ಮಂಗಳೂರು ಧರ್ಮ ಪ್ರಾಂತದಿಂದ ‘ಜಲ ಬಂಧನ್’
Team Udayavani, Jun 9, 2019, 6:10 AM IST
ಮಹಾನಗರ: ನಗರದಲ್ಲಿ ಉಲ್ಭಣಿ ಸಿರುವ ಕುಡಿಯುವ ನೀರಿನ ಸಮಸ್ಯೆಗೆ ಭವಿಷ್ಯದ ದೃಷ್ಟಿಯಿಂದ ಶಾಶ್ವತವಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನೀರಿಕ್ಷೆ, ಆಶಯದೊಂದಿಗೆ ಸುದಿನವು ‘ಮನೆ-ಮನೆಗೆ ಮಳೆ ಕೊಯ್ಲು’ ಅಭಿಯಾನ ಪ್ರಾರಂಭಿಸಿದ್ದು, ಇದಕ್ಕೆ ಓದುಗರು ಸಹಿತ ಎಲ್ಲೆಡೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.
ನಗರ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಹಿಂದೆಯೇ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಅನೇಕರು ತಮ್ಮ ಯಶೋಗಾಥೆಗಳನ್ನು ಸುದಿನ ಜತೆಗೆ ಹಂಚಿಕೊಂಡಿದ್ದಾರೆ. ಮತ್ತೂಂದೆಡೆ, ಅಭಿ ಯಾನದ ಬಳಿಕ ಹಲವರು ಈ ವ್ಯವಸ್ಥೆ ಅಳವಡಿಸಿ ಕೊಳ್ಳಲು ಸಿದ್ಧರಾಗಿದ್ದು, ಅದಕ್ಕೆ ಪೂರಕವಾದ ಮಾಹಿತಿ, ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದಾರೆ. ನಗರವಾಸಿಗಳ ಎಲ್ಲ ಸಂಶಯಗಳಿಗೆ ಉತ್ತರ ನೀಡಿ, ಅವರು ಯಶಸ್ವಿಯಾಗಿ ಮನೆ ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲು ಅನುಕೂಲ ವಾಗುವಂತೆ ಸುದಿನವು ಶೀಘ್ರದಲ್ಲೇ ಸೂಕ್ತ ವೇದಿಕೆಯೊಂದನ್ನು ಕಲ್ಪಿಸಲಿದೆ.
ಇನ್ನೊಂದೆಡೆ, ‘ಮನೆ-ಮನೆಗೆ ಮಳೆಕೊಯ್ಲು’ ನಗರದೆಲ್ಲೆಡೆ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಬೇಕಾದರೆ, ಸ್ಥಳೀಯ ಆಡಳಿತ ವ್ಯವಸ್ಥೆ, ಸಂಬಂಧಪಟ್ಟ ಅಧಿಕಾರಿ ವರ್ಗದವರು, ಜನಪ್ರತಿ ನಿಧಿಗಳು, ಸಮುದಾಯ- ಸಂಘಟನೆಗಳು ಬದ್ಧತೆ, ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
ಮಂಗಳೂರಿನ ಕೆಥೋಲಿಕ್ ಕ್ರೈಸ್ತ ಸಮಾಜದ ಪ್ರಾತಿನಿಧಿಕ ಸಂಸ್ಥೆ ಮಂಗಳೂರು ಧರ್ಮ ಪ್ರಾಂತದಿಂದ ನಮ್ಮ ‘ಮನೆ-ಮನೆಗೆ ಮಳೆ ಕೊಯ್ಲು’ ಅಭಿಯಾನಕ್ಕೆ ಸ್ಪಂದನೆ ನಿರೀಕ್ಷಿಸಿದ್ದು, ಅದಕ್ಕೆ ಸಕಾರಾತ್ಮಕ ಪ್ರೋತ್ಸಾಹ ಲಭಿಸಿದೆ.
ಸಮಾಜಕ್ಕೆ ಮಾದರಿ
ಮಂಗಳೂರು ಧರ್ಮ ಪ್ರಾಂತವು ಪರಿಸರ ಸಂರಕ್ಷಣೆ ಸಹಿತ ಮಳೆಕೊಯ್ಲು ಅಳವಡಿಸುವುದಕ್ಕೆ ಈ ಹಿಂದಿನಿಂದಲೂ ಆದ್ಯತೆ ನೀಡುತ್ತಾ ಬಂದಿದೆ. ಈಗಾಗಲೇ ಹಲವು ಚರ್ಚ್‌ಗಳ ವ್ಯಾಪ್ತಿಯಲ್ಲಿ ಕ್ರಿಶ್ಚಯನ್ ಸಮುದಾಯದ ಮನೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗದರ್ಶನ ನೀಡಿ, ಪ್ರೇರಣೆಯ ಜತೆಗೆ ಸಮಾಜಕ್ಕೆ ಮಾದರಿಯೂ ಆಗಿದೆ. ಅದ ರಂತೆ, ಸಂಸ್ಥೆಯ ಬಿಷಪ್ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪರಿಸರ ಸಂಬಂಧಿತ ವಿಷಯಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸುದಿನ ಪ್ರಾರಂಭಿಸಿರುವ ‘ಮನೆ-ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ನೂತನ ಬಿಷಪ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದು, ಮಳೆಕೊಯ್ಲು ಕಾರ್ಯಕ್ರಮವನ್ನು ಧರ್ಮ ಪ್ರಾಂತ ವ್ಯಾಪ್ತಿಯ ಎಲ್ಲ ಚರ್ಚ್, ಸಮುದಾಯದಲ್ಲಿ ಅಳವಡಿಸಲು ಉತ್ತೇಜಿಸುವ ಮಾರ್ಗದರ್ಶನ ನೀಡಿರುವುದು, ಎಲ್ಲ ಚರ್ಚ್ ಗಳಲ್ಲಿ ಅಳವಡಿಕೆಗೆ ಸುತ್ತೋಲೆ ಕೂಡ ಕಳುಹಿಸಿರುವುದು ಗಮನಾರ್ಹ.
ಜಲ ಬಂಧನ್
ಪರಿಸರ ಸಂರಕ್ಷಣೆ ಕುರಿತಂತೆ ಮಂಗಳೂರು ಧರ್ಮಪ್ರಾಂತವು ಹಲವಾರು ವರ್ಷಗಳಿಂದ ವಿವಿಧ ಯೋಜನೆಗಳನ್ನು ನಡೆಸುತ್ತಿದ್ದು, ಈ ವರ್ಷ ನೀರಿನ ತೀವ್ರತೆ ಸಮಸ್ಯೆಯನ್ನು ಮನ ಗಂಡು ‘ಜಲ ಬಂಧನ್’ ಎಂಬ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಜಲ ತಜ್ಞರು ಮತ್ತು ಎಂಜಿನಿಯರುಗಳನ್ನು ಒಳಗೊಂಡ ‘ಜಲ ಯೋಧರ ಸಂಘ’ದ ಮುಖಾಂತರ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ.
ಚರ್ಚ್‌ನಲ್ಲಿ ಮಾದರಿ ಮಳೆಕೊಯ್ಲು
ಜಲ ಸಂರಕ್ಷಣೆಗೆ ಕಠಿಬದ್ಧ, ಮಾದರಿ
ಜಲಬಂಧನ್ ವಿನೂತನ ಯೋಜನೆ
ಮಳೆಕೊಯ್ಲು ವ್ಯವಸ್ಥೆಯ ಅಳವಡಿಕೆಯನ್ನು ಉತ್ತೇಜಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲೆಂದೇ ‘ಸುದಿನ’ವು ‘ಮನೆ-ಮನೆಗೆ ಮಳೆಕೊಯ್ಲು’ ಎನ್ನುವ ಅಭಿಯಾನ ಪ್ರಾರಂಭಿಸಿದೆ. ಇದರಲ್ಲಿ ಮಳೆಕೊಯ್ಲು ಅಳವಡಿಸುವ ಬಗೆ, ಅದರಿಂದಾಗುವ ಪ್ರಯೋಜನ, ಖರ್ಚು-ವೆಚ್ಚ ಮತ್ತು ಮಳೆಕೊಯ್ಲು ಸಾಧಕರ ಯಶೋಗಾಥೆಗಳನ್ನು ವಿವರಿಸಲಾಗುವುದು.
ದೇಶ ಕಾಯುವ ಸೈನಿಕರ ಹಾಗೆ ನಾವೆಲ್ಲರೂ ಜಲ ಸಂರಕ್ಷಿಸುವ ಯೋಧ ರಾಗಬೇಕು. ಈ ಸುಂದರವಾದ ಸೃಷ್ಟಿಯು ದೇವರ ಕಲಾಕೃತಿ. ಇಲ್ಲಿ ನಾವು ಶಾಂತಿ, ಸಹಬಾಳ್ವೆಯಿಂದ ಜೀವಿಸಲು ಪ್ರಕೃತಿಯ ರಕ್ಷಣೆಯೂ ಅಗತ್ಯ. ಧರ್ಮಪ್ರಾಂತವು ಪ್ರಕೃತಿ ಸಂರಕ್ಷಣೆಗಾಗಿ ಈ ವರ್ಷ ‘ವೃಕ್ಷ ವಂದನ್’, ‘ಜಲಬಂಧನ್’ ಯೋಜನೆಗಳನ್ನು ಹಮ್ಮಿಕೊಂಡಿದೆ. ‘ವೃಕ್ಷ ವಂದನ್’ ಯೋಜನೆಯಡಿ ಅರಣ್ಯ ಇಲಾಖೆಯ ಸಹಯೋಗದಲ್ಲಿ 70,000 ಸಸಿಗಳನ್ನು ವಿತರಿಸಲಾಗುವುದು. ನೀರಿನ ಸಂರಕ್ಷಣೆಗೆ ‘ಜಲಬಂಧನ್’ ಯೋಜನೆಯನ್ನು ಜಲ ಯೋಧರ ಸಂಘದ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.
ಪೋಪ್ ಫ್ರಾನ್ಸಿಸ್ ಅವರು ಹೊರಡಿಸಿದ ವಿಶ್ವ ಪತ್ರ ‘ಲಾವ್ದಾತೊ ಸಿ’ಯಲ್ಲಿ ಪ್ರಕೃತಿ ಸಂರಕ್ಷಣೆ ಮಾಡಬೇಕೆಂದು ಕರೆ ನೀಡಿದ್ದರು. ಪೋಪ್ 16ನೇ ಬೆನೆಡಿಕ್ಟ್ ಅವರು 2010ರಲ್ಲಿ ‘ನೀವು ಶಾಂತಿ ಗಳಿಸ ಬೇಕಾದರೆ ಪ್ರಕೃತಿಯನ್ನು ರಕ್ಷಿಸಿ’ ಎಂಬ ಸಂದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಧರ್ಮ ಪ್ರಾಂತವು ಪ್ರಕೃತಿ ಸಂರಕ್ಷಣೆಗೆ ಪ್ರಾಮುಖ್ಯ ನೀಡಲಿದೆ. ಜೂ. 30ರಂದು ‘ಲಾವ್ದಾತೊ ಸಿ ಸಂಡೇ’ ಆಚರಿಸಲಾಗುವುದು. ಜಲ ಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಸಾಧ್ಯವಿರುವ ಎಲ್ಲರೂ ಕೈಗೊಳ್ಳಬೇಕು. ಉದಯವಾಣಿಯ ‘ಸುದಿನ’ ಈ ದಿಶೆಯಲ್ಲಿ ‘ಮನೆ-ಮನೆಗೆ ಮಳೆಕೊಯ್ಲು’ ಅಭಿಯಾನ ಹಮ್ಮಿ ಕೊಂಡಿ ರುವುದು ಶ್ಲಾಘನೀಯ. ಎಲ್ಲರಿಗೂ ಇದರ ಸಂದೇಶ ತಲುಪಬೇಕು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಎಲ್ಲರ ಮನೆಗಳಲ್ಲಿಯೂ ಮಳೆ ಕೊಯ್ಲು ವ್ಯವಸ್ಥೆ ಬರಲಿ ಎಂದು ಮಂಗಳೂರು ಧರ್ಮಪ್ರಾಂತ ಧರ್ಮಾಧ್ಯಕ್ಷರಾದ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಆಶಿಸಿದರು.
ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆವಾಟ್ಸಪ್ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.
– ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.