ಜೇಸಿಐ ಕುಕ್ಕೆಶ್ರೀಯ ನೂತನ ಪದಾಧಿಕಾರಿಗಳ ಪದಗ್ರಹಣ
Team Udayavani, Dec 16, 2017, 5:02 PM IST
ಸುಬ್ರಹ್ಮಣ್ಯ: ಯುವ ಜನಾಂಗದ ಅಭಿವೃದ್ಧಿಯೊಂದಿಗೆ ಸಮಾಜಮುಖಿ, ಸಾಂಸ್ಕೃತಿಕ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುವ ಸಂಸ್ಥೆ ಜೇಸಿಐ ಆಗಿದೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು. ಅವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜೀವನಕ್ಕೆ ವಿಶೇಷವಾದ ಅರ್ಥವನ್ನು ನೀಡುವ ಬದುಕು ಕಟ್ಟಿಕೊಳ್ಳಲು ಜೇಸಿ ಆಧಾರಸ್ತಂಭ. ಸತ್ವಯುತವಾದ ಯುವ ಜನಾಂಗದ ಅಭಿವೃದ್ಧಿಗೆ ಈ ಸಂಸ್ಥೆ ಉತ್ಕೃಷ್ಟ ವಾದ ಕಾರ್ಯ ಮಾಡಿದೆ ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.
ಪದ ಪ್ರದಾನ
ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್ ಅವರು ನೂತನ ಅಧ್ಯಕ್ಷ ಮೋನಪ್ಪಾ ಡಿ. ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ಬಳಿಕ ನೂತನ ಪದಾಧಿಕಾರಿಗಳಾದ ಹರಿಪ್ರಸಾದ್ ನಾಯರ್ ಮಲ್ಲಾಜೆ, ಶೇಷ ಕುಮಾರ್ ಶೆಟ್ಟಿ, ಯೋಗನಾಥ್ ಎಸ್., ದೀಪಕ್ ನಂಬಿಯಾರ್, ಹರ್ಷಿತ್ ಪಡ್ರೆ, ಪ್ರಕಾಶ್ ಕೆ.ಎಸ್., ರೋಹಿತ್ ಬಿ.ಬಿ., ಜೇಸಿರೆಟ್ ವಿಭಾಗದ ಅಧ್ಯಕ್ಷೆ ಸೌಮ್ಯಾ ಭರತ್ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷ ದೀಮಂತ್ ಎ.ಎಸ್. ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಸದಸ್ಯರಾಗಿ ಜೇಸಿ ಕುಟುಂಬ ಸೇರಿದ ಆರು ಮಂದಿಗೆ ಪ್ರಮಾಣ ವಚನ ಬೋಧಿಸಲಾಯಿತು. ಪ್ರಾರಂಭದಲ್ಲಿ ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಭಾಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಮೋನಪ್ಪ ಡಿ. ವಹಿಸಿದ್ದರು.
ಭಾರತೀಯ ಜೇಸಿಸ್‌ನ ಪೂರ್ವ ರಾಜ್ಯ ಉಪಾಧ್ಯಕ್ಷ ದಿನಕರ ಗೌಡ, ಭಾರತೀಯ ಜೇಸಿಸ್‌ನ ರಾಷ್ಟ್ರೀಯ ನಾಯಕ ಚಂದ್ರ ಶೇಖರ ನಾಯರ್, ಜೇಸಿಸ್ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಯ ಸ್ಥಾಪಕಾಧ್ಯಕ್ಷ ವಿಶ್ವನಾಥ್ ನಡುತೋಟ, ನಿಕಟಪೂರ್ವಾಧ್ಯಕ್ಷ ಮೋಹನದಾಸ ರೈ, ಕಾರ್ಯದರ್ಶಿ ದೀಪಕ್ ನಂಬಿಯಾರ್, ಜೂನಿಯರ್ ಜೇಸಿ ಅಧ್ಯಕ್ಷ ರಘುನಂದನ್ ಶರ್ಮ, ನಿಯೋಜಿತ ಅಧ್ಯಕ್ಷ ಧೀಮಂತ್ ಎ. ಎಸ್. ಉಪಸ್ಥಿತರಿದ್ದರು.
ಭಾರತಿ ದಿನೇಶ್ ಸ್ವಾಗತಿಸಿದರು. ಯೋಗನಾಥ್, ವಿಮಲಾ ರಂಗಯ್ಯ, ರೇಶ್ಮಾ ಪ್ರಕಾಶ್, ಹರಿಪ್ರಸಾದ್ ನಾಯರ್ ಮಲ್ಲಾಜೆ, ರತ್ನಾಕರ. ಎಸ್., ಸೌಮ್ಯಾ ಬಿ. ಪೈ., ರೇಶ್ಮಾ ಪ್ರಕಾಶ್, ಪ್ರಭಾಕರ ಪಡ್ರೆ ಪರಿಚಯಿಸಿದರು. ನೂತನ ಕಾರ್ಯದರ್ಶಿ ಲೋಕೇಶ್ ಪೀರನಮನೆ ವಂದಿಸಿದರು. ಪಂಜ, ಬೆಳ್ಳಾರೆ, ಕಡಬ, ಸುಳ್ಯ ಜೇಸಿಸ್‌ನ ಅಧ್ಯಕ್ಷರು ಮತ್ತು ಸದಸ್ಯರು, ಸುಬ್ರಹ್ಮಣ್ಯ ಜೇಸಿ ಸದಸ್ಯರು, ರೋಟರಿ ಮತ್ತು ಇನ್ನರ್ ವ್ಹೀಲ್ ಸದಸ್ಯರು, ಜೇಸಿ ಅಭಿಮಾನಿಗಳು ಉಪಸ್ಥಿತರಿದ್ದರು.
ಸಮ್ಮಾನ
ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್ ಅವರನ್ನು ಘಟಕದ ವತಿಯಿಂದ ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಭಾರತೀ ಯ ಜೇಸಿಸ್‌ನ ರಾಷ್ಟ್ರೀಯ ನಾಯಕ ಚಂದ್ರಶೇಖರ ನಾಯರ್, ನಿಯೋಜಿತ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ನೂತನವಾಗಿ ಜೇಸಿ ತರಬೇತುದಾರರಾಗಿ ಆಯ್ಕೆಯಾದ ಹರ್ಷಿತ್ ಪಡ್ರೆ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.