ಡಾಮರು ಕಾಮಗಾರಿ ನಡೆದು ಎರಡು ವರ್ಷಗಳಲ್ಲಿ ನಡೆದಾಡಲೂ ಕಷ್ಟ
Team Udayavani, Aug 24, 2018, 12:09 PM IST
ಕಾಣಿಯೂರು : ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ರಸ್ತೆಗಳೆಲ್ಲವೂ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿವೆ. ಇದರಿಂದ ಸ್ಥಳೀಯರು ರೋಸಿ ಹೋಗಿದ್ದಾರೆ. ಅಲೆಕ್ಕಾಡಿ ಕಡಬ ರಸ್ತೆಯ ಅಲೆಕ್ಕಾಡಿ ಎಂಬಲ್ಲಿಂದ ಪುಳಿಕುಕ್ಕು ತನಕದ ಸುಮಾರು 8 ಕಿ.ಮೀ. ರಸ್ತೆಯ ಡಾಮರು ಕಿತ್ತುಹೋಗಿದ್ದು, ಕರಿಂಬಿಲ ಎಂಬಲ್ಲಿ ತೋಡಿನಂತಾಗಿದೆ. ವಿದ್ಯಾ ರ್ಥಿಗಳು, ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ಓಡಾಟ ದುಸ್ತರವಾಗಿದೆ.
ಜಿ.ಪಂ. ರಸ್ತೆ
ಇದು ಜಿಲ್ಲಾ ಪಂಚಾಯಿತಿ ರಸ್ತೆ. ಎರಡು ವರ್ಷಗಳ ಹಿಂದೆಯೇ ಡಾಮರು ಕಾಮಗಾರಿ ನಿರ್ವಹಿಸಲಾಗಿತ್ತು. ಆದರೆ, ಈಗ ರಸ್ತೆಯ ಮಧ್ಯೆ ಅಲ್ಲಲ್ಲಿ ಇಂಗು ಗುಂಡಿಯಂತಹ ಹೊಂಡಗಳು ಸೃಷ್ಟಿಯಾಗಿವೆ. ರಸ್ತೆಯಿಡೀ ಕೆಸರಾಗಿದ್ದು, ಪೂರ್ತಿ ಹಾನಿಗೀಡಾಗಿದೆ. ಹೊಸಮಠ ಸೇತುವೆ ಹಾಗೂ ಪುಳಿಕುಕ್ಕು -ಪಂಜ ನಡುವೆ ಇರುವ ಕೋಂಟೆಲ್‌ಸಾರ್ ಎಂಬಲ್ಲಿಯ ಸೇತುವೆಗಳು ಮುಳುಗಡೆಯಾದರೆ ಕಡಬದವರು ಪುತ್ತೂರನ್ನು ಸಂಪರ್ಕಿಸಲು ಅಲೆಕ್ಕಾಡಿ ರಸ್ತೆಯನ್ನೇ ಅವಲಂಬಿಸುವುದು ಅನಿವಾರ್ಯ.
ಮೇಲ್ದರ್ಜೆಗೇರಿಸಿ
ಕಾಣಿಯೂರು, ಪುಣ್ಚಿತ್ತಾರು, ಬೆಳ್ಳಾರೆ, ನಿಂತಿಕಲ್ಲು ಭಾಗದ ಜನರು ಕಡಬ ಸಂಪರ್ಕಿಸಲು ಇದೇ ರಸ್ತೆಯನ್ನು ಅವಲಂಭಿಸಿದ್ದು, ನಿತ್ಯ ಸಾವಿರಾರು ವಾಹನಗಳು ಇಲ್ಲಿ ಓಡಾಟ ನಡೆಸುತ್ತಿವೆ. 3.5 ಮೀ. ಅಗಲವಿರುವ ಈ ರಸ್ತೆಯನ್ನು ಇನ್ನಷ್ಟು ವಿಸ್ತರಿಸುವುದು ಅಗತ್ಯ. ಹೀಗಾಗಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹ ಕೇಳಿಬರುತ್ತಿದೆ.
ಅಲೆಕ್ಕಾಡಿ ನೂಜಾಡಿ ರಸ್ತೆಯಲ್ಲೂ ಗೋಳು
ನೂಜಾಡಿ ಕಾಲನಿಯಲ್ಲಿ ಗ್ರಾಮ ಪಂಚಾಯತ್ ರಸ್ತೆ ಪಾಡು ಇದೇ ಆಗಿದೆ. 150 ಮೀ. ರಸ್ತೆ ಕಾಂಕ್ರೀಟ್ ಕಂಡಿದ್ದರೂ, ಉಳಿದ 400 ಮೀಟರ್ ರಸ್ತೆ ತೀರಾ ಹದಗೆಟ್ಟು ಶಾಲಾ ಮಕ್ಕಳು ನಡೆದಾಡಲೂ ಕಷ್ಟಕರವಾಗಿ ಪರಿಣಮಿಸಿದೆ. ಸುಮಾರು 70 ಮನೆಗಳಿವೆ. ಅಲೆಕ್ಕಾಡಿ ನೂಜಾಡಿ ರಸ್ತೆ ದುಸ್ಥಿತಿ ಕಂಡು ನಾಗರಾಜ್ ರಾವ್ ಆಲಾಜೆ, ಶಿವಕುಮಾರ್ ನೂಜಾಡಿ, ಗಂಗಾಧರ ನೂಜಾಡಿ, ಸುರೇಶ್ ನೂಜಾಡಿ, ಸತೀಶ ನೂಜಾಡಿ, ಮಹಮ್ಮದ್ ನೂಜಾಡಿ, ಶೀನಪ್ಪ ನೂಜಾಡಿ, ಮೇದಪ್ಪ ಕೊಳಂಬಳ ಅವರು ಶ್ರಮದಾನ ಮೂಲಕ ರಸ್ತೆ ಸರಿಪಡಿಸಿದರು. ಕಲ್ಲು, ಮರಳು ತಂದು ರಸ್ತೆಗೆ ಸುರಿದು ತಕ್ಕಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದರು.
ಮನವಿಗಿಲ್ಲ ಬೆಲೆ
ರಸ್ತೆ ಅಭಿವೃದ್ಧಿಪಡಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳು, ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿನ ಸಮಸ್ಯೆ ಅರಿತು ಅವರು ಸ್ಪಂದಿಸಲಿಲ್ಲ. ಎಡಮಂಗಲ ಗ್ರಾ.ಪಂ. ಕಚೇರಿ, ಎಡಮಂಗಲ ಪ್ರೌಢಶಾಲೆ, ಸಿಎ ಬ್ಯಾಂಕ್, ಎಡಮಂಗಲ ದೇವಸ್ಥಾನ, ಕಡಬ ಪೇಟೆ ಸಂಪರ್ಕಿಸಲು ಇದೇ ರಸ್ತೆಯಾಗಿದ್ದರೂ ಅದು ವಿಸ್ತರಣೆ, ಅಭಿವೃದ್ಧಿ ಆಗದಿರುವುದು ವಿಪರ್ಯಾಸವೇ ಸರಿ. ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸಲಾಗಿದೆ
ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಜಿ.ಪಂ.ಗೆ ಈಗಾಗಲೇ ಗ್ರಾ.ಪಂ. ವತಿಯಿಂದ ಮನವಿ ಸಲ್ಲಿಸಲಾಗಿದೆ. ಗ್ರಾ.ಪಂ. ರಸ್ತೆಗಳನ್ನು ಆದ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
– ಸುಂದರ ಗೌಡ
ಅಧ್ಯಕ್ಷರು, ಎಡಮಂಗಲ ಗ್ರಾ.ಪಂ.
ಮಳೆಗಾಲದ ಬಳಿಕ
ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕರಿಂಬಿಲ ಎಂಬಲ್ಲಿ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ರಸ್ತೆ ಮರು ಡಾಮರು ಕಾಮಗಾರಿಗೆ ಸಿಆರ್‌ಎಫ್‌ನಿಂದ 3 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಳೆಗಾಲ ಕಳೆದ ಬಳಿಕ ಕಾಮಗಾರಿಗೆ ಚಾಲನೆ ದೊರೆಯಲಿದೆ.
- ಶುಭದಾ ಎಸ್.
ಉಪಾಧ್ಯಕ್ಷರು, ಸುಳ್ಯ ತಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.