ಇರ್ವತ್ತೂರು ಗ್ರಾ.ಪಂ.: ಸ್ವಚ್ಛತಾ ಶ್ರಮದಾನ
Team Udayavani, Jan 4, 2018, 4:32 PM IST
ಪುಂಜಾಲಕಟ್ಟೆ: ಬಂಟ್ವಾಳ ತಾ| ಇರ್ವತ್ತೂರು ಗ್ರಾಮ ಪಂಚಾಯತ್ ವತಿಯಿಂದ ರಾಮಕೃಷ್ಣ ಮಿಷನ್ ಮಂಗಳೂರು, ದ.ಕ. ಜಿ.ಪಂ. ಸಹಯೋಗದಲ್ಲಿ ಸ್ವಚ್ಛ ಇರ್ವತ್ತೂರು 4ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಡಿ. 31ರಂದು ಜರಗಿತು. ಸ್ಥಳೀಯ ಪ್ರಮುಖರಾದ ಗುಡ್ಡಪ್ಪ ಟೈಲರ್ ಶ್ರಮದಾನಕ್ಕೆ ಚಾಲನೆ ನೀಡಿದರು.
ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಬಿ. ಶಂಕರ ಶೆಟ್ಟಿ, ಪಿಡಿಒ ಗಣೇಶ್ ಶೆಟ್ಟಿಗಾರ್, ಜಿಲ್ಲಾ ಹಾಪ್
ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ, ಪಿಲಾತಬೆಟ್ಟು, ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಂದರ ನಾಯ್ಕ ಪಿಲಾತಬೆಟ್ಟು, ಅಕ್ಷರ ಪ್ರತಿಷ್ಠಾನ ಅಧ್ಯಕ್ಷ ಡಾ| ರಾಮಕೃಷ್ಣ ಎಸ್. ಆಲದಪದವು, ಗ್ರಾ.ಪಂ. ಸದಸ್ಯರಾದ ನಾರಾಯಣ ಪೂಜಾರಿ, ದಯಾನಂದ ಕುಲಾಲ್, ಗಿರಿಜಾ, ಪ್ರಶಾಂತ ಕೋಟ್ಯಾನ್, ಸುನಂದಾ, ಜಯಶ್ರೀ, ಮಾದರಿ ವಿಕಾಸ ಕೇಂದ್ರದ ಪ್ರೇರಕ ಎಸ್. ಅಬ್ದುಲ್ ರಹಿಮಾನ್ ಹಾಗೂ ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಮತ್ತು ಸರ್ವಸದಸ್ಯರು, ಇರ್ವತ್ತೂರುಪದವು ಜುಮ್ಮಾ ಮಸೀದಿ ಹಾಗೂ ಒಡಿಯೂರು ಗ್ರಾಮ ವಿಕಾಸ ಸ್ವಸಹಾಯ ಸಂಘದ ಸದಸ್ಯರು, ಇರ್ವತ್ತೂರು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಗಣೇಶ್ ಶೆಟ್ಟಿ ನರ್ವಲ್ದಡ್ಡ, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ನಝೀರ್ ಸಾಹೇಬ್, ಸ್ಥಳೀಯರಾದ ಮಹಮ್ಮದ್ ಮೂರ್ಜೆ, ಎಂ.ಪಿ. ಶೇಖರ್, ಪದ್ಮನಾಭ ಶೆಟ್ಟಿ ಮಠ, ಡಿ.ಎನ್. ಸಂಜೀವ ಇರ್ವತ್ತೂರುಪದವು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಅಂಚೆ ನೌಕರರು, ಗ್ರಾ.ಪಂ. ಸಿಬಂದಿ, ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮದ ಸುಮಾರು 70 ಗ್ರಾಮಸ್ಥರ
ಸಹಕಾರದಿಂದ ಇರ್ವತ್ತೂರು ಗ್ರಾಮದ ನೇರಳಕಟ್ಟೆ ದೈವಸ್ಥಾನ ವಠಾರವನ್ನು ಸ್ವಚ್ಛಗೊಳಿಸಲಾಯಿತು. ಗ್ರಾಮಸ್ಥರು ಪಿಕಪ್ ವಾಹನ ಮತ್ತು ಹುಲ್ಲು ಕತ್ತರಿಸುವ ಯಂತ್ರಗಳನ್ನು ಉಚಿತವಾಗಿ ನೀಡಿ ಸಹಕರಿಸಿದರು.
ಜ. 14ರಂದು ಶ್ರಮದಾನ
ಪ್ರತಿ 15 ದಿನಗಳಿಗೊಮ್ಮೆ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಜರಗಲಿದ್ದು, ಗ್ರಾಮಸ್ಥರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪಂ. ಆಡಳಿತ ಮಂಡಳಿ ಕೋರಿದೆ. ಮುಂದಿನ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಇರ್ವತ್ತೂರು ಪದವಿನಲ್ಲಿ ಜ. 14ರಂದು ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.