ಸಾಹಸ ಪ್ರವೃತ್ತಿ ಉದ್ದೀಪಿಸುವ ತರಬೇತಿ


Team Udayavani, Dec 23, 2022, 6:43 AM IST

ಸಾಹಸ ಪ್ರವೃತ್ತಿ ಉದ್ದೀಪಿಸುವ ತರಬೇತಿ

ಮೂಡುಬಿದಿರೆ : ಜಾಂಬೂರಿಯಲ್ಲಿ ಪ್ರಧಾನವಾಗಿ ಪ್ರಶಿಕ್ಷಣಾರ್ಥಿಗಳಲ್ಲಿ ಪರಿಸರ ಪ್ರೀತಿಯೊಂದಿಗೆ, ಪರಿಸರದೊಂದಿಗೆ ಹೊಂದಿ ಬಾಳುವ ಶಿಕ್ಷಣ ನೀಡುವ, ಮನೋಸ್ಥೈರ್ಯ, ಸಾಹಸ ಪ್ರವೃತ್ತಿಯನ್ನು ಉದ್ದೀಪಿಸುವ ತರಬೇತಿ ವಿಶೇಷವಾಗಿ ನಡೆಯುತ್ತಿದೆ.

ವಿವೇಕಾನಂದ ನಗರದ ಆಳ್ವಾಸ್‌ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಪ್ರದೇಶದಲ್ಲಿ ರೂಪಿಸಲಾದ ಚ್ಯಾಲೆಂಜ್‌ ವ್ಯಾಲಿಯಲ್ಲಿ ಕಲೆತ ವಿದ್ಯಾರ್ಥಿಗಳು ಸುಮಾರು 100 ಬಗೆಯ ಸಾಹಸಮಯ ಅಟಗಳಲ್ಲಿ ತೊಡಗಿ ಖುಷಿ ಪಟ್ಟರು.

ಖುಷಿ… ಥ್ರಿಲ್ಲಿಂಗ್‌ ….
ನೀರಿನ ಹೊಂಡಕ್ಕೆ ಬೆನ್ನು ಹಾಕಿ ಜಿಗಿಯುವ ಹೊತ್ತು ಏನಾಗುತ್ತದೆಯೋ ಏನೋ ಎಂಬ ಭಾವನೆಯಿಂದಲೇ ಜಿಗಿದವರೇ ಹೆಚ್ಚು. ಕೋಲಾರದ ಎಂಡಿಆರ್‌ಎಸ್‌ ಸ್ಕೂಲಿನ ವೆಂಕಟರಾಯ, ಮುಕುಂದ ಇವರೆಲ್ಲ ಬಹಳ ಖುಷಿಯಾ ಗ್ತಿದೆ ಸರ್‌, ಥ್ರಿಲ್ಲಿಂಗ್‌ ಆಗ್ತಿದೆ ಎಂದರು. ದಾವಣ ಗೆರೆಯ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ನಿಸರ್ಗ “ಭಯವಾಗಿತ್ತು, ಆದರೂ ಜಿಗಿದ ಬಳಿಕ ಖುಷಿ ಆಗ್ತಿದೆ’ ಎಂದು ಮುಖವರಳಿಸಿದರು.

ಡೆರಿಕ್‌ ಬ್ರಿಜ್‌ನಲ್ಲಿ ಹಗ್ಗವನ್ನು ರಾಟೆ ಮೂಲಕ ಎಳೆದುಕೊಂಡು ಹೊಂಡದ ಒಂದು ಭಾಗದಿಂದ ಮತ್ತೂಂದೆಡೆ ಸಾಗುವ ಅನುಭವ ವಿಶಿಷ್ಟವಾಗಿದೆ ಎಂದು ಬೆಂಗಳೂರು ಗ್ರಾಮಾಂತರದ ಎ.ವಿ. ರೇವಲಾಶ್ವರೀ ಹೇಳಿದರು.

ಜೀವ ಬಾಯಿಗೆ ಬಂತು!
ಸುಮಾರು 10 ಅಡಿ ಎತ್ತರದಲ್ಲಿ ಚೌಕಾಕಾರದ ಜಾಯಿಂಟ್‌ ಪ್ರೋಜೆಕ್ಟ್ ನ ಹಾದಿಯಲ್ಲಿ ನಡೆಯುತ್ತ ಸಾಗುವ ಸವಾಲು ಪ್ರಶಿಕ್ಷಣಾರ್ಥಿಗಳಿಗಿತ್ತು. ಈ ತರಬೇತಿ ಟ್ರೆಕ್ಕಿಂಗ್‌ಗೆ ಸೂಕ್ತವಾಗಿದೆ ಎಂದ ಶಿವಮೊಗ್ಗದ 8ನೇ ತರಗತಿಯ ವಿದ್ಯಾರ್ಥಿನಿ ಶ್ರೀರಕ್ಷಾ “ಜೀವ ಬಾಯಿಗೆ ಬಂದ ಹಾಗಾಯಿತು’ ಎಂದರು.

ಹೀಗೆಯೇ ಹ್ಯಾಂಗಿಂಗ್‌ ಬ್ರಿಜ್‌, ಹಗ್ಗದ ಮಗ್ಗವನ್ನೇರ ಬೇಕಾದ ರಶಿಯನ್‌ ವಾಲ್‌ ರೋಪ್‌ ಕ್ಲೈಂಬಿಂಗ್‌ನ ಸಾಹಸ ಕ್ರಿಯೆ ನಡೆಸಿದೆ ತಮಿಳುನಾಡಿನ ಪ್ರಥಮ ಬಿಬಿಎ ವಿದ್ಯಾರ್ಥಿನಿ ತಿರುಮಗಳ್‌ ” ಇದು ನಮಗೆ ಭಯ ನಿವಾರಿಸಿಕೊಳ್ಳಲು, ಆತ್ಮವಿಶ್ವಾಸ ಮೂಡಿಸಲು, ಮನಸ್ಸನ್ನು ಗಟ್ಟಿಯಾಗಿಸಲು ಸಹಕಾರಿ ಎಂದರು.

ರೋಚಕ ಅನುಭವ
ಇದೇ ರೀತಿ, ಬ್ಯಾಲೆನ್ಸಿಂಗ್‌ ಬೀಂ ವಾಕ್‌, ಪ್ಲಾಂಕ್‌ ಕ್ಲೈಂಬಿಂಗ್‌, ಮಂಕಿ ಬ್ರಿಜ್‌, ಅಗಲವಾದ ಏಣಿ ಹತ್ತುವ ವೈಡ್‌ ಲ್ಯಾಡರ್‌ ಕ್ಲೈಂಬಿಂಗ್‌, ಟಯರ್‌ ಬ್ಯಾಲೆನ್ಸ್‌ ವಾಕ್‌ ರೋಚಕ ಅನುಭವ ನೀಡಿದವು ಎಂದರು ದೊಡ್ಡ ಬಳ್ಳಾಪುರದ ಕಾರ್ಮೆಲ್‌ ಜ್ಯೋತಿ, ಮಿಥುನ್‌. ಸ್ವಿಂಗಿಂಗ್‌ ಪ್ಲಾಂಕ್‌ನಲ್ಲಿ ನಡೆದ ಕೊಪ್ಪಳ ಕಾರಟಗಿಯ ಚಿರು ರಾಘವೇಂದ್ರ ದೇಹ‌ದ ಸಮತೋಲನ ಕಾಪಾಡಿಕೊ ಳ್ಳುವ ಈ ತರಬೇತಿ ಉತ್ತಮ ಎಂದರು.

ಸೈನಿಕ ತರಬೇತಿಯಂತೆ
ಜೋಡಿಸಿಟ್ಟ ಟಯರ್‌ಗಳ ಒಳಗೆ ದೇಹವನ್ನು ತೂರಿಸಿ ಹರಸಾಹಸ ಪಟ್ಟು 10 ದೂರ ಕ್ರಮಿಸಿ ಹೊರಬರುವ ಟಯರ್‌ ಕ್ರಾಲಿಂಗ್‌ ನಿಜಕ್ಕೂ ಒಂದು ಸೈನಿಕ ತರಬೇತಿಯಂತೆ ತೋರಿತು.
ಇದೇ ರೀತಿ ಮಂಕಿ ಕ್ರಾಲಿಂಗ್‌, ಲ್ಯಾಡರ್‌ ಕ್ರಾಸಿಂಗ್‌ ಮೊದಲಾದ ಸಾಹಸಮಯ ಆಟಗಳಲ್ಲಿ ವಿದ್ಯಾರ್ಥಿಗಳೂ ತೊಡಗಿಸಿಕೊಂಡರು. ಪ್ರತಿಯೊಂದು ಚಟುವಟಿಕೆ ನಡೆಸಿದ ಬಳಿಕ ನಿರ್ವಹಣ ಅಧಿಕಾರಿಗಳು ವಿದ್ಯಾರ್ಥಿಗಳ ಕೈಯಲ್ಲಿದ್ದ ದಾಖಲೆ ಪುಸ್ತಿಕೆಯಲ್ಲಿ ಮೊಹರು ಒತ್ತಿ ಮುಂದೆ ಕಳುಹಿಸುತ್ತಿದ್ದರು.

ಸೂಕ್ತ ಮುನ್ನೆಚ್ಚರಿಕೆ
ಈ ಎಲ್ಲ ಚಟುವಟಿಕೆಗಳನ್ನು ನಡೆಸುವಾಗ ಯಾವುದೇ ಅವಘಡ ಗಳಾಗದಂತೆ ನುರಿತ ತರಬೇತುದಾರರು ನೋಡಿಕೊಳ್ಳುತ್ತಿದ್ದು ಚಟುವಟಿಕೆ ನಡೆಯುವ ಪ್ರದೇಶದಲ್ಲಿ ಪ್ರಥಮ ಚಿಕಿತ್ಸಾ ಗುಡಾರವನ್ನೂ ಹಾಕಲಾಗಿತ್ತು.

ಕೊಡಗಿನ ಲೀಡರ್‌ ಟ್ರೈನರ್‌ ಜಿಮ್ಮಿ ಸಿಕ್ವೇರಾ ಅವರ ಮೇಲುಸ್ತುವಾರಿ, ನಿರ್ದೇಶನದಲ್ಲಿ ಬಾಬೂರಾವ್‌ ನೆಮ್ಮಾರೆ, ಶಿವಣ್ಣ ದಾವಣಗೆರೆ, ಚಂದ್ರು ಬೆಂಗಳೂರು ಮೊದಲಾದ ಸಹವರ್ತಿಗಳು ವಿವಿಧ ಸಾಹಸ ಕ್ರಿಯೆಗಳ ತರಬೇತಿಯನ್ನು ನೀಡುತ್ತಿದ್ದಾರೆ. 55 ಸಾವಿರ ಮಂದಿ ಪ್ರಶಿಕ್ಷಣಾರ್ಥಿಗಳಿರುವುದರಿಂದ ತಂಡ ತಂಡವಾಗಿ ಎಲ್ಲರಿಗೂ ತರಬೇತಿ ಲಭಿಸುವಂತೆ ವೇಳಾಪಟ್ಟಿ ಮಾv ಲಾಗಿದೆ ಎಂದವರು ತಿಳಿಸಿದರು.

– ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.