ಜ.19-20: ಗುರುಪುರ ‘ಪರ್ಬೊದ ಸಿರಿ’ ಗ್ರಾಮೀಣ ಬದುಕಿನ ಅನಾವರಣ
Team Udayavani, Jan 17, 2018, 10:55 AM IST
ಮಹಾನಗರ: ಗ್ರಾಮೀಣ ಬದುಕಿನ ಗತ ಇತಿಹಾಸವನ್ನು ನೆನಪಿಸುವ ಹಿನ್ನೆಲೆಯಲ್ಲಿ ಹಾಗೂ ಮರೆಯಾಗುತ್ತಿರುವ
ಗ್ರಾಮೀಣ ಬದುಕಿನ ಸೊಗಡು ಬಿಂಬಿಸುವ ಆಶಯದೊಂದಿಗೆ ಗುರುಪುರ ಗೋಳಿದಡಿಗುತ್ತಿನಲ್ಲಿ ‘ಗುತ್ತುದ ವರ್ಸೊದ ಪರ್ಬೊದ ಅಂಗವಾಗಿ ‘ಪರ್ಬೊದ ಸಿರಿ’ ಕಾರ್ಯಕ್ರಮ ಜ.19 ಬೆಳಗ್ಗಿನಿಂದ ಜ.20ರ ರಾತ್ರಿಯವರೆಗೆ ಗುರುಪುರ ಗೋಳಿದಡಿ ಗುತ್ತುವಿನ ಶ್ರೀ ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ನಡೆಯಲಿದೆ ಎಂದು ಗೋಳಿದಡಿಗುತ್ತುವಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
ತುಳುನಾಡಿನ ಗತಕಾಲದ ಜೀವನ ಶೈಲಿ ನಮ್ಮ ಸುಂದರ ಹಾಗೂ ನೈಜ ಬದುಕಿಗೆ ಸಾಕ್ಷಿಯಾಗಿದ್ದರೆ, ಅದು ಇಂದು ಮಾಯವಾಗಿ ಜನ ಪರಕೀಯ ಜೀವನ ಶೈಲಿಯೇ ಶ್ರೇಷ್ಠ ಎನ್ನುವ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ನಮ್ಮೂರ ಜಾತ್ರೆ, ಉತ್ಸವಗಳು ನಿಧಾನವಾಗಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತುಳುನಾಡಿನ ವಿನೂತನ ಕಾರ್ಯಕ್ರಮವಾಗಿ ಇದು ಮೂಡಿ ಬರಲಿದೆ. ಗ್ರಾಮ ಜೀವನವನ್ನು ಬಿಂಬಿಸಿ ಪುನರುತ್ಥಾನಗೊಳಿಸುವ ಧ್ಯೇಯದೊಂದಿಗೆ ಕಾರ್ಯ
ಕ್ರಮ ಸಂಘಟಿಸಲಾಗಿದೆ.
ಜ.19ರಂದು ಬೆಳಗ್ಗೆ 9ರಿಂದ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ಗೋಳಿದಡಿಗುತ್ತುವಿನಲ್ಲಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಪ್ರೀತ್ಯರ್ಥವಾಗಿ ಶ್ರೀ ಚಂಡಿಕಾ ಹೋಮ, ಬೆಳಗ್ಗೆ 8.45ರಿಂದ ಶ್ರೀ ಮೂಡು ಗಣಪತಿ ಸೇವೆ ಜರಗಲಿದೆ.
ಬೆಳಗ್ಗೆ 9.30ಕ್ಕೆ ಪಾರಂ ಪರಿಕ ಶೈಲಿಯಲ್ಲಿ ‘ಪರ್ಬೊದ ಸಿರಿ’ ಉದ್ಘಾಟನೆಗೊಳ್ಳಲಿದೆ. ಗ್ರಾಮೀಣ ಕುಲ ಕಸುಬುದಾರ
ಹಿರಿಯರು ಉದ್ಘಾಟನೆ ನೆರವೇರಿಸಲಿದ್ದಾರೆ. ಗುರುಪುರ ಹಾಗೂ ಸುತ್ತಮುತ್ತಲಿನ 10 ಗ್ರಾಮಗಳ ಗ್ರಾಮೀಣ ಪುರುಷರಿಗೆ, ಮಹಿಳೆಯರಿಗೆ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ವಿವಿಧ ರೀತಿಯ ಸರಕುಗಳ ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಗುತ್ತಿನ ವರ್ಷದ ಒಡ್ಡೊಲಗ ನಡೆಯಲಿದ್ದು ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಒಟ್ಟು 10 ಗ್ರಾಮಗಳ ಪುರುಷರು ಹಾಗೂ ಮಹಿಳೆಯರು ಶಕ್ತಿಕಲ್ಲು ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಶಕ್ತಿ ಕಲ್ಲು ಎತ್ತುವ ಸ್ಪರ್ಧೆ ಜ.19 ಹಾಗೂ 20ರಂದು ಸಂಜೆ 6ರಿಂದ 8 ಗಂಟೆಯವರೆಗೆ ಜರಗಲಿದೆ. ಸ್ಪರ್ಧಿಗಳು ತಾವು ಬರುವಾಗ ತಮ್ಮ ಸ್ಥಿರ ವಿಳಾಸದ ಬಗ್ಗೆ ಗುರುತಿನ ಪತ್ರ (ಆಧಾರ್ ಕಾರ್ಡ್) ತರಬೇಕು. ಎಲ್ಲರಿಗೂ ಊಟೋಪಚಾರ ವ್ಯವಸ್ಥೆ ಇರಲಿದೆ. ಎರಡೂ ದಿನಗಳಲ್ಲಿ ರಾತ್ರಿ ಕಾರ್ಯಕ್ರಮಗಳು ಮುಗಿದ ಅನಂತರ ಹಿಂದಿರುಗಲು ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.