ಜ. 19, 20: ರಾಷ್ಟ್ರೀಯ ಸಾಂಸ್ಕೃತಿಕ ಮಹೋತ್ಸವ ಮಂಗಳೂರು ಸಜ್ಜು
Team Udayavani, Jan 18, 2018, 10:49 AM IST
ಮಹಾನಗರ: ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ವತಿಯಿಂದ ಅದ್ದೂರಿಯ ರಾಷ್ಟ್ರೀಯ ಸಾಂಸ್ಕೃತಿಕ ಮಹೋತ್ಸವಕ್ಕೆ ಕಡಲನಗರಿ ಮಂಗಳೂರು ಸಜ್ಜಾಗುತ್ತಿದೆ. ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ, ಆಚಾರ- ವಿಚಾರ, ಆಹಾರ ಪದ್ಧತಿಯನ್ನು ಪರಿಚಯಿಸುವ ಈ ಉತ್ಸವವು ಜ. 19 ಮತ್ತು 20ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.
ನೃತ್ಯ, ಸಂಗೀತ, ಕಲೆ, ಆಹಾರ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಈ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದ್ದು, ನೂರಾರು ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಲಿದ್ದಾರೆ. ಕರ್ನಾಟಕದಲ್ಲಿ ಈ ಉತ್ಸವವು ಜ. 14ಕ್ಕೆ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ಜ. 17ರಿಂದ ಹುಬ್ಬಳ್ಳಿ- ಧಾರವಾಡದಲ್ಲಿ ನಡೆದು ಇದೀಗ ಜ. 19ರಿಂದ ಮಂಗಳೂರಿನಲ್ಲಿ ನಡೆಯುತ್ತದೆ. ಸಂಜೆ 6ರಿಂದ ಜನರು ಇದನ್ನು ವೀಕ್ಷಿಸಬಹುದಾಗಿದೆ.
26 ನೃತ್ಯ ತಂಡಗಳು
ವಿವಿಧ ರಾಜ್ಯಗಳ ಸುಮಾರು 26 ನೃತ್ಯ ತಂಡಗಳ ನೃತ್ಯ ಪ್ರದರ್ಶನ ಉತ್ಸವದಲ್ಲಿ ಕಾಣಬಹುದಾಗಿದೆ. ಅರುಣಾಚಲ ಪ್ರದೇಶದ ಪಕೀತು, ಉತ್ತರಾಕಾಂಡ್‌ನ ಚೋಲಿಯಾ, ತಾಂಡ್ಯ, ಹೀಗೆ ಅನೇಕ ಬಗೆಯ ನೃತ್ಯ ಶೈಲಿ ಪ್ರದರ್ಶನಗೊಳ್ಳಲಿದೆ. ಸುಮಾರು 400ಕ್ಕೂ ಅಧಿಕ ಕಲಾವಿದರು ತಮ್ಮ ರಾಜ್ಯದ ಸಂಸ್ಕೃತಿಯನ್ನು ನೃತ್ಯದ ಮೂಲಕ ಪ್ರದರ್ಶಿಸಲಿದ್ದಾರೆ.
ವಿವಿಧ ರಾಜ್ಯಗಳ ಸ್ಟಾಲ್‌ಗಳು
ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದಲ್ಲಿ ವಿವಿಧ ರಾಜ್ಯಗಳ 21 ಸ್ಟಾಲ್‌ಗಳಿರುತ್ತವೆ. ಅಲ್ಲಿನ ವಿಶೇಷ ಶೈಲಿಯ ಬಟ್ಟೆಗಳು, ಆಭರಣಗಳು, ಕರಕುಶಲ ವಸ್ತುಗಳು ಸಹಿತ ಇನ್ನಿತರ ಗೃಹೋಪಯೋಗಿ ಉತ್ಪನ್ನಗಳ ಪ್ರದರ್ಶನವಿರುತ್ತದೆ. ಗೋವಾದ ಸೀ ಶೆಲ್, ಗುಜರಾತ್‌ನ ಎಂಬ್ರೈಡರಿ, ರಾಜಸ್ಥಾನದ ಕೋಟ ದೋರಿಯಾ ಸಾರಿ, ಮಹಾರಾಷ್ಟ್ರದ ಕೋಲಾಪುರಿ ಚಪ್ಪಲ್, ಬೀಡ್ ವರ್ಕ್ ಜ್ಯುವೆಲ್ಲರಿ, ಮಧ್ಯಪ್ರದೇಶದ ಮಹೇಶ್ವರಿ ಸಾರಿ, ಉತ್ತರಾಖಂಡದ ಲೇಡಿಸ್ ಕುರ್ತಾ, ಹೋಮ್ ಫರ್ನಿಶಿಂಗ್, ಬೆಡ್ ಶೀಟ್, ಝಾರ್ಖಂಡ್‌ನ ಸಾರೀ, ಪಂಜಾಬ್‌ನ ಪುಲ್ಕರಿ ಸೂಟ್ಸ್, ಪಂಜಾಬಿ ಜುಟ್ಟಿ, ಪಶ್ಚಿಮ ಬಂಗಾಲದ ಕಾಂತಾ ಸ್ಟಿಚ್, ಟೆರ್ರಾಕೋಟಾ ಜುವೆಲ್ಲರಿ, ಅಸ್ಸಾಂನ ಬ್ಯಾಂಬೋ, ಕೇನ್, ವುಡ್ ಉತ್ಪನ್ನಗಳು, ಒಡಿಶಾದ ಪಾಮ್ ಲೀಫ್ ಚಿತ್ರಗಳ ಪ್ರದರ್ಶನವಿರುತ್ತದೆ.
ಆಹಾರ ಮಳಿಗೆಗಳು
ಮಹೋತ್ಸವದಲ್ಲಿ ಬೇರೆ ರಾಜ್ಯಗಳ 5 ಸ್ಟಾಲ್‌ಗಳು ಕೂಡ ಇರುತ್ತದೆ. ರಾಜಾಸ್ಥಾನ, ಮಹಾರಾಷ್ಟ್ರ, ಬಿಹಾರ, ಇತ ರ ರಾಜ್ಯಗಳ ಖಾದ್ಯಗಳು ಕೂಡ ಪ್ರದರ್ಶನಗೊಳ್ಳಲಿದೆ.
ಏಕತೆ ಸಾರುವ ಪ್ರದರ್ಶನ
ದೇಶದ ವಿವಿಧ ರಾಜ್ಯಗಳ ಜನರ ಸಂಸ್ಕೃತಿಯನ್ನು ಪರಸ್ಪರ ಅರಿತುಕೊಂಡು ಹೊಂದಾಣಿಕೆಯಿಂದ ಬದುಕುವುದೇ
ಮಹೋತ್ಸವದ ಮೂಲ ಉದ್ದೇಶವಾಗಿದೆ. ದೇಶದ ವೈವಿಧ್ಯತೆ ಹಾಗೂ ಏಕತೆ ಸಾರುವ ಉತ್ಸವದಲ್ಲಿ ವಿವಿಧ ರಾಜ್ಯಗಳ ಕಲಾವಿದರು ತಮ್ಮ ಕಲಾನೈಪುಣ್ಯ ಪ್ರದರ್ಶಿಸಲಿದ್ದಾರೆ.
- ನಳಿನ್‌ಕುಮಾರ್ ಕಟೀಲು
ಸಂಸದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.