ಇರಾ: ಕೋರೆಗೆ ಬಿದ್ದು ಬಾಲಕ ಸಾವು
Team Udayavani, Jul 23, 2017, 9:40 AM IST
ಬಂಟ್ವಾಳ: ಇರಾ ಗ್ರಾಮದ ಕಂಚಿನಡ್ಕಪದವು ಕೆಂಪುಕಲ್ಲು ಕೋರೆಯ ತಡೆ ತಂತಿ ಬೇಲಿಯನ್ನು ದಾಟಿ ಹೋಗಿದ್ದ ಬಾಲಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಜು. 22ರಂದು ಅಪರಾಹ್ನ ಸಂಭವಿಸಿದೆ.
ಕೂಲಿ ಕಾರ್ಮಿಕ ಹುಸೈನ್ – ಜೀನತ್ ದಂಪತಿಯ ಪುತ್ರ ಸ್ಥಳೀಯ ಸರಕಾರಿ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿ ಇರ್ಫಾನ್ (11) ಮೃತ ಬಾಲಕ.
ಬಾಲಕ ತಂದೆ, ತಾಯಿ, ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾನೆ.
ಶನಿವಾರ ಮಧ್ಯಾಹ್ನ ಆತ ಶಾಲೆಯಿಂದ ಬಂದ ಬಳಿಕ ಮನೆಮಂದಿ ಔಷಧಕ್ಕಾಗಿ ತೆರಳಿದ್ದರು. ಈ ಸಂದರ್ಭ ನೆರೆಯ ಇತರ ಮೂವರು ಜತೆಗಾರರೊಂದಿಗೆ ಕೋರೆಯ ಬಳಿ ಹೋಗಿದ್ದರು ಎನ್ನಲಾಗಿದೆ.
ಘಟನೆಯ ಬಳಿಕ ಜತೆಗಾರರು ಬೆದರಿದ್ದು ಕೋರೆಯ ಸುತ್ತಮುತ್ತ ಅನುಮಾನಾಸ್ಪದ ರೀತಿಯಲ್ಲಿ ಸುತ್ತುತ್ತಿದ್ದಾಗ ಅದೇ ದಾರಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಜೀಪನಡು ನಿವಾಸಿ ಹನೀಫ್ ಸಂಶಯಗೊಂಡು ಅವರಲ್ಲಿ ವಿಚಾರಿಸಿ
ದ್ದರು. ಆದರೂ ಬಾಯಿ ಬಿಡದ ಹಿನ್ನೆಲೆಯಲ್ಲಿ ಬೆದರಿಸಿ ಕೇಳಿದಾಗ ವಿಚಾರ ಬಹಿರಂಗವಾಗಿತ್ತು. ತತ್‌ಕ್ಷಣ ಅವರು ನೀರಿಗೆ ಇಳಿದು ಬಾಲಕನನ್ನು ಮೇಲೆತ್ತಿದ್ದರು. ಬಾಲಕನ ದೇಹದಲ್ಲಿ ಸಂಚಲನ ಇದ್ದ ಕಾರಣ ತತ್‌ಕ್ಷಣ ಆಸ್ಪತ್ರೆಯತ್ತ ಕರೆದೊಯ್ದರೂ ದಾರಿ ಮಧ್ಯೆ ಮೃತಪಟ್ಟ ಹಿನ್ನೆಲೆಯಲ್ಲಿ ಮರಳಿ ಮನೆಗೆ ತಂದರೆನ್ನಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಮೃತದೇಹವನ್ನು ಆಸ್ಪತ್ರೆಗೆ ತರಲು ಸೂಚಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತರಲಾಯಿತು. ಬಳಿಕ ಮನೆಮಂದಿಗೆ ಸುದ್ದಿ ತಿಳಿಸಲಾಯಿತು.
ಕೋರೆ ನಿರುಪಯುಕ್ತ ಆಗಿದ್ದರೂ ನೀರು ನಿಂತು ಅಂತ ರ್ಜಲ ಹೆಚ್ಚಲಿ ಎಂಬ ಕಾರಣಕ್ಕಾಗಿ ಮುಚ್ಚದೆ ಬಿಡಲಾಗಿತ್ತು. ಗ್ರಾ.ಪಂ. ಸೂಚನೆಯಂತೆ ತಂತಿ ಬೇಲಿ ನಿರ್ಮಿಸಲಾಗಿತ್ತು.
ಬಂಟ್ವಾಳ ಕಂದಾಯ ನಿರೀಕ್ಷಕ ಪಿ. ರಾಮ, ಗ್ರಾಮ ಲೆಕ್ಕಾಧಿಕಾರಿ ಎ.ಪಿ. ಭಟ್, ಪಿಡಿಒ ನಳಿನಿ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಕಂದಾಯ ಸಿಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ರಾಜೀವಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಜಿ.ಪಂ. ಮಾಜಿ ಸದಸ್ಯ ಎಸ್. ಅಬ್ಟಾಸ್ ಭೇಟಿ ನೀಡಿದರು.
ತಹಶೀಲ್ದಾರ್ ಆಸ್ಪತ್ರೆಗೆ ಬಂದು ಮಾಹಿತಿ ಪಡೆದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.