ಇದು ದನದ ದೊಡ್ಡಿಯಲ್ಲ, ಸಾರ್ವಜನಿಕ ಬಸ್ ತಂಗುದಾಣ!
Team Udayavani, Jan 3, 2018, 3:03 PM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸುಳ್ಯ ಮುಖ್ಯ ರಸ್ತೆಯ ಮಲಯಾಳ ಬಳಿ ಸಾರ್ವಜನಿಕ ಬಸ್ ತಂಗುದಾಣವಿದೆ. ಶಿಥಿಲಗೊಂಡ ಈ ತಂಗುದಾಣ ಬಳಕೆಗೆ ಯೋಗ್ಯವಾಗಿಲ್ಲ. ದನದ ದೊಡ್ಡಿಯಂತೆ ಕಾಣುವ ಇದು ಸಾರ್ವಜನಿಕರ ಬಳಕೆಯ ಬಸ್ ತಂಗುದಾಣ.
ಸುಬ್ರಹ್ಮಣ್ಯ ನಗರದಿಂದ ಸುಳ್ಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ನಗರದಿಂದ 2. ಕಿ.ಮೀ. ದೂರದಲ್ಲಿ ಮಲಯಾಳದಲ್ಲಿ ಈ ತಂಗುದಾಣವಿದೆ. ಸುಬ್ರಹ್ಮಣ್ಯ ಸ್ಥಳಿಯಾಡಳಿತ ಈ ತಂಗುದಾಣ ನಿರ್ಮಿಸಿದೆ. ಸಾರ್ವಜನಿಕರು ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಂಡು ವಿಶ್ರಾಂತಿ ಪಡೆಯಲು ಅನುಕೂಲವಾಗಿದ್ದ ಈ ತಂಗುದಾಣ ಈಗ ಶಿಥಿಲಗೊಂಡು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ.
ತಂಗುದಾಣದ ಮೇಲ್ಛಾವಣಿ ಬೀಳುವ ಸ್ಥಿತಿಯಲ್ಲಿದೆ. ಗೋಡೆಯೂ ಶಿಥಿಲಗೊಂಡಿದೆ. ತಂಗುದಾಣದ ಒಳ ಪ್ರವೇಶಿಸಿದರೆ ತ್ಯಾಜ್ಯದ ರಾಶಿಯೇ ಕಣ್ಣಿಗೆ ಬೀಳುತ್ತದೆ. ಸ್ವತ್ಛತೆ ಸ್ವಲ್ಪವೂ ಇಲ್ಲ. ಕಸ-ಕಡ್ಡಿ, ಪ್ಲಾಸ್ಟಿಕ್ ವಸ್ತುಗಳು, ಬೈಹುಲ್ಲು ತುಂಬಿ ದನದ ದೊಡ್ಡಿಯಂತಿದೆ ಈ ತಂಗುದಾಣ. ಅಲ್ಲಿ ಕುಳಿತುಕೊಳ್ಳುವುದು ಒತ್ತಟ್ಟಿಗಿರಲಿ, ನಿಲ್ಲುವುದಕ್ಕೂ ಆಗದ ಸ್ಥಿತಿ. ಮಳೆಯಾಲ, ಪೈಲಾಜೆ ಪರಿಸರದವರ ಬಳಕೆಗೆ ಇರುವ ತಂಗುದಾಣವಿದು. ಐನಕಿದು-ಸುಬ್ರಹ್ಮಣ್ಯ ರಸ್ತೆಯಾಗಿ ಪ್ರಯಾಣ ಬೆಳೆಸಿ ಬರುವ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಐನಕಿದು, ಬಾಳುಗೋಡು ಭಾಗದವರು ದೂರದ ಊರುಗಳಿಗೆ ತೆರಳಲು ಇಲ್ಲಿ ಬಸ್ಸಿಗೆ ಕಾಯುತ್ತಾರೆ. ಆ ಭಾಗದ ನಾಗರಿಕರು, ಶಾಲಾ -ಕಾಲೇಜು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ನಿಂತು ವಾಹನಗಳಿಗೆ ಕಾಯಬೇಕು. ಸಂಬಂಧಿಸಿದವರು ಇದರ ದುರಸ್ಥಿಗೆ ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.