ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ, ಉದ್ಯೋಗ ಮೇಳ: ಸಚಿವ ಜಗದೀಶ ಶೆಟ್ಟರ್‌

Team Udayavani, Mar 1, 2020, 12:37 AM IST

udyogamela

ಕೈಗಾರಿಕಾಭಿವೃದ್ಧಿ ಸಭೆಯನ್ನುದ್ದೇಶಿಸಿ ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿದರು.

ಮಂಗಳೂರು: ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಎಪ್ರಿಲ್‌ ಅಂತ್ಯದಲ್ಲಿ ಅಥವಾ ಮೇ ಪ್ರಥಮ ವಾರದಲ್ಲಿ ನಡೆಸಲಾಗುವುದು ಹಾಗೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯ ದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೈಗಾರಿಕಾಭಿವೃದ್ಧಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು ರಾಜ್ಯದಲ್ಲಿ ನ. 3ರಿಂದ 5ರ ವರೆಗೆ ವಿಶ್ವಮಟ್ಟದ ಹೂಡಿಕೆದಾರರ ಸಮಾವೇಶ ಜರಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಟೈರ್‌-2ನಗರಗಳನ್ನು ಔದ್ಯೋಗಿಕವಾಗಿ ಅಭಿವೃದ್ಧಿ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೈಗಾರಿಕಾ ಸ್ನೇಹಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ ಎಂದರು.

10 ಕಡೆ ಕೈಗಾರಿಕಾ ಟೌನ್‌ಶಿಪ್‌
ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗ್ಳನ್ನು ರೂಪಿಸಲು ನಗರಾಭಿವೃದ್ಧಿ ಇಲಾಖೆ ಯಿಂದ ಇರುವ ನಿಯಮ ಅಡಚಣೆ ಗಳನ್ನು ನಿವಾರಿಸಿ ಬೈಕಂಪಾಡಿ ಸೇರಿದಂತೆ 10 ಕಡೆ ಕೈಗಾರಿಕಾ ಟೌನ್‌ಶಿಪ್‌ಗ್ಳನ್ನು ಸ್ಥಾಪಿಸಲಾಗುವುದು ಎಂದರು. ಗುರುಪುರ ಸೇತುವೆ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಜಿಲ್ಲೆಯಲ್ಲಿ ಧಾರ್ಮಿಕ, ಬೀಚ್‌, ಮೆಡಿಕಲ್‌ ಟೂರಿಸಂಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಬಂಟ್ವಾಳ ದಲ್ಲಿ ಕೋಕೋನಟ್‌ ಪಾರ್ಕ್‌ ಸ್ಥಾಪನೆ ಪ್ರಸ್ತಾವ ಇದೆ. ಕುಲಶೇಖರ-ಕಾರ್ಕಳ ರಸ್ತೆಗೆ ಈಗಾಗಲೇ 18 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಗುರುಪುರ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮೇ ಅಂತ್ಯಕ್ಕೆ ಉದ್ಘಾಟನೆಗೊಳ್ಳಲಿದೆ ಎಂದರು.

ಕಾನ್ಫೆಡರೆನ್ಸ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌ ಮಂಗಳೂರು ಇದರ ಉಪಾಧ್ಯಕ್ಷ ಗೌರವ ಹೆಗ್ಡೆ ಅವರು, ಕೈಗಾರಿಕೆಗಳ ಪರವಾಗಿ ಮನವಿ ಸಲ್ಲಿಸಿದ್ದು ಕೈಗಾರಿಕೆಗಳಿಗೆ ಮೂಲಸೌಕರ್ಯಗಳನ್ನು ಉನ್ನತೀಕರಿಸಬೇಕು, ಟ್ರಕ್‌ ಟರ್ಮಿನಲ್‌ ನಿರ್ಮಾಣ, ಬೈಕಂಪಾಡಿ ಕೈಗಾರಿಕಾ ಟೌನ್‌ಶಿಪ್‌ ರಚಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟರು. ಶಾಸಕರಾದ ಯು.ಟಿ. ಖಾದರ್‌, ಡಾ| ವೈ. ಭರತ್‌ ಶೆಟ್ಟಿ ,ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆಐಎಡಿಬಿ ಸಿಇಒ ಬಸವರಾಜೇಂದ್ರ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌ ಅವರು ಸ್ವಾಗತಿಸಿದರು.

ಕಾರ್ನಾಡ್‌ನ‌ಲ್ಲಿ ಟಾಟಾ ಕನ್ಸಲ್ಟೆನ್ಸಿ ಉದ್ಯಮ
ಮೂಲ್ಕಿ ಕಾರ್ನಾಡ್‌ ಕೈಗಾರಿಕಾ ಪ್ರದೇಶದಲ್ಲಿ ಐಟಿ ಎಸ್‌ಇಝಡ್‌ ಸ್ಥಾಪನೆಗೊಳ್ಳ ಲಿದ್ದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ಸಂಸ್ಥೆ ಈಗಾಗಲೇ ಪ್ರಸ್ತಾವ ಇರಿಸಿದೆ. 495 ಕೋ.ರೂ. ವೆಚ್ಚದಲ್ಲಿ ಸಂಸ್ಥೆ ಉದ್ಯಮವನ್ನು ಸ್ಥಾಪಿಸಲಿದ್ದು ಸುಮಾರು 4 ಸಾವಿರ ಮಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಶೆಟ್ಟರ್‌ ತಿಳಿಸಿದರು.

ಮೇ 29: ಹುಬ್ಬಳ್ಳಿಗೆ ವಿಮಾನ ಸೇವೆ
ಮಂಗಳೂರಿನಿಂದ ಹುಬ್ಬಳಿಗೆ ವಿಮಾನಯಾನ ಸೇವೆ ಮೇ 29ರಿಂದ ಆರಂಭ ಗೊಳ್ಳಲಿದೆ. ಉಡಾನ್‌ ಯೋಜನೆ ಮೂಲಕ ಎಲ್ಲ ಜಿಲ್ಲೆಗಳಿಗೂ ವಿಮಾನಯಾನ ಸಂಪರ್ಕಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶೆಟ್ಟರ್‌ ಹೇಳಿದರು.

 ಕರ್ನಿರೆ, ಅತಿಕಾರಿಬೆಟ್ಟುವಿನಲ್ಲಿ 800 ಎಕ್ರೆ ಲ್ಯಾಂಡ್‌ಬ್ಯಾಂಕ್‌ ಸ್ಥಾಪನೆ ಪ್ರಸ್ತಾವ
 ಗಂಜಿಮಠದಲ್ಲಿ ಇಪಿಪಿ ಪಾರ್ಕ್‌
ನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗೆ 104 ಎಕ್ರೆ ಜಾಗ ಮೀಸಲು, ಇನ್ನೂ 100 ಎಕ್ರೆ ಭೂಸ್ವಾಧೀನ ಪ್ರಸ್ತಾವ
 ಎಂಆರ್‌ಪಿಎಲ್‌ 4ನೇ ಹಂತಕ್ಕೆ 1,050 ಎಕ್ರೆ ಭೂಸ್ವಾಧೀನ ಪ್ರಸ್ತಾವ, 982 ಎಕ್ರೆ ಭೂಸಾœಧೀನ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿ
ಬೈಕಂಪಾಡಿ ಜೆಸ್ಕೊ ಭೂಸ್ವಾಧೀನ ದಲ್ಲಿ 160 ಎಕ್ರೆ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ನೀಡಿಕೆ.

ಟಾಪ್ ನ್ಯೂಸ್

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ

BSY ಪೋಕ್ಸೋ ಪ್ರಕರಣ: ಸೆ. 19ಕ್ಕೆ ವಿಚಾರಣೆ ಮುಂದೂಡಿಕೆ

BSY ಪೋಕ್ಸೋ ಪ್ರಕರಣ: ಸೆ. 19ಕ್ಕೆ ವಿಚಾರಣೆ ಮುಂದೂಡಿಕೆ

Farmers ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರ ಕಂಗಾಲು

Farmers ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರ ಕಂಗಾಲು

ಕೊನೆಗೂ 3 ವಿಧೇಯಕಕ್ಕೆ ಗವರ್ನರ ಅಸ್ತು

Bengaluru: ಕೊನೆಗೂ 3 ವಿಧೇಯಕಕ್ಕೆ ಗವರ್ನರ ಅಸ್ತು

Kharge 2

CM ಹುದ್ದೆ ವಿಚಾರದಲ್ಲಿ ಸಚಿವರಿಂದಲೇ ಗೊಂದಲ: ಖರ್ಗೆಗೆ ಪತ್ರ ಬರೆದ ಪರಿಷತ್ ಸದಸ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು

Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

1-ak

AAP; ಹಣಕಾಸು ಅಕ್ರಮ: ಆಪ್‌ ಶಾಸಕ ಖಾನ್‌ಗೆ ನ್ಯಾಯಾಂಗ ಬಂಧನ

Kasaragod: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Kasaragod: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.