“ಜಲಸಿರಿ’: ಬೆಂದೂರ್‌ನಲ್ಲಿ ಪ್ರಾಯೋಗಿಕ ಜಾರಿ; 585 ನೀರಿನ ಸಂಪರ್ಕ
24 ಗಂಟೆಯೂ ನಿರಂತರ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ.
Team Udayavani, Feb 24, 2023, 11:52 AM IST
ಮಹಾನಗರ: ಮಂಗಳೂರು ನಗರ ವ್ಯಾಪ್ತಿ ಯಲ್ಲಿ 24 ಗಂಟೆಯೂ ನೀರು ಪೂರೈಸುವ ಜಲಸಿರಿ ಯೋಜನೆ ಅನುಷ್ಠಾನ ವೇಗ ಪಡೆದಿದ್ದು, ಇದರಂತೆ ನಗರದ ಬೆಂದೂರ್ ವಲಯ ವ್ಯಾಪ್ತಿಯಲ್ಲಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ.
ವಲಯ 18ಸಿ (ಬೆಂದೂರ್)ಅನ್ನು 4 ಉಪವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಅದರಲ್ಲಿ 2 ಉಪವಲ ಯಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. 11.43 ಕಿ.ಮೀ ಕೊಳವೆ ವಿತರಣಾ ಜಾಲವನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ ಈಗಾಗಲೇ 10.14 ಕಿ.ಮೀ ವಿತರಣಾ ಜಾಲವನ್ನು ಅಳವಡಿಸಲಾಗಿದೆ. ಇಲ್ಲಿ 585 ಮನೆ, ಸಮುತ್ಛಯದ ಸಂಪರ್ಕ ಗುರುತಿಸಲಾಗಿದೆ. ಈ ಎಲ್ಲ ಸಂಪರ್ಕಗಳಿಗೆ ತಿಂಗಳೊಳಗೆ ನೀರಿನ ಸಂಪರ್ಕ ಮಾಡುವ ಬಗ್ಗೆ ಉದ್ದೇಶಿಸಲಾಗಿದೆ.
ಈ ಮಧ್ಯೆ 585 ಸಂಪರ್ಕಗಳ ಪೈಕಿ ಸುಮಾರು 200 ಸಂಪರ್ಕಗಳಿಗೆ ಈಗಾಗಲೇ ನೀರು ವಿತರಣೆಯೂ ನಡೆಯುತ್ತಿದೆ. ಇಲ್ಲಿನ ಹಳೆ ಪೈಪ್‌ಲೈನ್ ಬದಲು ಹೊಸ ಪೈಪ್‌ಲೈನ್‌ನಲ್ಲಿ ನೀರು ವಿತರಿಸಲಾಗುತ್ತಿದೆ. ಎಸ್‌ಸಿಎಸ್ ಆಸ್ಪತ್ರೆ ಭಾಗದಿಂದ ಬಲ್ಮಠ ಜಂಕ್ಷನ್, ಪೋಸ್ಟ್ ಆಫೀಸ್ ಭಾಗದ ಪರಿಧಿಯಲ್ಲಿ ಹೊಸ ಪೈಪ್‌ಲೈನ್ ಇದಕ್ಕಾಗಿ ಅಳವಡಿಸಿದೆ.
1 ಟ್ಯಾಂಕ್ ಮೀಸಲು
ಬೆಂದೂರ್‌ವೆಲ್‌ನಲ್ಲಿ 9, 10 ಹಾಗೂ 15 ಲಕ್ಷ ಲೀಟರ್ ಸಾಮರ್ಥಯದ ಮೂರು ಪ್ರತ್ಯೇಕ ಟ್ಯಾಂಕ್‌ಗಳಿವೆ. ಇದರಲ್ಲಿ 10 ಲಕ್ಷ ಲೀ. ನೀರಿನ ಒಂದು ಟ್ಯಾಂಕ್ ಅನ್ನು ಜಲಸಿರಿ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಬೆಂದೂರ್ ವಲಯ ಕ್ಕಾಗಿ ಮೀಸಲಿರಿಸಲಾಗಿದೆ. ಈ ಟ್ಯಾಂಕ್ ನಿಂದ ಹಳೆ ಪೈಪ್‌ಲೈನ್‌ಗೆ ಇದ್ದ ನೀರಿನ ಸಂಪರ್ಕವನ್ನು ಹೊಸ ಪೈಪ್‌ಲೈನ್‌ಗೆ ಜೋಡಿಸಲಾಗಿದೆ.
ಬೆಂದೂರು 10 ಲ.ಲೀ ಮೇಲ್ಮಟ್ಟದ ಜಲಸಂಗ್ರಹಗಾರದಿಂದ ನೀರು ಪೂರೈಸಲಾಗುತ್ತಿದೆ. ಈ ಮೇಲ್ಮಟ್ಟದ ಜಲ ಸಂಗ್ರಹಗಾರಕ್ಕೆ “ಫ್ಲೋ ಮೀಟರ್’ ಅಳವಡಿಸಲಾಗಿದೆ. ಇದರಿಂದಾಗಿ ದಿನನಿತ್ಯ ಬಳಸುವ ನೀರಿನ ಪ್ರಮಾಣ ವನ್ನು ತಿಳಿಯಬಹುದಾಗಿದೆ. ಸುಮಾರು 585 ನೀರಿನ ಗ್ರಾಹಕರ ಮಾಪಕಗಳನ್ನು ಬದಲಾಯಿಸಿ ಉತ್ತಮ ತಾಂತ್ರಿಕತೆಯ ಹೊಸ ಮಾಪಕಗಳನ್ನುಅಳವಡಿಸಲು ಉದ್ದೇಶಿಸಲಾಗಿದೆ. ಇದರಂತೆ ಈಗಾಗಲೇ 200 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿ ಹೊಸ ಮಾಪಕ ಅಳವಡಿಸಲಾಗಿದೆ. 300 ಮನೆ ಕಂಪೌಂಡವರೆಗೆ ನಳ ಸಂಪರ್ಕ ಕೊಳವೆಯನ್ನು ಅಳವಡಿಸಲಾಗಿದ್ದು ಜೋಡಣೆ ಕಾಮಗಾರಿ ಪ್ರಗತಿಯಲ್ಲಿರುತ್ತದೆ.
ನೀರಿನ ಕೊರತೆ-ಸವಾಲು!
ಜಲಸಿರಿ ಯೋಜನೆಯಲ್ಲಿ 24 ಗಂಟೆಯೂ ನಿರಂತರ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ. ಆದರೆ ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಲಭ್ಯತೆ ಸಾಕಷ್ಟು ಇಲ್ಲದ ಕಾರಣದಿಂದ 24 ಗಂಟೆಯೂ ನೀರು ಕೊಡುವುದು ಪ್ರಾಯೋಗಿಕವಾಗಿ ಕಷ್ಟ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಹೀಗಾಗಿ ಸದ್ಯ ಕನಿಷ್ಠ 3-4 ಗಂಟೆಯಾದರೂ ನೀರು ನೀಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.
ಎಲ್ಲ ವಾರ್ಡ್ ವ್ಯಾಪ್ತಿ ಯಲ್ಲಿಯೂ ಜಲಸಿರಿ ಜಾರಿ ಯಾದ ಬಳಿಕ 24 ಗಂಟೆ ನೀರು ಸರಾಗವಾಗಿ ನೀಡಬೇಕಾದರೆ ತುಂಬೆ ಡ್ಯಾಂ ಮೂಲವೊಂದೇ ಸಾಲದು. ಬದಲಾಗಿ ಪರ್ಯಾಯ ವ್ಯವಸ್ಥೆಯತ್ತ ಗಮನಹರಿಸಬೇಕಾಗುತ್ತದೆ. ಆದರೆ, ಪರ್ಯಾಯದ ಬಗ್ಗೆ ಪಾಲಿಕೆ ಮಾತ್ರ ಗಪ್‌ಚುಪ್!
ನಗರ ಪೂರ್ಣ “ಜಲಸಿರಿ’
ಮಂಗಳೂರು ಪಾಲಿಕೆಯ ಎಡಿಬಿ ನೆರವಿನ ಕ್ವಿಮಿಪ್ ಜಲ ಸಿರಿ ಯೋಜನೆಯಲ್ಲಿ ಕೆಯು ಐಡಿಎಫ್‌ಸಿ ವತಿಯಿಂದ ಅನುಷ್ಠಾನಿ ಸಲಾಗುತ್ತಿರುವ 24ಗಿ7 ಶುದ್ಧ ಕುಡಿಯುವ ನೀರಿನ ಯೋಜನೆ ಈಗಾಗಲೇ ಬಿರುಸಿನಿಂದ ನಡೆ ಯುತ್ತಿದೆ. ಒಟ್ಟು 792.42 ಕೋ. ರೂ ವೆಚ್ಚದಲ್ಲಿ (ಕಾಮಗಾರಿ ವೆಚ್ಚ 587.67 ಕೋ.ರೂ ಹಾಗೂ 8 ವರ್ಷಗಳ ಅವಧಿಗೆ ಕಾರ್ಯಾ ಚರಣೆ-ನಿರ್ವಹಣೆಗೆ 204.75 ಕೋ. ರೂ)ಕಾಮಗಾರಿ ನಡೆಸಲಾಗುತ್ತಿದೆ.
ಇದರಂತೆ ತುಂಬೆ ರಾಮಲ್ ಕಟ್ಟೆಯಲ್ಲಿ 81.7 ಎಂಎಲ್‌ಡಿ ಸಾಮರ್ಥಯದ ನೀರು ಶುದ್ಧೀಕರಣ ಘಟಕ (ಡಬ್ಲ್ಯೂ ಟಿಪಿ)ದ ಉನ್ನತೀಕರಣ, 8 ಸ್ಥಳಗ ಳಲ್ಲಿ ಇಂಟರ್ ಮೀಡಿಯೆಟ್ ಪಂಪಿಂಗ್ ಸ್ಟೇಷನ್, 19 ಮೇಲ್ಮಟ್ಟದ ಜಲಸಂಗ್ರಹಗಾರ (ಒಎಚ್‌ಟಿ) ಹಾಗೂ 2 ನೆಲಮಟ್ಟದ ಜಲಸಂಗ್ರಹಣಗಾರಗಳ (ಜಿಎಲ್ ಎಸ್‌ಆರ್)ನಿರ್ಮಾಣ ಹಾಗೂ 7 ಮೀ. ಒತ್ತಡದೊಂದಿಗೆ 1500 ಕಿ.ಮೀ. ವಿತರಣಾ ಜಾಲ ಹಾಗೂ 96,300 ನೀರಿನ ಜೋಡಣೆಗಳನ್ನು ಉನ್ನತೀಕರಿಸಲು ಈ ಯೋಜನೆಯಲ್ಲಿ ಉದ್ದೇಶಿಸಲಾಗಿದೆ.
ಶೀಘ್ರ ಅನುಷ್ಠಾನ
ಜಲಸಿರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಮಂಗಳೂರಿನಲ್ಲಿ ನಡೆಯುತ್ತಿದೆ. ಇದರಂತೆ, ಬೆಂದೂರ್ ವೆಲ್ ವಲಯದಲ್ಲಿ ಜಲಸಿರಿ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ. ಕೆಲವೇ ದಿನದಲ್ಲಿ ಇದರ ಅಧಿಕೃತ ಜಾರಿ ನಡೆಸಲಾಗುವುದು.
– ಜಯಾನಂದ ಅಂಚನ್, ಮೇಯರ್,
ಮಂಗಳೂರು ಪಾಲಿಕೆ
*ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.