ಮಾತಿನ ಮತ, ಸಂದರ್ಶನ:
Team Udayavani, Apr 5, 2018, 1:16 PM IST
ಪಕ್ಷ ನಿಷ್ಠೆಗೆ ವರಿಷ್ಠರಿಂದ ಗೌರವ
ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಏಕಾಯಿತು?
ತಾಲೂಕಿನಲ್ಲಿ ನಾರಾಯಣ ಗೌಡ ಅಧ್ಯಕ್ಷರಾಗಿದ್ದಾಗ ಜೆಡಿಎಸ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರು ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟನೆ ಮಾಡುತ್ತಿದ್ದರು. ಆ ಸಂದರ್ಭ ಪಕ್ಷವೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರ ನಿಧನದ ಬಳಿಕ ಪಕ್ಷವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ನಾಯಕ ಸಿಕ್ಕಿಲ್ಲ.
ತಾಲೂಕಿನಲ್ಲಿ ಜೆಡಿಎಸ್ ಮಂಕಾಗಲು ಏನು ಕಾರಣ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಾನು ಜಿ.ಪಂ. ಅಧ್ಯಕ್ಷೆಯಾಗಿದ್ದೆ. ಚಾಮುಂಡಿ ಉಪಚುನಾವಣೆ ಸಂದರ್ಭ ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರಿಂದ ನಾನು ಅವರ ಆದೇಶ ಪಾಲಿಸಬೇಕಾಯಿತು. ಆದರೆ ಬಳಿಕ ಈ ವಿಚಾರದಲ್ಲಿ ಪಕ್ಷದ ಒಳಗಿನವರೇ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಕಾರ್ಯಕರ್ತರ ದಾರಿ ತಪ್ಪಿಸುವ ಯತ್ನ ಮಾಡಿದರು. ತಾಲೂಕಿನ ಈಗಿನ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ಹೊಂದಾಣಿಕೆ ರಾಜಕೀಯ ಆರಂಭಿಸಿದ್ದರಿಂದ ಬಳಿಕ ಪಕ್ಷ ದುರ್ಬಲಗೊಂಡಿತು.
ತಾಲೂಕಿನಲ್ಲಿ ಪಕ್ಷದ ಸ್ಥಿತಿ; ನಿಮ್ಮ ಮುಂದಿನ ನಡೆ …?
ತಾಲೂಕಿನಲ್ಲಿ ಪಕ್ಷ ಅಸ್ತಿತ್ವ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಜತೆಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ನನಗೆ ಹೊಂದಾಣಿಕೆರಾಜಕೀಯ ತಿಳಿದಿಲ್ಲ. ಜೆಡಿಎಸ್ ರಾಷ್ಟ್ರಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಸೂಚನೆ ಪಾಲಿಸುತ್ತಿದ್ದೇವೆ. ತಾಲೂಕಿನಲ್ಲಿ ಜೆಡಿಎಸ್ ಸಂಘಟನಾತ್ಮಕವಾಗಿ ಏನೂ ಇಲ್ಲ ಎಂಬುದು ಸತ್ಯ.
ಮತ್ತೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಲಭಿಸಿದರೆ ?
ರಾಜ್ಯದಿಂದ ಆದೇಶ ಬಂದರೆ ಪಾಲಿಸಲಾಗುವುದು. ಅವರ ತೀರ್ಮಾನಕ್ಕೆ ಬದ್ಧ. ತಾಲೂಕು ಮುಖಂಡರು ಸರಿಯಿದ್ದಲ್ಲಿ ಪಕ್ಷ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯ. ಹಿಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನಗೆ ಮತ ಬಾರದಂತೆ ತಡೆಯಲು ಯತ್ನಿಸಿದ್ದರು. ಈ ಬಗ್ಗೆ ಈಗಲೂ ಬೇಸರವಿದೆ. ಹಿಂದಿನ ಚುನಾವಣೆಗೆ ಸ್ಪರ್ಧಿಸುವಾಗಲೇ ಬೆಳ್ತಂಗಡಿಯಲ್ಲಿ ಜೆಡಿಎಸ್ ಗೆಲುವು ಕಷ್ಟವೆಂದು ವರಿಷ್ಠರಿಗೆ ತಿಳಿಸಿದ್ದೆ. ಪಕ್ಷಕ್ಕೆ ನಿಷ್ಠೆ ತೋರಿದ್ದರಿಂದ ನನಗೇ ಸೀಟು ಲಭಿಸಿತು.
ತಾಲೂಕಿನಲ್ಲಿ ಪಕ್ಷ ಬಲಗೊಳ್ಳಲು ಏನು ಮಾಡಬೇಕಿದೆ?
ತಾಲೂಕಿನಲ್ಲಿ ಸಂಘಟನೆ ಕಷ್ಟ. ಈಗಾಗಲೇ ಕಾರ್ಯಕರ್ತರು ಚದುರಿದ್ದಾರೆ. ನಿರಂತರ ಸಂಪರ್ಕವೆಂಬುದು ಇಲ್ಲವಾಗಿದೆ. ಬೇರೆ ಪಕ್ಷಗಳಲ್ಲಿ ಸಭೆ -ಚರ್ಚೆ ನಡೆಯುತ್ತಿರುತ್ತದೆ. ಆದರೆ ತಾಲೂಕು ಜೆಡಿಎಸ್‌ನಲ್ಲಿ ಇಂತಹ ಯಾವುದೇ ಚಟುವಟಿಕೆ ಕಂಡುಬಂದಿಲ್ಲ. ಸಂಘಟನೆ ಮಾಡದಿದ್ದರೆ ಅನ್ಯ ಪಕ್ಷಗಳವರು ತಮ್ಮತ್ತ ಸೆಳೆಯುವ ಯತ್ನ ನಡೆಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.