“ಪಂಪ್‌ವೆಲ್ ಫ್ಲೈಓವರ್: ಸಂಸದರು ಕೈಬಿಟ್ಟ ಕಾರಣಕ್ಕೆ ಜಿಲ್ಲಾಡಳಿತದಿಂದ ಕಾಮಗಾರಿ ಪ್ರಗತಿ’
Team Udayavani, Jan 28, 2020, 1:21 PM IST
ಮಹಾನಗರ: ನಗರದ ಪಂಪ್ ವೆಲ್ ಪ್ಲೈಓವರ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ವರ್ಷಾನುಗಟ್ಟಲೇ ಬೇಕಾಯಿತು. ಆದರೆ ಇತ್ತೀಚೆಗೆ ಸಂಸದರು ಕಾಮಗಾರಿ ವಿಷಯದಲ್ಲಿ ತಾನಿಲ್ಲ ಎಂದು ಅಸಹಾಯಕರಾಗಿ ಕೈಚೆಲ್ಲಿ, ದ.ಕ. ಜಿಲ್ಲಾಧಿಕಾರಿಯವರ ಹೆಗಲಿಗೆ ಹಾಕಿದ್ದರು. ಆ ಬಳಿಕ ಜಿಲ್ಲಾಡಳಿತದಿಂದಲೇ ಕಾಮಗಾರಿಯ ಉಸ್ತುವಾರಿ ನೋಡಿಕೊಂಡ ಬಳಿಕ ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಸತ್ಯಶೋಧನ ಸಮಿತಿಯಿಂದ ಸೋಮವಾರ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸುಮಾರು 10 ವರ್ಷಗಳ ಬಳಿಕ ಪಂಪ್‌ವೆಲ್ ಮೇಲ್ಸೇತುವೆ ಈಗ ವಾಹನಗಳ ಸಂಚಾರಕ್ಕೆ ಸಿದ್ಧಗೊಂಡಿರುವುದಕ್ಕೆ ಕಾರಣ ಸಂಸದರಲ್ಲ, ಬದಲಾಗಿ ಜಿಲ್ಲಾಡಳಿತ ಕಾರಣ ಎಂದರು.
ಸಂಸದರು ಕೈಬಿಟ್ಟ ಮೇಲಾದರೂ ಕಾಮಗಾರಿ ಪ್ರಗತಿ ಆಗಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸದಸ್ಯರಾದ ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿ’ಸೋಜಾ, ಕಾಂಗ್ರೆಸ್ ಮುಖಂಡರಾದ ಕೇಶವ್ ಮರೋಳಿ, ಆಶಿತ್ ಪಿರೇರಾ, ನಿರಜ್ ಚಂದ್ರ ಪಾಲ್, ಜಯಶೀಲ ಅಡ್ಯಂತಾಯ, ಸಂಶುದ್ದೀನ್ ಬಂದರ್, ಹೇಮಂತ ಗರೋಡಿ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.