ಕಂಬಳದಲ್ಲಿ ಕೋಣ ಓಡಿಸುವವರನ್ನು ಗುರುತಿಸುವುದು ಹೆಮ್ಮೆ: ವಿಲ್ಫ್ರೆಡ್ 


Team Udayavani, Dec 24, 2017, 10:56 AM IST

24-Dec-5.jpg

ಪಡುಪಣಂಬೂರು: ಕಂಬಳದ ಕೋಣಗಳ ಹಿಂದೆ ಓಡುವುದು ನೋಡಿದಷ್ಟು ಸುಲಭವಲ್ಲ, ನನ್ನ ಚೊಚ್ಚಲ ಓಟದಲ್ಲಿ ಮೈ ಕೈಗೆ ಗಾಯ ಮಾಡಿಕೊಂಡು ಎರಡು ತಿಂಗಳು ಮನೆಯಲ್ಲಿಯೇ ಇದ್ದ ನನಗೆ ಈಗ ಕೋಣಗಳನ್ನು ಓಡಿಸುವವನಾಗಿ ಗುರುತಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದವರು ಕಂಬಳದ ಕೋಣಗಳ ಓಟಗಾರ ವಿಲ್ಫ್ರೆಡ್  ಕೊಲ್ಲೂರು. ಅವರು ಪಡುಪಣಂಬೂರುವಿನಲ್ಲಿ ನಡೆಯುತ್ತಿರುವ ಮೂಲ್ಕಿ ಸೀಮೆ ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ‘ಉದಯವಾಣಿಯ ಸುದಿನ’ದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಮೂಲ್ಕಿ ಬಳಿಯ ಬಳ್ಕುಂಜೆ ಕೊಲ್ಲೂರು ನಿವಾಸಿಯಾಗಿರುವ ವಿಲ್ಫ್ರೆಡ್ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರು, ಮೂಲ್ಕಿ ಬಸ್‌ ನಿಲ್ದಾಣದಲ್ಲಿ ಚಿರಪರಿಚಿತರು. ಹವ್ಯಾಸಿ ನಾಟಕ ಕಲಾವಿದರು, ಗೃಹರಕ್ಷಕ ದಳದಲ್ಲಿಯೂ ಸೇವೆ ಸಲ್ಲಿಸಿರುವ ಇವರು, ಕಳೆದ 10 ವರ್ಷದಿಂದ ಕಂಬಳದ ಕೋಣ ಓಡಿಸುವ ಓಟಗಾರರಾಗಿದ್ದಾರೆ.

ತಮ್ಮ ಮೊದಲ ಓಟದಲ್ಲಿ ಕೋಣಗಳು ಇವರನ್ನು ಬೀಳಿಸಿದ್ದರಿಂದ ಸುಮಾರು ಎರಡು ತಿಂಗಳು ಮನೆಯಲ್ಲಿಯೇ ಉಳಿಯ ಬೇಕಾಯಿತು ಆದರೂ ಛಲ ಬಿಡದೇ ಕೋಣದ ನೊಗವನ್ನು ಹಿಡಿದು ಈಗ ಕರ್ನಿರೆ ಅಣ್ಣು ಶೆಟ್ಟಿ, ಕವತ್ತಾರು ಎಲಿಯಾಸ್‌ ಪಿಂಟೋ, ಪಟ್ಟೆ ಅಂಗಡಿಗುತ್ತು ಲೋಕನಾಥ ಶೆಟ್ಟಿ, ಧನಂಜಯ ಮಟ್ಟು, ಮಾನಂಪಾಡಿ ಗೋವಿಂದ ಕೋಟ್ಯಾನ್‌ ಇತರ ಮನೆತನ ಕೋಣಗಳನ್ನು ಓಡಿಸುತ್ತಿದ್ದಾರೆ. ವಿಶೇಷವೆಂದರೆ ಮೂಲ್ಕಿ ಸೀಮೆಯ ಸಾಂಪ್ರದಾಯಿಕ ಕಂಬಳವಾಗಿರುವ ಶಿಮಂತೂರು ಬಾವ ಹಾಗೂ ಬಪ್ಪನಾಡು ಬಡಗುಹಿತ್ಲು ದಿ. ಲಿಂಗಪ್ಪ ಪೂಜಾರಿ ಮನೆತನದ ಕೋಣಗಳನ್ನು ಅಧಿಕೃತವಾಗಿ ಇವರೇ ಓಡಿಸುತ್ತಿದ್ದಾರೆ. ತಮ್ಮ ಹತ್ತು ವರ್ಷದ ಅನುಭವದಲ್ಲಿ ಮಧ್ಯೆ ಎರಡು ವರ್ಷ ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದಾಗಲೂ ಸಹ ಕಂಬಳದ ಸಮಯದಲ್ಲಿಯೇ ರಜೆಯನ್ನು ಕಳೆದು ಕೋಣಗಳನ್ನು ಓಡಿಸಿದ್ದರು. 

ಪರಂಪರೆ ಉಳಿಯಬೇಕು
ಕಂಬಳಕ್ಕೆ ಸಣ್ಣವನಿರುವಾಗ ಹೆತ್ತವರೊಂದಿಗೆ ತೆರಳುತ್ತಿದ್ದಾಗಲೇ ನಾನೂ ಸಹ ಅವರಂತೆ ಓಡಬೇಕು ಎಂಬ ಆಸೆ ನನ್ನನ್ನೀಗ ಕಂಬಳದ ಓಟಗಾರನನ್ನಾಗಿ ಮಾಡಿದೆ. ಆರಂಭದಲ್ಲಿ ಕೋಣಗಳನ್ನು ಹಿಡಿಯಲು ಹೋಗುತ್ತಿದ್ದೆ. ಆಗ 100 ರೂಪಾಯಿ ಸಿಗುತ್ತಿತ್ತು. ಕಂಬಳದ ಕೋಣ ಹಿಡಿಯುವ ಯಜಮಾನರು ಖುಷಿಯಿಂದ ನೀಡುತ್ತಾರೆ. ನನಗೆ ಹಣ ಮುಖ್ಯವಲ್ಲ ನಮ್ಮ ಪರಂಪರೆ ಜಾತಿ, ಮತ ಭೇದವಿಲ್ಲದೆ ನಿರಂತರವಾಗಿ ನಡೆಯಬೇಕು ಎಂಬ ಆಶಯ ನನ್ನದು.
 –ವಿಲ್ಫ್ರೆಡ್ 
  ಕೋಣಗಳ ಓಟಗಾರ, ಕೊಲ್ಲೂರು

ಟಾಪ್ ನ್ಯೂಸ್

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

9

Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

Jagan Mohan Reddy

Adani ವಿದ್ಯುತ್‌ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್‌ ರೆಡ್ಡಿ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.