ಜಾಲ್ಸೂರು: ಪ್ರಾಥಮಿಕ ಆರೋಗ್ಯ ಕೇಂದ್ರದ ಭರವಸೆ ಹುಸಿ
ಮೀಸಲಿಟ್ಟ ಜಾಗ ಸಾಲದು, ಜನಸಂಖ್ಯೆಯೂ ಕಮ್ಮಿ: 15 ವರ್ಷಗಳ ಬೇಡಿಕೆಗೆ ಸದ್ಯಕ್ಕಿಲ್ಲ ಮುಕ್ತಿ
Team Udayavani, Feb 2, 2020, 5:54 AM IST
ಜಾಲ್ಸೂರು : ಒಂದೂವರೆ ದಶಕದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಬೇಡಿಕೆಯಿಟ್ಟಿದ್ದ ಜಾಲ್ಸೂರು ಗ್ರಾಮಸ್ಥರಿಗೆ ಭಾರೀ ನಿರಾಸೆಯಾಗಿದೆ.
ಈ ಭಾಗದ ಜನರ ಆರೋಗ್ಯ ಕೇಂದ್ರದ ಕನಸು ಸದ್ಯಕ್ಕೆ ಈಡೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಬೇಕಾದ ಷರತ್ತುಗಳ ಅನ್ವಯ ಆರೋಗ್ಯ ಇಲಾಖೆ ಜನಸಂಖ್ಯೆ ಹಾಗೂ ಜಾಗದ ಕೊರತೆಯನ್ನು ಮುಂದಿಟ್ಟಿದೆ.
6,642 ಜನಸಂಖ್ಯೆ
ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಲ್ಸೂರು ಗ್ರಾಮದಲ್ಲಿ ಸುಮಾರು 1,352 ಮನೆಗಳಿವೆ. 2012ರ ಜನಗಣತಿಯ ಗ್ರಾಮದಲ್ಲಿ ಒಟ್ಟು 6,642 ಜನಸಂಖ್ಯೆಯಿದೆ. ಆದರೆ ವ್ಯವಸ್ಥಿತವಾದ ಚಿಕಿತ್ಸಾ ಸೌಲಭ್ಯ ಈ ಗ್ರಾಮದವರಿಗೆ ದೊರಕಿಲ್ಲ. ತುರ್ತು ಚಿಕಿತ್ಸೆಗಾಗಿ ಹತ್ತಾರು ಕಿ.ಮೀ. ಅಲೆದಾಡಬೇಕಾಗಿದೆ.
ಹುಸಿಯಾಗುವುದೇ?
ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಜಾಲೂÕರು ಗ್ರಾಮದ ಅಡಾRರು ಭಾಗದ ಮಾವಿನಕಟ್ಟೆ ಪರಿಸರದಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು. ಸುಮಾರು ಒಂದು ಎಕರೆಯಷ್ಟು ಇರುವ ಸರಕಾರಿ ಜಾಗವನ್ನು ಗ್ರಾಮ ಕರಣಿಕರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೀಸಲಿಟ್ಟಿತ್ತು.
ಸುಮಾರು 25,000 ರೂ. ಭರಿಸಿ ಗ್ರಾಮಸ್ಥರೆಲ್ಲ ಸೇರಿ ರಸ್ತೆಯನ್ನೂ ನಿರ್ಮಿಸಿದ್ದರು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕನಿಷ್ಠ 2 ಎಕರೆಯಷ್ಟಾದರೂ ಜಾಗ ಅನಿವಾರ್ಯ. ಒಂದು ವರ್ಷ ಕಟ್ಟಡ ಬಾಡಿಗೆಗೆ ಸಿಗಬೇಕು. ಗ್ರಾಮದಲ್ಲಿ 20,000 ಜನಸಂಖ್ಯೆ ಇರಬೇಕು. ಹತ್ತು ಕಿ.ಮೀ. ಒಳಗಡೆ ಯಾವುದೇ ಅಸ್ಪತ್ರೆ ಇರಬಾರದು ಎಂಬಿತ್ಯಾದಿ ಷರತ್ತುಗಳಿವೆ. ಹೀಗಾಗಿ ಅಡಾRರಿನಲ್ಲಿ ಮೀಸಲಿಟ್ಟ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವುದು ಬಹುತೇಕ ಅನುಮಾನವಾಗಿದೆ.
ಖಾಸಗಿ ಕ್ಲಿನಿಕ್ ಅವಲಂಬನೆ
ಕೇರಳ- ಕರ್ನಾಟಕ ಗಡಿಭಾಗದಲ್ಲಿ ಜಾಲ್ಸೂರು ಪ್ರಮುಖ ಪೇಟೆ. ಪಂಜಿಕಲ್ಲು, ಬೆಳ್ಳಿಪ್ಪಾಡಿ, ಬನಾರಿ, ದೇಲಂಪಾಡಿ, ಪರಪ್ಪ ಭಾಗ ಅಲ್ಲದೆ ಪಕ್ಕದ ಕನಕಮಜಲು ಗ್ರಾಮದ ಜನರು ಜಾಲೂÕರನ್ನೆ ಹೆಚ್ಚು ಅವಲಂಬಿಸಿದ್ದಾರೆ. ಕನಕಮಜಲು ಗ್ರಾಮದಲ್ಲಿ 498 ಮನೆಗಳಿದ್ದು, ಒಟ್ಟು 2425 ಜನಸಂಖ್ಯೆಯಿದೆ. ಈ ಭಾಗದಲ್ಲಿ ಒಂದು ಕಿರಿಯ ಆರೋಗ್ಯ ಉಪಕೇಂದ್ರವಿದ್ದರೂ ಸೂಕ್ತ ವೈದರಿಲ್ಲ. ಜಾಲ್ಸೂರಿನಲ್ಲಿ ಸರಕಾರಿ ಶಾಲೆ, ಬ್ಯಾಂಕ್, ಪೆಟ್ರೋಲ್ ಬಂಕ್, ಫ್ಯಾಕ್ಟರಿಗಳು ಎಲ್ಲವೂ ಇವೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೆ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಸಿಗುವುದಿಲ್ಲ. ತೀವ್ರತರ ಅನಾರೋಗ್ಯಕ್ಕೆ ತುತ್ತಾದರೆ ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿದೆ. ಜಾಲ್ಸೂರಿಂದ ಸುಳ್ಯಕ್ಕೆ ಸುಮಾರು 8 ಕಿ.ಮೀ. ದೂರವಿದೆ. ಸುಳ್ಯಕ್ಕೆ ಹೋಗುವಷ್ಟು ಸಮಯವಿಲ್ಲದಿದ್ದರೆ ಖಾಸಗಿ ವೈದ್ಯರ ಮೊರೆ ಹೋಗುತ್ತಾರೆ.
ಅಜ್ಜಾವರದಲ್ಲಿ ಖಚಿತ?
ಅಜ್ಜಾವರ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಜ್ಜಾವರ ಬಿಎಸ್ಸೆನ್ನೆಲ್ ಟವರ್ ಪರಿಸರದಲ್ಲಿ ಆಸ್ಪತ್ರೆಗೆ 2 ಎಕ್ರೆ ಜಾಗ ಮೀಸಲಿಡಲಾಗಿದೆ. ಮಂಡೆಕೋಲು- ಅಜ್ಜಾವರ- ಜಾಲ್ಸೂರು ಗ್ರಾಮಗಳನ್ನು ಗುರುತಿಸಿಕೊಂಡು ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿದ್ದಾರೆ.
ಗಡಿಗ್ರಾಮಗಳಾದ ಮಂಡೆಕೋಲು- ಅಜ್ಜಾವರ ಭಾಗದ ಪರಿಸ್ಥಿತಿ ಭಿನ್ನವಾಗಿಲ್ಲ. ಮಂಡೆಕೋಲು ಗ್ರಾಮದಲ್ಲಿ ಒಟ್ಟು 1,303 ಮನೆಗಳಿದ್ದು, 5,600 ಜನಸಂಖ್ಯೆ ಹೊಂದಿದೆ. ಪೇರಾಲು, ಕನ್ಯಾನ, ಬೊಳುಗಲ್ಲು ಹಾಗೂ ಮಾವಂಜಿ ಪ್ರದೇಶಗಳಿಗೆ ಮೂವರು ಆರೋಗ್ಯ ಸಹಾಯಕಿಯರಿದ್ದಾರೆ.
ಕಲ್ಲಡ್ಕದಲ್ಲಿ ಒಂದು ಕಿರಿಯ ಆರೋಗ್ಯ ಉಪಕೇಂದ್ರವಿದ್ದರೂ ಉಪಯೋಗ ಶೂನ್ಯವಾಗಿದೆ. ಮಂಗಳವಾರ ಮಾತ್ರ ಆರೋಗ್ಯ ವೈದ್ಯಾಧಿಕಾರಿ ಭೇಟಿ ಕೊಡುತ್ತಾರೆ. ಉಳಿದ ದಿನಗಳಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಯೇ ಗತಿ. ಅಜ್ಜಾವರದಲ್ಲಿ 1,645 ಮನೆಗಳಿವೆ. 7,238 ಜನಸಂಖ್ಯೆ ಇದೆ. ಇಲ್ಲಿನ ಗ್ರಾಮಸ್ಥರೂ ಆರೋಗ್ಯ ಸೇವೆಗಾಗಿ ಸುಳ್ಯವನ್ನೇ ಅವಲಂಬಿಸಿದ್ದಾರೆ.
ಮಂಡೆಕೋಲು- ಅಜ್ಜಾವಾರಗ್ರಾಮಗಳಲ್ಲಿ 12,000ಕ್ಕಿಂತ ಮಿಕ್ಕಿ ಜನಸಂಖ್ಯೆ ಇದೆಪ್ರದೇಶ ಕಾಡಿನಿಂದ ಕೂಡಿದ್ದು, ಆನೆ, ಚಿರತೆ ಹಾವಳಿ ಜಾಸ್ತಿ. ಅಜ್ಜಾವರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣಕ್ಕೆ ಆದ್ಯತೆ ವ್ಯಕ್ತವಾಗುತ್ತಿದೆ.
ಬೇಡಿಕೆ ಇದೆ
ಜಾಲ್ಸೂರು ಭಾಗದಲ್ಲಿ ಬೇಡಿಕೆಯಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು 20,000 ಜನಸಂಖ್ಯೆ ಬೇಕು. ಎರಡು ಎಕರೆಯಷ್ಟು ಜಾಗ ಬೇಕು. 10 ಕಿ.ಮೀ. ಒಳಗಡೆ ಅಸ್ಪತ್ರೆ ಇರಬಾರದು. ಹೀಗಾಗಿ ಮಂಡೆಕೋಲು- ಅಜ್ಜಾವರ- ಜಾಲೂÕರು ಗ್ರಾಮಗಳನ್ನು ಒಟ್ಟುಗೂಡಿಸಿ ಅಜ್ಜಾವರ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಡಾ| ಸುಬ್ರಹ್ಮಣ್ಯ, ತಾಲೂಕು ಮುಖ್ಯ ವೈದ್ಯಾಧಿಕಾರಿ, ಸುಳ್ಯ
-ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.