‘ಕನ್ನಡ ಸಾಹಿತ್ಯವನ್ನು ಎಲ್ಲರಿಗೂ ಪರಿಚಯಿಸಿ’


Team Udayavani, Jan 10, 2018, 3:06 PM IST

10–Jan-16.jpg

ದುಗ್ಗಲಡ್ಕದಲ್ಲಿ ಜ. 13ರಂದು ನಡೆಯಲಿರುವ ಸುಳ್ಯ ತಾಲೂಕು 22ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ,
ಸುಳ್ಯ ತಾಲೂಕಿನ ಕಳಂಜ ತಂಟೆಪ್ಪಾಡಿ ನಿವಾಸಿ ವಸಂತ ಶೆಟ್ಟಿ ಬೆಳ್ಳಾರೆ ಹೊರನಾಡು ಕನ್ನಡಿಗನಾಗಿ ಕನ್ನಡ ಕಂಪನ್ನು ದಿಲ್ಲಿಯಲ್ಲೂ ಪಸರಿಸಿದವರು. ತುಳು, ಕನ್ನಡ ಭಾಷಾ ಸಂಘಟಕರಾಗಿ, ಸಾಹಿತಿಯಾಗಿ, ಪ್ರಕಾಶಕರಾಗಿಯೂ ಚಿರಪರಿಚಿತರು. ದಿಲ್ಲಿಯಲ್ಲಿ ಕನ್ನಡದ-
ಉಳಿವು ಮತ್ತು ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿ ದ್ದಾರೆ. ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ
ನೀಡಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

. ಸುಳ್ಯ ತಾಲೂಕು 22ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ಲಭಿಸಿದೆ, ಏನನ್ನಿಸುತ್ತದೆ?
ನಾನು ಹೊರನಾಡಿನಲ್ಲಿ ಕನ್ನಡದ ಕೆಲಸ ಮಾಡುತ್ತಿರುವವ. ಈ ಸಂದರ್ಭದಲ್ಲಿ ನನಗೆ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಕೊಳ್ಳಬೇಕೆಂಬ
ಕರೆ ಬಂದಿತ್ತು. ಆಗ ಅವರಿಗೆ, ಸುಳ್ಯದಲ್ಲಿ ತುಂಬಾ ಹಿರಿಯರಿದ್ದಾರೆ. ಸರ್ವಾನುಮತದ ಒಪ್ಪಿಗೆ ಇದ್ದರೆ ಬರುತ್ತೇನೆ ಎಂದಿದ್ದೆ. ಸರ್ವ ಸಮ್ಮತಿಯಿಂದಲೇ ಆಹ್ವಾನಿಸಿದ್ದೇವೆ ಎಂದರು. ಒಪ್ಪಿಕೊಂಡೆ. ಇದರ ಜತೆಗೆ ಹೊರನಾಡಿನಲ್ಲಿ ಕನ್ನಡದ ಸೇವೆ ಮಾಡಿದ್ದಕ್ಕೆ ಇದೊಂದು ಮನ್ನಣೆ ಎಂದು ಭಾವಿಸಿದ್ದೇನೆ.

. ಸಾಹಿತ್ಯ ಸಮ್ಮೇಳನಗಳ ಅಗತ್ಯ ಏನು?  ಸಮ್ಮೇಳನಗಳಿಂದ ಸಾಹಿತ್ಯಕ್ಕೇನಾದರೂ ಪ್ರಯೋಜನ ಇದೆಯೇ?
ಸಾಹಿತ್ಯ ಸಮ್ಮೇಳನಗಳು ಏಕೆ ನಡೆಯಬೇಕು ಅನ್ನುವುದಕ್ಕಿಂತಲೂ ಹೇಗೆ ನಡೆಯಬೇಕು ಎಂಬುವುದೇ ಇಲ್ಲಿ ಮುಖ್ಯವಾದ ಸಂಗತಿ. ಎಲ್ಲ ಬಗೆಯ ಸಮ್ಮೇಳನಗಳ ಉದ್ದೇಶ ಎಲ್ಲಿಗೆ ಮುಟ್ಟಬೇಕೋ ಅಲ್ಲಿಗೆ ತಲುಪುತ್ತಿಲ್ಲ. ಅದಕ್ಕೆ ಮಾಧ್ಯಮಗಳೂ ಕಾರಣ. ತಾಲೂಕು ಮಟ್ಟದಲ್ಲಿ ನಡೆದ ಸಮ್ಮೇಳನ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಚಾರ ಆಗದಿರುವುದರಿಂದ ಉದ್ದೇಶಗಳು ರಾಜ್ಯ, ಕೇಂದ್ರಕ್ಕೆ ತಲುಪುತ್ತಿಲ್ಲ ಹಾಗೂ ಹೆಚ್ಚಿನ ಸಮ್ಮೇಳನಗಳು ರಾಜಕೀಯ ಮತ್ತು ಊರಿನ ನಾಯಕತ್ವವನ್ನು ತೋರಿಸುವ ನೆಲೆಯಲ್ಲಿಯೇ ಪ್ರಕಟಗೊಳ್ಳುವುದು ಇದಕ್ಕೆ ಕಾರಣ.

ಆದರೆ ಸುಳ್ಯದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನೆಲೆಯಲ್ಲಿ ಅಲ್ಲಿನ ಸಂಘಟಕರಿಗೆ ಒಂದು ಮನವಿ ಮಾಡಿದ್ದೇನೆ. ಸಮ್ಮೇಳನಕ್ಕೆ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಬರುವಂತೆ ಮಾಡಬೇಕು. ಸಾಹಿತ್ಯ ಸಮ್ಮೇಳನದಂತಹ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮ ಅವರಲ್ಲಿ ಆಸಕ್ತಿ ಹುಟ್ಟಿಸಬೇಕು. ಇನ್ನೊಂದು ತಲೆಮಾರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದೆ ಬರಲು ಇದು ಪ್ರೇರಣೆ ನೀಡಬೇಕು. 

ಕನ್ನಡದಲ್ಲಿ ಪಂಡಿತ ಪರಂಪರೆಯ ಬರೆಹಗಾರರ ಪೀಳಿಗೆ ಕೊನೆಯಾಗುತ್ತಿದೆಯೇ?
ಪಂಡಿತ ಪರಂಪರೆ ಅನ್ನುವುದಕ್ಕಿಂತಲೂ ಹಿರಿಯ ತಲೆಮಾರಿನ, ಸಮಾಜಕ್ಕಾಗಿ ಯೋಚಿಸುತ್ತಿದ್ದ, ಗಟ್ಟಿ ನೆಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಸಾಹಿತಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸ್ವಲ್ಪ ಮಟ್ಟಿಗೆ ಸತ್ಯ. ಹೊಸ ತಲೆಮಾರಿನಲ್ಲೂ ಉದಯೋನ್ಮುಖ ಸಾಹಿತಿಗಳು ಬರುತ್ತಿದ್ದಾರೆ. ಅವರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಹೊಸ ತಲೆಮಾರು ಬರಬೇಕು ಎಂದಾದರೆ, ಹಳೆ ತಲೆಮಾರಿನವರು ಅವರನ್ನು ಮೇಲಕ್ಕೆತ್ತಬೇಕು.

ಸಾಹಿತಿಗಳಲ್ಲಿ ಅನೇಕ ವರ್ಗ ಇವೆಯಲ್ಲ?
ಪರಂಪರೆ, ಬಂಡಾಯ ಇನ್ನಿತರ ಪ್ರಕಾರಗಳು ಇವೆ. ನಾನಂತೂ ಇದನ್ನು ಒಪ್ಪಿಕೊಳ್ಳುವುದಿಲ್ಲ. ಇವೆಲ್ಲವೂ ಇರಬಾರದು ಎನ್ನುವವನು ನಾನು. ಯಾವುದು ಬರೆದರೂ ಸಾಹಿತ್ಯ. ನಾನು ಸಂಕ್ರಮಣವನ್ನು ಓದುತ್ತೇನೆ. ವಿಕ್ರಮವನ್ನೂ ಓದುತ್ತೇನೆ. ಇವೆರಡರಲ್ಲಿ ಸಮಾಜಕ್ಕೆ ಏನು ಒಳಿತಿದೆ? ನಾನು ಏನನ್ನು ಪಡೆದುಕೊಳ್ಳಬಹುದು ಅದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾವು ಇಂತಹ ವರ್ಗದವರೂ ಎಂದು ಹೇಳಿ ಗೊಂದಲ ಸೃಷ್ಟಿಸದೆ, ಎಲ್ಲ ಸಾಹಿತಿಗಳು ಒಂದಾಗಿರಬೇಕು. ಹಾಗಾಗಿ ಪ್ರಕಾರ ಸಾಹಿತ್ಯದಿಂದ ದೂರ ಇರಬೇಕು ಅನ್ನುವುದು ನನ್ನ ನಿಲುವು.

ಸಾಹಿತಿಗಳಲ್ಲಿ ಅನೇಕರು ಶಿಕ್ಷಕರೂ ಆಗಿದ್ದಾರೆ. ಅವರಿಗೆ ನಿಮ್ಮ ಸಲಹೆ ಏನು?
ಸಾಹಿತಿಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿರುವುದೇ ಶಿಕ್ಷಕ ವರ್ಗ. ಶಿಕ್ಷಕರಲ್ಲದ ಸಾಹಿತಿಗಳಿಗೂ ಶಿಕ್ಷಕರೇ ಪ್ರೇರಕ ಶಕ್ತಿ. ಯಾವಾಗಲೂ ಸಾಹಿತಿ ಇನ್ನೊಬ್ಬ ಸಾಹಿತಿಯನ್ನು ಸೃಷ್ಟಿಸುವುದಿಲ್ಲ. ಬೇರೆ ಸಾಹಿತಿಗಳು ನಮಗೆ ಇಷ್ಟ ಇರಬಹುದು. ಅದನ್ನು ಸೃಷ್ಟಿ ಎನ್ನಲಾಗುವುದಿಲ್ಲ. ಸೃಷ್ಟಿ ಅನ್ನುವುದು ಶಿಕ್ಷಕರಿಂದಲೇ. ಓದುವ, ಬರೆಹಗಳಿಗೆ ಮೂಲತಃ ಪ್ರೇರಣೆ ನೀಡುವುದು ಶಿಕ್ಷಕರೇ. ಈಗ ಸಾಹಿತ್ಯ, ಸಂಘಟನೆಗಳಲ್ಲಿ ಭಾಗಿ ಆಗುವ ಶಿಕ್ಷಕರ ಪ್ರಮಾಣ ಕಡಿಮೆ ಇರಬಹುದು. ಈಗಿನ ಶೇ. 70 ಶಿಕ್ಷಕರಿಗೆ ಸಾಹಿತ್ಯ ಸಮ್ಮೇಳನದ ಸಂಪರ್ಕವೇ ಇರುವುದಿಲ್ಲ. ಈ ರೀತಿ ಆಗಬಾರದು.

ಈಗಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಒಲವಿಲ್ಲ ಎಂಬ ಮಾತಿದೆ.
ಇದಕ್ಕೆ ಈಗಿನ ಅಂಕ ಗಳಿಕೆ ಕೇಂದ್ರಿತ ಶಿಕ್ಷಣದ ವ್ಯವಸ್ಥೆಯೇ ಕಾರಣ. ಪೋಷಕರಿಗೂ ಮಕ್ಕಳು ಶೇ. 100 ಅಂಕ ಗಳಿಸಬೇಕೆಂಬ ಧಾವಂತ ಇರುತ್ತದೆ. ವಿದ್ಯಾರ್ಥಿಗೆ ಬೇರೆ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೂ, ಪೋಷಕರ ಒತ್ತಾಸೆ ಅದಕ್ಕೆ ಅಡ್ಡಿ ಆಗುತ್ತಿದೆ. ಬೆರಳೆಣಿಕೆಯ ಮಂದಿ ಮಾತ್ರ ತನ್ನಾಸೆಯ ದಾರಿ ಹಿಡಿಯುತ್ತಾರೆ.

ಇಂಗ್ಲಿಷ್‌ ಮಾಧ್ಯಮ ಶಿಕ್ಷಣದಿಂದ ಮಕ್ಕಳ ಸಾಹಿತ್ಯ ಆಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆಯೇ?
100ಕ್ಕೆ 100 ಒಪ್ಪುತ್ತೇನೆ. ದ.ಕ. ಜಿಲ್ಲೆಯ ಕೆಲವು ಶಾಲೆಗಳಿಗೆ ಅತಿಥಿಯಾಗಿ ಬಂದಿದ್ದೆ. ಅಲ್ಲಿ ವಾರ್ಷಿಕೋತ್ಸವ ಸಮಾರಂಭಕ್ಕೆ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಇಂಗ್ಲಿಷ್‌, ಹಿಂದಿ, ತಮಿಳಿನಲ್ಲಿ ನೃತ್ಯ ಮಾಡಿಸುತ್ತಾರೆ. ಪಿಯುಸಿ, ಡಿಗ್ರಿ ಓದುವ ವಿದ್ಯಾರ್ಥಿಗಳಿಗೆ ಇದು ಪರಿಣಾಮ ಬೀರದು. ಆದರೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಅನ್ಯ ಭಾಷೆಯಲ್ಲಿ ನೃತ್ಯ ಇತ್ಯಾದಿಗಳನ್ನು ಕಲಿಸಿದರೆ, ಅವರು ನಮ್ಮ ಮಾತೃ ಸಂಸ್ಕೃತಿ, ಸಾಹಿತ್ಯವನ್ನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಮಕ್ಕಳಿಗೆ ಮಣ್ಣಿನ ಭಾಷೆಯ ಬಗ್ಗೆ ಮನನ ಮಾಡಿದರೆ, ನಮ್ಮ ಸಂಸ್ಕೃತಿಯಲ್ಲಿ ಬೆಳೆಯಲು ಸಾಧ್ಯ. ಈಗಿನ ಮನಸ್ಥಿತಿ ಬದಲಾಗಬೇಕಿದೆ. ಇದನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದೇನೆ.

ಹೊರ ನಾಡಿನಲ್ಲಿ ಕನ್ನಡ ಕಂಪು ಹೇಗೆ ಪಸರಿಸಿದೆ?
ಹಿಂದೆ ದೆಹಲಿಗೆ ಬರಲು ಒಂದು ರೈಲು ಇತ್ತು. 56 ತಾಸು ಪ್ರಯಾಣಿಸಬೇಕಿತ್ತು. ಅದು ಕೆಲ ಬಾರಿ 76 ತಾಸು ಆದದ್ದೂ ಇದೆ. ದೆಹಲಿಗೆ ಹೋದರೆ ಊರಿಗೆ ಬರುವುದು ವರ್ಷಕ್ಕೊಮ್ಮೆ. ಆಗ ಇಲ್ಲಿ ತುಳು, ಕನ್ನಡ ಕಾರ್ಯಕ್ರಮ ಆಯೋಜಿಸುವುದಕ್ಕೆ ಅರ್ಥ ಇತ್ತು. ಈಗ ಮಧ್ಯಾಹ್ನ ದೂರವಾಣಿಯಲ್ಲಿ ಮಾತನಾಡಿದವನ ಜತೆ, ಸಂಜೆ ಮಂಗಳೂರಿನಲ್ಲಿ ಮುಖತಃ ಭೇಟಿ ಆಗುವಷ್ಟು ಬದಲಾವಣೆ ಕಂಡಿದೆ. ಊರಲ್ಲಿ ಯಕ್ಷಗಾನ ಇದ್ದರೆ ಇಲ್ಲಿಗೆ ಬಂದು ನೋಡಬಹುದು. ಈಗಿನ ಕಾಲಘಟ್ಟದಲ್ಲಿ ಆಗಬೇಕಾದ ಸಂಗತಿ ಅಂದರೆ, ಕನ್ನಡ ಸಾಹಿತ್ಯವನ್ನು ಕನ್ನಡೇತರರಿಗೆ ಪರಿಚಯಿಸುವ ಕೆಲಸ. ಅದು ಅತ್ಯಂತ ಅನಿವಾರ್ಯ ಮತ್ತು ಮಹತ್ವದ್ದು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.

ಸಾಹಿತ್ಯದಿಂದ ದ್ವೇಷ, ಅಪನಂಬಿಕೆಯ ಮನಸ್ಥಿತಿ ಹೋಗಲಾಡಿಸಬಹುದೇ?
ರಾಜಕೀಯದಲ್ಲಿ ಇದ್ದ ಹಾಗೆ ಸಾಹಿತ್ಯದಲ್ಲಿಯೂ ಬಣಗಳು ಹುಟ್ಟಿಕೊಂಡಿವೆ. ಪಕ್ಷದ ಹೆಸರಿನಲ್ಲಿ, ಎಡ-ಬಲ ಎಂಬ ನೆಲೆಯಲ್ಲಿ ಸಾಹಿತಿಗಳನ್ನು ಗುರುತಿಸುವ ಹಂತಕ್ಕೆ ಬಂದಿದ್ದೇವೆ. ದ್ವೇಷ, ಅಸೂಯೆ ಸಾಹಿತ್ಯ ವಲದಲ್ಲಿಯೂ ಇವೆ. ಹಾಗಾಗಿ ಸಾಹಿತ್ಯದಿಂದ ಮನಸ್ಸು ಕಟ್ಟುವ ವ್ಯವಸ್ಥೆ ಸಾಧ್ಯವೇ ಅನ್ನುವುದು ಬಹು ದೊಡ್ಡ ಪ್ರಶ್ನೆ. ಒಂದು ಹೊಸ ಜನಾಂಗ ಮನಸ್ಸು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಅನ್ನಬಹುದು. ದೊಂಬಿ, ಗಲಾಟೆ ಮಾಡುವ ಬೆರೆಳೆಣಿಕೆ ಮಂದಿಯನ್ನು ತಿರಸ್ಕರಿಸಿ, ಅದನ್ನು ಹಿಂದಕ್ಕೆ ಬಿಟ್ಟು, ಮುಂದಕ್ಕೆ ಹೋಗಬೇಕು.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.