ಡ್ರಗ್ಸ್ ಮಾಫಿಯಾಕ್ಕೆ ಜನೌಷಧ ಕಡಿವಾಣ: ರಾಜೀವ್
Team Udayavani, May 19, 2018, 11:36 AM IST
ನೆಹರೂನಗರ: ದೇಶದಲ್ಲಿ ನಡೆಯುತ್ತಿರುವ ಔಷಧ ಮಾಫಿಯಾಕ್ಕೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಕಡಿವಾಣ ಹಾಕಿದೆ. ಉತ್ತಮ ದರದಲ್ಲಿ ಗುಣಮಟ್ಟದ ಔಷಧಿಯನ್ನು ಜನೌಷಧ ಕೇಂದ್ರ ಜನರಿಗೆ ವಿತರಿಸುತ್ತಿದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ನೆಹರೂನಗರ ವಿವೇಕಾನಂದ ವಿದ್ಯಾ ವರ್ಧಕ ಸಂಘ, ವಿವೇಕಾನಂದ ಪಾಲಿ ಟೆಕ್ನಿಕ್ ಕಾಲೇಜು, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಪುತ್ತೂರು ಘಟಕದ ಆಶ್ರಯದಲ್ಲಿ ನೆಹರುನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕೆಲ ಔಷಧಿಗಳಿಗೆ ಭಾರೀ ಬೇಡಿಕೆ ಇದೆ. ಇಂತಹ ಬೇಡಿಕೆ ಇರುವ ಔಷಧಿಗಳನ್ನು ಅಧಿಕ ದರಕ್ಕೆ ಮಾರಲಾಗುತ್ತಿದೆ. ಇದರಿಂದ ಡ್ರಗ್ಸ್ ಮಾಫಿಯಾವೂ ಬೆಳೆಯುತ್ತಿದ್ದು, ದೇಶಾದ್ಯಂತ ವ್ಯಾಪಿಸುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನೌಷಧ ಕೇಂದ್ರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದರು.
ಕ್ಯಾನ್ಸರ್ ಸೇರಿದಂಥೆ 685 ಬಗೆಯ ವಿವಿಧ ಔಷಧಗಳು ಜನೌಷಧ ಕೇಂದ್ರದಲ್ಲಿ ದೊರೆಯುತ್ತವೆ. ಡಯಾಬಿಟಿಸ್ ಹಾಗೂ ಅಧಿಕ ರಕ್ತದ ಒತ್ತಡ ಇರುವವರಿಗೆ ಒಂದು ತಿಂಗಳಿಗೆ 1000 ರೂ.ನ ಔಷಧಿಯನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತಾರೆ. ಆದರೆ ಇದೇ ಔಷಧಿ ಜನೌಷಧಿ ಕೇಂದ್ರದಲ್ಲಿ 378 ರೂ.ಗೆ ಸಿಗುತ್ತದೆ. ಎಂದರು. ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಔಷಧಿಯ ಸರಬರಾಜಿನಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಲಾಗುವುದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾಸಂಸ್ಥೆ ಮೂಲಕ ಜನೌಷಧ ಕೇಂದ್ರದ ಅರಿವು ಮೂಡಿಸಲು ಹೊರಟಿರುವುದು ಉತ್ತಮ ಕೆಲಸ ಎಂದರು.
ಅನುಕೂಲ
ಕಡಿಮೆ ದರದಲ್ಲಿ ಗುಣಮಟ್ಟದ ಔಷಧವನ್ನು ಜನಸಾಮಾನ್ಯರಿಗೆ ತಲುಪಿಸುವುದು ಜನೌಷಧ ಕೇಂದ್ರದ ಉದ್ದೇಶ. ಹಲವು ಬಡವರಿಗೆ ಇದರಿಂದ ಅನುಕೂಲ ವಾಗಿದ್ದು, ಇನ್ನಷ್ಟು ಬಡವರಿಗೆ ಇದನ್ನು ತಲುಪಿಸಲು ಯುವಜನರು ಮುಂದಾಗ ಬೇಕು. ಔಷಧದ ಕೊರತೆಯಿಂದ ಯಾರೂ ಸಾವಿನ ಬಾಗಿಲು ತಟ್ಟುವಂತೆ ಆಗಬಾರದು ಎಂದು ಕಿವಿಮಾತು ಎಂದು ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.