“ಇತರರ ಕಷ್ಟಕ್ಕೆ ಸ್ಪಂದಿಸುವುದೇ ಶ್ರೇಷ್ಠ ಕಾರ್ಯ’
ಕರಾವಳಿ ಆಶ್ರಯದ ದಶಮಾನೋತ್ಸವ ಸಮಾರೋಪ
Team Udayavani, Apr 11, 2019, 6:22 AM IST
ಸುರತ್ಕಲ್: ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕಾರ್ಯ ಪುಣ್ಯದ ಕಾರ್ಯವಾಗಿದ್ದು ಹತ್ತು ವರ್ಷಗಳಲ್ಲಿ ವಿವಿಧ ಸೇವೆ ಸಲ್ಲಿಸುತ್ತಾ ಬಡವರ ಕಣ್ಣಿನೀರು ಒರೆಸುವ ಕರಾವಳಿ ಆಶ್ರಯ ಸಮುದಾಯ ಒಂದು ಮಾದರಿ ಸಂಸ್ಥೆ ಎಂದು ಬೊಲೊಟ್ಟು ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ಕರಾವಳಿ ಆಶ್ರಯದ ದಶಮಾನೋತ್ಸವ ಸಮಾರೋಪದಲ್ಲಿ ಅರ್ಹ ಫಲಾ ನುಭಾವಿಗಳಿಗೆ ವೈದ್ಯಕೀಯ ಚಿಕಿತ್ಸಾ ನೆರವು ವಿತರಣೆ ಮತ್ತು ದಶಮಾನೋತ್ಸವ ಪ್ರಯುಕ್ತ “ಜನಾಶ್ರಯ ವಾಣಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಶಾಸಕ ಡಾ| ಭರತ್ ಶೆಟ್ಟಿ ವೈ. ಭೇಟಿ ನೀಡಿ ಶುಭಕೋರಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಸಂಸ್ಥೆಯ ಸಂಚಾಲಕ ಸೂರ್ಯನಾರಾಯಣ ಎಚ್., ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಗಳ ವಿವರ ನೀಡುತ್ತಾ ದಾನಿಗಳ ಪ್ರೋತ್ಸಾಹವೇ ಸಂಸ್ಥೆಯ ಜನ ಸೇವಾ ಯೋಜನೆಗಳಿಗೆ ನಮಗೆ ಸ್ಫೂರ್ತಿ ಎಂದು ಹೇಳಿದರು.
ದಿ| ಬಿ.ಕೆ. ಸಂಜೀವ ಸ್ಮರಣಾರ್ಥ ಸಭಾ ವೇದಿಕೆಯನ್ನು ನಿರ್ಮಿಸಲು ಸಹಕರಿಸಿದ ಅವರ ಸುಪುತ್ರ ಬಿ.ಕೆ. ತಾರನಾಥ ಸುರತ್ಕಲ್ ಅವರನ್ನು ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ವಿತರಣೆ
ಈ ಸಂದರ್ಭ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.ವಿದ್ಯಾದಾಯಿನಿ ಸಂಸ್ಥೆಯ ನಿವೃತ್ತ ಅಧ್ಯಾಪಿಕೆ ಕಲಾವತಿ ಮತ್ತು ಖ್ಯಾತ ನೃತ್ಯ ಮತ್ತು ಸಂಗೀತ ತರಬೇತುದಾರರಾದ ಸುಮಂಗಲಾ ರತ್ನಾಕರ್, ಕರಾವಳಿ ಆಶ್ರಯ ಸಮುದಾಯದ ಕಾರ್ಯಕ್ರಮಗಳನ್ನು ಮೆಚ್ಚಿ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಸುರೇಶ್ ಕೋಟ್ಯಾನ್ ಇಡ್ಯಾ,ಗೌ.ಪ್ರ.ಕಾರ್ಯದರ್ಶಿ ಕುಮಾರ್ ಕರ್ಕೇರ ಹೊಸಬೆಟ್ಟು,ಕೋಶಾ ಧಿಕಾರಿಗಳಾದ ಸುನೇತ್ರಾ ಎಚ್. ಉಪಸ್ಥಿತರಿದ್ದರು. ದಿವ್ಯಾ ಸುದೇಶ್ ಸ್ವಾಗತಿಸಿದರು. ನವೀನ್ ಕುಮಾರ್ ಇಡ್ಯಾ ನಿರೂಪಿಸಿದರು.
ಮಾದರಿಯಾದ ಕಾರ್ಯಕ್ರಮ
ರಾಮಚಂದರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಆಶ್ರಯ ಸಮುದಾಯವು ನಡೆಸುತ್ತಿರುವ ಜನ ಸೇವಾ ಕಾರ್ಯಕ್ರಮಗಳು ಶ್ಲಾಘ ನೀಯ ಮತ್ತು ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು,ಇತರ ಸಂಸ್ಥೆಗಳಿಗೆ ಮಾದರಿ ಹೆಜ್ಜೆ ಹಾಕಿಕೊಟ್ಟಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Train; ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ?
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.