ಜಲಸಂರಕ್ಷಣೆಗೆ ಮಾದರಿ: ಕೊರತ್ತೋಡಿ ಕೆರೆಗಳಲ್ಲಿ ನೀರಿಗೆ ಕೊರತೆ ಇಲ್ಲ
Team Udayavani, Apr 6, 2017, 3:40 PM IST
ಸುಳ್ಯ: ಈ ಸುದ್ದಿ ಸುಳ್ಯ ತಾಲೂಕಿನಿಂದ ಬಂದಿದೆ. ಕಳೆದ ಬೇಸಗೆ ಪಾಠ ಕಲಿಸುವುದಕ್ಕಿಂತ ಮೊದಲೇ ಪ್ರಕೃತಿ ಪಾಠವನ್ನು ಕಲಿತು ಬದುಕುತ್ತಿರುವವರ ಕಥೆಯಿದು. ತಾಲೂಕಿನಲ್ಲಿ ಈಗ ಅಂತರ್ಜಲ ಮಟ್ಟ ಆರೋಗ್ಯ ಕರವಾಗಿಲ್ಲ. ಕಳೆದ ವರ್ಷ 400 ಅಡಿವರೆಗೆ ಕೊರೆ ದಾಗ 2 ಇಂಚು ನೀರು ಸಿಗುತ್ತಿತ್ತು. ಈ ವರ್ಷ ಅಷ್ಟೇ ನೀರಿಗೆ 600 ಅಡಿ ದಾಟ ಬೇಕಂತೆ. ಈ ಬೇಸರದ ಮಧ್ಯೆಈ ಗ್ರಾಮ ದವರ ಸುದ್ದಿ ಕೇಳಿ.
ಕಳೆದ ಬೇಸಗೆಯಲ್ಲಿ ತಾಲೂಕಿಗೆ ತಾಲೂಕೇ ನೀರು ಅರಸಿಕೊಂಡು ಹೊರಟಿದ್ದರೆ, ಕೊರತ್ತೋಡಿ ಬೊಳ್ಳಾಜೆ ಗ್ರಾಮಗಳ ಜನತೆ ನಿಶ್ಚಿಂತರಾಗಿದ್ದರು. ಐವತ್ತು ವರ್ಷಗಳಿಂದ ಮರ್ಕಂಜ ಗ್ರಾಮದ ಕೊರತ್ತೋಡಿ, ಬೊಳ್ಳಾಜೆಯ ಸುಮಾರು 75 ಮನೆಯವರು ಸೇರಿ ತಮ್ಮ ನೀರಿನ ಅಗತ್ಯಕ್ಕೆ ತಮ್ಮದೇ ದಾರಿ ಮಾಡಿಕೊಂಡಿದ್ದಾರೆ.
ಗುಡ್ಡದಿಂದ ಬರುವ ನೀರಿಗೆ ಕೊರತ್ತೋಡಿಯಲ್ಲಿ ಮಣ್ಣಿನ ಕಟ್ಟ ಕಟ್ಟಿ ಅದನ್ನು ಜಲಾಶಯವನ್ನಾಗಿ ಮಾಡಿ ನೀರು ಸಂಗ್ರಹಿ ಸಿದ್ದಾರೆ. ಒಟ್ಟು ಮೂರು ಕೆರೆಗಳನ್ನು ಅಭಿವೃದ್ಧಿ ಪಡಿಸ ಲಾಗಿದೆ. ಈ ನೀರ ಬ್ಯಾಂಕಲ್ಲಿದ್ದ ನೀರನ್ನು ಬೇಸಗೆ ಪೂರ್ತಿ ಕೃಷಿ ಮತ್ತು ಕುಡಿಯಲು ಉಪಯೋಗಿಸಿದರೂ ಬರಿದಾಗದು.
ಕಳೆದ ಬೇಸಗೆಯಲ್ಲೂ ಎಲ್ಲೆಡೆ ನೀರು ಬತ್ತಿದ್ದರೂ ಕೊರತ್ತೋಡಿ ಕಟ್ಟದಲ್ಲಿ ನೀರು ಬತ್ತಿರಲಿಲ್ಲ. ಈ 75 ಕುಟುಂಬಗಳಿಗೆ ಪಂಚಾಯಧಿತ್ ನೀರು ಪೂರೈಸುತ್ತಿದೆ. ಆದರೆ ಅದನ್ನೇ ನಂಬಿ ಕುಳಿತಿಲ್ಲ. ಈ ವ್ಯವಸ್ಥೆಯಲ್ಲಿ ತೊಡಕುಂಟಾದಾಗ ಇಲ್ಲಿನವರು ಕೆರೆಯತ್ತ ಮುಖ ಮಾಡುತ್ತಾರೆ. ಪ್ರಕೃತಿ ದತ್ತ ನೀರನ್ನು ಸಂರಕ್ಷಿಸಿ ಬಳಸುವ ಇಲ್ಲಿಯ ಗ್ರಾಮಸ್ಥರ ಜಾಣ್ಮೆ ಇತರರಿಗೂ ಮಾದರಿ.
ನೀರಿನ ಗಣಿತ
ಖಾಸಗಿ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ಜಾಗತಿಕವಾಗಿ ನಗರಗಳಲ್ಲಿನ ನೀರು ಪೂರೈಕೆ ವ್ಯವಸ್ಥೆಯಲ್ಲಿನ ಸೋರಿಕೆ ಮತ್ತು ಅಕ್ರಮ ಪೂರೈಕೆ ಶೇ. 37 ರಷ್ಟಿದೆ. ಈ ಪ್ರಮಾಣವನ್ನು ಡೆನ್ಮಾರ್ಕ್ ರಾಷ್ಟ್ರದಂತೆಯೇ ಶೇ. 5 ಕ್ಕೆ ಇಳಿಸುವಲ್ಲಿ ಯಶಸ್ವಿಯಾದರೆ ಈಧಿಗಿನ ಬೇಡಿಕೆಯನ್ನು ಈಡೇರಿಸಲು ಸಾಧ್ಯವಂತೆ.
ಹೀಗೂ ಉಳಿಸಿ
ಅಪಾರ್ಟ್‌ಮೆಂಟ್‌ಗಳಲ್ಲಿದ್ದು, ನಿಮ್ಮದೇ ಆದ ಗಾರ್ಡನ್, ಗಿಡಗಳ ಕುಂಡಗಳಿಲ್ಲವೆಂದುಕೊಳ್ಳಿ. ಆಗ ಅಕ್ಕಿ, ಬೇಳೆ ಇತ್ಯಾದಿಯನ್ನು ತೊಳೆದ ನೀರನ್ನು ಪೈಪಿನಲ್ಲಿ ಹರಿಯಬಿಡುವ ಅಗತ್ಯವಿಲ್ಲ. ಅದರ ಬದಲು ಆ ನೀರನ್ನು ಒಂದೆಡೆ ಸಂಗ್ರಹಿಸಿಟ್ಟು, ಅಡುಗೆ ಮಾಡಿದ ಪಾತ್ರೆಗಳನ್ನು ನೆನೆ ಹಾಕಲು ಬಳಸಬಹುದು. ಆಗ ಆ ಪಾತ್ರೆಗಳನ್ನು ತೊಳೆಯಲು ಹೆಚ್ಚು ನೀರು ಬೇಕಾಗುವುದಿಲ್ಲ.
ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ಒಗೆದ ಮೇಲೆ, ತೊಳೆದು (ರಿನ್ಸ್) ಹೊರ ಬಿಡುವ ನೀರನ್ನು ಸಂಗ್ರಹಿಸಿಟ್ಟುಕೊಂಡರೆ, ಮರು ದಿನ ಬಟ್ಟೆ ನೆನೆಸಲು ಬಳಸಬಹುದು. ಇದೇ ನೀರಿನಲ್ಲಿ ನೆಲ ಒರೆಸಲೂ ಬಹುದು.
ಅರ್ಥ ಹನಿ
ನೀರು ವರ್ತಮಾನ ವನ್ನಷ್ಟೇ ಉಳಿಸದು; ಭವಿಷ್ಯವನ್ನೂ ಬೆಳೆಸುತ್ತದೆ.
ತುಂಬೆ ನೀರಿನ ಮಟ್ಟ
4 ಮೀಟರ್ 55 ಸೆಂಟಿ ಮೀಟರ್
ಹಿತಮಿತವಾಗಿ ಬಳಸಿ
ಪ್ರತಿ ಹನಿ ನೀರಿಗೂ ಬೆಲೆ ಇದೆ ಎಂಬುದು ಅರಿವಾಗಿದೆ. ಪ್ರಕೃತಿ ಯಾವಾಗ ಮುನಿಸು ತೋರುತ್ತದೋ ಗೊತ್ತಾಗದು. ಸಂಕಷ್ಟ ಕಾಲದಲ್ಲಿ ನೀರಿಗಾಗಿ ಪರದಾಡದೆ ಇದ್ದುದನ್ನು ಹಿತಮಿತವಾಗಿ ಬಳಸುವುದು ಪ್ರತಿಯೊಬ್ಬರ ಜವಾಬ್ದಾರಿ.
ದಯಾನಂದ ಕೊರತ್ತೋಡಿ, ಮರ್ಕಂಜ
94% ಶುದ್ಧೀಕರಿಸಿದ ನೀರಿನ ಬಳಕೆ ದೇಶದಲ್ಲಿ ಹೆಚ್ಚಾಗುತ್ತಿದೆ. 2015ರಲ್ಲಿ ಶೇ.94ರಷ್ಟು ಮಂದಿ ಶುದ್ಧೀಕರಿಸಿದ ನೀರನ್ನೇ ಬಳಸುತ್ತಿದ್ದು, 2014ರಲ್ಲಿ ಇದು ಶೇ. 91 ಹಾಗೂ 2011ರಲ್ಲಿ ಶೇ. 90 ಆಗಿತ್ತು.
6% ದೇಶದಲ್ಲಿ ಕೊಳಕು ನೀರನ್ನು ಬಳಸುವವರ ಸಂಖ್ಯೆ ಇಳಿಕೆಯಾಗುತ್ತಿದೆ. 2015ರಲ್ಲಿ ಶೇ. 6ರಷ್ಟು ಮಂದಿ ಕೊಳಕು ನೀರನ್ನು ಬಳಸುತ್ತಿದ್ದು, 2014ರಲ್ಲಿ ಶೇ. 9, 2010ರಲ್ಲಿ ಶೇ. 10ರಷ್ಟಿತ್ತು.
ಗಂಗಾಧರ ಮಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.