ಅನಾರೋಗ್ಯ ಪೀಡಿತೆಯನ್ನು ಹೊತ್ತೂಯ್ಯುವ ಅನಿವಾರ್ಯ!
Team Udayavani, Jul 29, 2023, 12:44 AM IST
ಸುಬ್ರಹ್ಮಣ್ಯ: ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೋರ್ವರ ಮನೆಗೆ ಹೋಗಲು ರಸ್ತೆ ಇಲ್ಲದ್ದರಿಂದ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪ್ರಕರಣ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.
ಕೆರ್ನಡ್ಕ ನಿವಾಸಿ ಕೆ. ಗೋಪಾಲನ್ ಅವರ ಪತ್ನಿ, ಕೊರಮೇರು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿಯಾಗಿರುವ ಸಾವಿತ್ರಿ (62) ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಪುತ್ತೂರಿನ ಆಸ್ಪತ್ರೆಗೆ ದಿನ ಬಿಟ್ಟು ದಿನ ಡಯಾಲಿಸಿಸ್‌ಗೆ ಹೋಗ ಬೇಕಾಗಿದೆ. ಅವರ ಮನೆಗೆ ಹೋಗಲು ರಸ್ತೆ ಇಲ್ಲ. ಡಾಮರು ರಸ್ತೆಯ ಕೆರ್ನಡ್ಕದಿಂದ ಅವರ ಮನೆ 250 ಮೀ. ದೂರದಲ್ಲಿದೆ. 100 ಮೀ. ಸಂಚಾರಕ್ಕೆ ಮಣ್ಣಿನ ರಸ್ತೆಯಿದ್ದು ಅಲ್ಲಿಂದ 150 ಮೀ. ಕಾಲು ದಾರಿಯಲ್ಲಿ ಸಾಗಬೇಕು. ಎರಡೂ ಬದಿ ಖಾಸಗಿಯವರ ತೋಟವಿದೆ. ಅಲ್ಲಿ ವಾಹನ ಸಂಚಾರಕ್ಕೆ ಬೇಕಾದಷ್ಟು ರಸ್ತೆ ಇಲ್ಲದೇ ಇರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಾವಿತ್ರಿ ಅವರನ್ನು ಅವರ ಮಗ ಸತೀಶ್ ಅಸುಪಾಸಿನವರ ಸಹಕಾರದೊಂದಿಗೆ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.
ಸಾವಿತ್ರಿ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಹೊತ್ತುಕೊಂಡು ಹೋಗುವ ದೃಶ್ಯ ಈಗ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.