ಮಾತಿನ ಮತ, ಸಂದರ್ಶನ
Team Udayavani, Apr 11, 2018, 12:02 PM IST
ಜನಪ್ರೀತಿ ನಿರಂತರ
ನೀವು ಈ ಬಾರಿಯೂ ಸ್ಪರ್ಧಾಕಾಂಕ್ಷಿಯೇ ?
ಹೌದು. ಟಿಕೆಟ್ ನೀಡಿದರೆ ಖಂಡಿತಾ ಸ್ಪರ್ಧಿಸುವೆ. ಶಾಸಕನಾಗಿ ಉತ್ತಮ ಆಡಳಿತ ನೀಡುವ ಆಶಯ ಹೊಂದಿದ್ದೇನೆ.
ಕಳೆದ ಸಲ ನೀವು 4,560 ಮತಗಳ ಅಂತರದಿಂದ ಪರಾಜಿತರಾಗಿದ್ದೀರಿ; ಈ ಬಾರಿ …?
ಎಷ್ಟು ಮತಗಳ ಅಂತರ ಎಂದು ಹೇಳಲಾರೆ; ಆದರೆ ಖಂಡಿತಾ ಗೆಲ್ಲುವೆ ಎನ್ನುವ ವಿಶ್ವಾಸ ಇದೆ.
ಗೆಲುವಿನ ನಿರೀಕ್ಷೆ ಯಾವ ಆಧಾರದಲ್ಲಿ ?
ಕಳೆದ ಸಲ ಸೋತಾಗ ನನ್ನ ಬಗ್ಗೆ ಬಹಳಷ್ಟು ಸಹಾನುಭೂತಿ ವ್ಯಕ್ತವಾಗಿತ್ತು. ಈಗಲೂ ಇದೆ. ಕ್ಷೇತ್ರದಲ್ಲೇ ಮನೆ ಮಾಡಿದ್ದೇನೆ. ಸೋತರೂ ನಿರಂತರವಾಗಿ ಪಕ್ಷದ ಕಾರ್ಯಕರ್ತರೊಂದಿಗೆ, ಜನರ ಕಷ್ಟ ಸುಖ ಅರಿತು, ಜಾತಿಮತ ಪಕ್ಷ ಭೇದವಿಲ್ಲದೆ ಜನರೊಂದಿಗೆ ಬೆರೆತು ಕೊಂಡು ಓಡಾಡುತ್ತಲೇ ಇದ್ದೇನೆ. ನೀವೇ ಸ್ಪರ್ಧಿಸಿದರೆ ಆದೀತು ಎನ್ನುವುದನ್ನು ಗಮನಿಸಿದ್ದೇನೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ಅತ್ಯಲ್ಪ ಅವಧಿಯಲ್ಲಿ ಜನರು ಗಮನಿಸುವಂಥ ಕೆಲಸಗಳನ್ನು ಮಾಡಿದ್ದೇನೆ. ಇದೇ ರೀತಿ ರಾಜಕೀಯರಂಗದಲ್ಲೂ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ. ಪಕ್ಷವೂ ಸಾಕಷ್ಟು ಬೆಳೆದಿದೆ. ಗೆಲುವಿನ ಪಥದಲ್ಲಿದೆ.
‘ಹಿಂದುತ್ವ’ ಅಜೆಂಡಾದಿಂದ ಹಿಂದೂಯೇತರರ ಮತಗಳನ್ನು ಹೇಗೆ ಸೆಳೆಯಬಲ್ಲಿರಿ?
ನೋಡಿ, ಹಿಂದುತ್ವ ಎಂದರೆ ಈ ದೇಶದ ಸಂಸ್ಕೃತಿಯನ್ನು ಗೌರವಿಸಿ, ಅದರೊಂದಿಗೆ ಬದುಕುವುದೇ ಆಗಿದೆ. ಈ ದೇಶವನ್ನು ಪ್ರೀತಿಸುವವರೆಲ್ಲ ಹಿಂದೂಗಳೇ. ಇದನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ ಅವರೆಲ್ಲರ ಮತ ನಮಗೆ ಬಿದ್ದೇ ಬೀಳುತ್ತದೆ.
ನೀವು ಗೆದ್ದರೆ ನಿಮ್ಮ ಆದ್ಯತೆಗಳೇನು?
ನನೆಗುದಿಗೆ ಬಿದ್ದಿರುವ ಮೂಡಬಿದಿರೆಯ ಒಳಚರಂಡಿ, ಬೈಪಾಸ್ ಯೋಜನೆಗಳಿಗೆ ಚುರುಕು ಮುಟ್ಟಿಸುವುದು, ಕ್ಷೇತ್ರಾದ್ಯಂತ ಕುಡಿಯುವ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳುವುದು, ಆಸ್ಪತ್ರೆಗಳನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಿಸುವುದು ಪ್ರಮುಖ ಆದ್ಯತೆಗಳು.
ನಿಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಮನೆಯವರ ಸಹಕಾರ?
ಮನೆಯವರ ಸಹಕಾರ, ಸ್ಪಂದನದಿಂದಾ ಗಿಯೇ ನಾನು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯನಾಗಿರಲು ಸಾಧ್ಯವಾಗಿದೆ.
ಧನಂಜಯ ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.