‘ವಾಲ್ಮೀಕಿಯಿಂದ ರಾಮರಾಜ್ಯದ ಪರಿಚಯ’
Team Udayavani, Oct 6, 2017, 2:04 PM IST
ಪುತ್ತೂರು: ಜಗತ್ತು ಕಂಡ ಅತ್ಯಂತ ಶ್ರೇಷ್ಠ ರಾಜ್ಯ ರಾಮರಾಜ್ಯ. ಇಂತಹ ಮಾದರಿಯನ್ನು ರಾಮಾಯಣದ ಮೂಲಕ ಪರಿಚಯಿಸಿದ ವಾಲ್ಮೀಕಿ ಮಹರ್ಷಿ ಎಂದಿಗೂ ಸ್ಮರಣೀಯರು ಎಂದು ಅಂಬಿಕಾ ವಿದ್ಯಾಲಯದ ಆಡಳಿತ ನಿರ್ದೇಶಕ, ನಿವೃತ್ತ ಪ್ರಾಧ್ಯಾಪಕ ಸುರೇಶ್ ಶೆಟ್ಟಿ ಹೇಳಿದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಾಲ್ಮೀಕಿ ಸಂಸ್ಮರಣೆ ಮಾಡಿದರು.
24 ಶ್ಲೋಕಗಳ ಸಹಿತವಾದ ವಾಲ್ಮೀಕಿ ರಾಮಾಯಣ ವೈಕುಂಠವೇ ಭೂಮಿಗೆ ಬಂದ ಕಥೆ. ಇಲ್ಲಿ ಜೀವನ ಪಾಠದ ಎಲ್ಲ ಅಂಶಗಳನ್ನು ಕಾಣಬಹುದು. ವಿದ್ಯೆ, ನಡತೆ ಜತೆಗೆ ವೇದ ವಿದ್ಯೆಗಳ ಪರಿಣತಿಯಿಂದ ಬ್ರಾಹ್ಮಣತ್ವವನ್ನು ತನ್ನದಾಗಿಸಿಕೊಳ್ಳಬಹುದೆಂಬುದನ್ನು ಸಾಬೀತುಪಡಿಸಿದ ವಾಲ್ಮೀಕಿ ಜೀವನ ಎಲ್ಲರಿಗೂ ಮಾದರಿ ಎಂದರು.
ಮನುಷ್ಯ ಧರ್ಮ
ಬದುಕಿನ ಉತ್ತಮವಾದ ದಾರಿ, ಸದ್ಗುಣಗಳು ಮಾತ್ರ ಸಮಾಜದ ಮೆಚ್ಚುಗೆಯನ್ನು ಪಡೆಯಬಹುದು. ಧರ್ಮ ನಿಷ್ಠರು, ದುರ್ಬಲರ ಪರವಾಗಿ ನಿಲ್ಲುವುದು ಮನುಷ್ಯ ಧರ್ಮ ಎಂಬುದನ್ನು ವಾಲ್ಮೀಕಿ ರಾಮಾಯಣ ಸಾರಿ ಹೇಳಿದೆ. ಈ ಕಾರಣದಿಂದ ಅಯೋಧ್ಯೆ, ಕಿಷ್ಕಿಂಧೆ, ಲಂಕೆಯ ಮೂಲಕ ಉತ್ತಮ ಹಾಗೂ ಕೆಟ್ಟ ಸಂಸ್ಕೃತಿಯ ವಿಭಾಗವನ್ನು ವಾಲ್ಮೀಕಿಯವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕರ್ಮದಿಂದ ವ್ಯಕ್ತಿತ್ವ
ಮುಖ್ಯ ಅತಿಥಿಯಾಗಿದ್ದ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಶೂನ್ಯದಿಂದ
ಆಧ್ಯಾತ್ಮಿಕ ಶಿಖರಕ್ಕೆ ಏರಿ ಸಮಾಜಕ್ಕೆ ಮಾದರಿಯಾದ ವಾಲ್ಮೀಕಿಯವರು ಜನ್ಮದಿಂದ ಅಲ್ಲ, ಕರ್ಮದಿಂದ ವ್ಯಕ್ತಿತ್ವ
ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ಸಾಧಕ ಎಂದು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಧ್ಯಕ್ಷ ತಹಶೀಲ್ದಾರ್ ಅನಂತಶಂಕರ್ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಉಪಸ್ಥಿತರಿದ್ದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ , ಸಹಾಯಕ ಕಮಿಷನರ್ ರಘುನಂದಮೂರ್ತಿ ಅವರ ಅನುಪಸ್ಥಿತಿಯಲ್ಲಿ ಈ ಸರಕಾರಿ ಕಾರ್ಯಕ್ರಮ ನಡೆಯಿತು. ತಾ.ಪಂ. ಸದಸ್ಯರು, ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿ, ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ವಂದಿಸಿದರು. ತಾ. ಕಚೇರಿಯ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.
ಜೀವನ ಮೌಲ್ಯ
ಅಧ್ಯಕ್ಷತೆ ವಹಿಸಿದ ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಹಿಂದೂ ಧರ್ಮೀಯರಿಗೆ ಜೀವನ ಮೌಲ್ಯಗಳನ್ನು ಬೋಧಿಸಿದ ಮಹಾನ್ ಕಾವ್ಯ ರಾಮಾಯಣವನ್ನು ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿ ಅವರು ಹಾಕಿಕೊಟ್ಟ ಅಡಿಗಲ್ಲು ನಿರಂತರ ಪಾಲನೆಯಾಗಬೇಕು. ವಾಲ್ಮೀಕಿ ಅವರ ಮಾನವೀಯ ಧರ್ಮದ ಜೀವನದಿಂದ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.