ಅಧಿಕಾರಿಗಳ ಬೇಜವಾಬ್ದಾರಿ; ಸರಕಾರಿ ಸೌಲಭ್ಯ ವಂಚಿತ ಗ್ರಾಮಸ್ಥರು
ಮೂಡುಕೋಡಿ: 94ಸಿ ಹಕ್ಕುಪತ್ರದಲ್ಲಿ ಇನ್ಯಾರಧ್ದೋ ಸರ್ವೇ ನಂಬರ್
Team Udayavani, May 10, 2019, 10:44 AM IST
ಕೊಪ್ಪದಬಾಕಿಮಾರು ಸರಕಾರಿ ಜಾಗದಲ್ಲಿ ವಾಸವಾಗಿರುವ ಅತಂತ್ರ ಕುಟುಂಬಗಳ ಮನೆಗಳು.
ವೇಣೂರು ಮೇ 9: ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರುವಿನಲ್ಲಿ ಹತ್ತಾರು ವರ್ಷಗಳಿಂದ ಸರಕಾರಿ ಜಾಗದಲ್ಲಿ ನೆಲೆ ಕಂಡವರಿಗೆ ಕೊನೆಗೂ 2017ರಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಅಧಿಕಾರಿ ಗಳ ಬೇಜವಾಬ್ದಾರಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.
94ಸಿ ಯೋಜನೆಯಡಿ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಪಡೆದಿರುವ ಹಕ್ಕುಪತ್ರದಲ್ಲಿ ಸರ್ವೇ ನಂ. ವ್ಯತ್ಯಾಸ ಕಂಡು ಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿ ಯಿಂದಾಗಿ ಕಳೆದೆರಡು ವರ್ಷಗಳಿಂದ ಆರ್‌ಟಿಸಿ ಲಭಿಸದೆ ಪರದಾಡುತ್ತಿದ್ದಾರೆ.
ವೇಣೂರು ಹೋಬಳಿಯ ಮೂಡು ಕೋಡಿಯ ಕೊಪ್ಪದಬಾಕಿಮಾರುವಿನ ಸುಮಾರು 30ಕ್ಕೂ ಅಧಿಕ ಕುಟುಂಬಗಳು ಸರಕಾರದ ಸೌಲಭ್ಯಗಳಿಂದ ವಂಚಿತವಾಗಿ ನರಕಯಾತನೆ ಅನುಭವಿಸುತ್ತಿವೆ. ಇಲ್ಲಿನ ಗೋಮಾಳ ಜಾಗದಲ್ಲಿ 20-25 ವರ್ಷ ಗಳಿಂದ ಮನೆಕಟ್ಟಿ, ಕೃಷಿ ಮಾಡಿಕೊಂಡು ವಾಸವಾಗಿದ್ದರೂ ಹಕ್ಕುಪತ್ರ ಲಭಿಸಿರಲಿಲ್ಲ. ಸರಕಾರದ ನಿಯಮದ ಬದಲಾವಣೆಯಿಂದ 94ಸಿ ಯೋಜನೆ ಯಡಿ ಅರ್ಜಿ ಸಲ್ಲಿಸಿ 2017ರ ಅಕ್ಟೋಬರ್‌ನಲ್ಲಿ 94ಸಿ ಯೋಜನೆಯಲ್ಲಿ ಜಾಗದ ಹಕ್ಕುಪತ್ರ ಪಡೆದುಕೊಂಡಿದ್ದರು. ಕಂದಾಯ ಅಧಿಕಾರಿ ಗಳ ಉಪಸ್ಥಿತಿಯಲ್ಲಿ ಅಂದಿನ ಬೆಳ್ತಂಗಡಿ ಪ್ರಭಾರ ತಹಶೀಲ್ದಾರ್ ಆಗಿದ್ದ ಮಹಮ್ಮದ್ ಇಸಾಕ್ ಸಹಿ ಮಾಡಿದ ಹಕ್ಕುಪತ್ರವನ್ನು ಅಂದಿನ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರು ಮೂಡುಕೋಡಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ವಿತರಿಸಿದ್ದರು.
ಸರ್ವೇ ನಂ. 99/2ಎಪಿ8 ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರುವಿನಲ್ಲಿರುವ ಸರಕಾರಿ ಜಾಗ. ಇದರಲ್ಲಿ ಫಲಾನುಭವಿಗಳು ವಾಸವಾಗಿದ್ದಾರೆ. ಆದರೆ ಇವರಿಗೆ ನೀಡಲಾದ ಹಕ್ಕುಪತ್ರದಲ್ಲಿ 99/2ಎಪಿ1 ಎಂದು ನಮೂದಿಸಲಾಗಿದ್ದು, ಇದು ಬೇರೆಯವರ ವರ್ಗ ಜಾಗ ಎಂದು ಕಾಣಿಸುತ್ತಿದೆ. ಹೀಗಾಗಿ ಆರ್‌ಟಿಸಿ ಲಭಿಸುತ್ತಿಲ್ಲ. 35ಕ್ಕೂ ಅಧಿಕ ಕುಟುಂಬಗಳು ಈ ಸಮಸ್ಯೆಯಡಿ ಸಿಲುಕಿವೆ. ಇದರಲ್ಲಿ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಸರಿಮಾಡಿ ನೀಡಿರುವ ಅಧಿಕಾರಿಗಳು, ಉಳಿದ ಫಲಾನುಭವಿಗಳಿಗೆ ಸತಾಯಿಸುತ್ತಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
•ಪದ್ಮನಾಭ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.