Of Ashoka: ಅಶೋಕನ ರಕ್ತಚರಿತೆ
Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ
Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.