ಬಸ್ ಸ್ಟಾಪ್ನಲ್ಲಿ ಜೀಪು, ಆಟೋ ನಿಲುಗಡೆ
Team Udayavani, Feb 5, 2018, 11:31 AM IST
ಬೆಳ್ತಂಗಡಿ: ಬೆಳೆಯುತ್ತಿರುವ ಶಿಕ್ಷಣ ನಗರಿ ಉಜಿರೆಯಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದಿನೇ ದಿನೇ ವಾಹನ ದಟ್ಟನೆ ಹೆಚ್ಚಾಗುತ್ತಿರುವ ಕಾರಣದಿಂದ ವಾಹನಗಳ ನಿಲುಗಡೆಯೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
ಶಿರಾಡಿ ಘಾಟಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಉಜಿರೆ ದಿನದ 24 ಗಂಟೆಯೂ ಕಾರ್ಯಪ್ರವೃತ್ತವಾಗಿದೆ. ರಾತ್ರಿ ವೇಳೆಯೂ ಅನೇಕ ಬಸ್ಗಳು ಹಾಸನ, ಬೆಂಗಳೂರಿಗೆ ಹೋಗಲು ಈ ಮಾರ್ಗವನ್ನು ಅವಲಂಬಿಸಿ ರುವ ಕಾರಣ ರಾತ್ರಿಯೂ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.
ಬಸ್ ಬದಲು ಜೀಪು!
ಕಾಲೇಜು ರಸ್ತೆಯ ಬಸ್ ನಿಲ್ದಾಣದೊಳಗೆ ಬಸ್ಗಳ ಬದಲು ಜೀಪುಗಳು ನಿಲ್ಲಲಾರಂಭಿಸಿವೆ. ಇಲ್ಲಿ ಸೂಚನ ಫಲಕಗಳನ್ನು
ಅಳವಡಿಸಿದ್ದರೂ ಬಸ್ಗಳು ಹೋಗುವ ಬದಲು ಜೀಪುಗಳು ಪ್ರವೇಶಗೈದಿವೆ.
ಲೆಕ್ಕವಿಲ್ಲದ ಬಸ್ ನಿಲುಗಡೆ
ಉಜಿರೆ ಪೇಟೆಯಲ್ಲಿ ಎಷ್ಟು ಕಡೆ ಬಸ್ ನಿಲುಗಡೆ ಇದೆ ಎಂದು ಹೇಳುವುದೇ ಕಷ್ಟ. ಯಾವ ಬಸ್ನ ನಿಲುಗಡೆ ಎಲ್ಲಿ ಎಂದೇ ತಿಳಿಯುವುದಿಲ್ಲ. ರಾತ್ರಿ ಸಂಚಾರದ ಕೆಲವು ಬಸ್ ಗಳು ಮುಖ್ಯ ವೃತ್ತದ ಬಳಿಯ ಹೊಟೇಲ್ ಮುಂಭಾಗದಲ್ಲಿ ನಿಲ್ಲುತ್ತವೆ. ಇನ್ನು ಕೆಲವು ಕಾಲೇಜು ರಸ್ತೆಯಲ್ಲಿನ ಸ್ಟ್ಯಾಂಡ್ ನಲ್ಲಿ ನಿಲ್ಲುತ್ತದೆ. ಟಿಕೆಟ್ ರಿಸರ್ವೇಶನ್ ಮಾಡಿಸಿದ ಎಷ್ಟೋ ಮಂದಿ ಗೊಂದಲಕ್ಕೀಡಾಗಿ ಬಸ್ ತಪ್ಪಿಸಿಕೊಂಡದ್ದೂ ಇದೆ. ಉಜಿರೆಗೆ ಯಾವುದಾದರೂ ಒಂದೇ ಕಡೆ ಬಸ್ ನಿಲುಗಡೆ ಇರುವುದು ಒಳಿತು. ಬೆಳಗ್ಗಿನ ಜಾವ ಬೆಂಗಳೂರಿನಿಂದ ಬರುವ ಬಸ್ಗಳು ಕೆಲವು ಕಾಲೇಜು ರಸ್ತೆಯ ಬಸ್ ಸ್ಟ್ಯಾಂಡ್ ನಲ್ಲಿ ನಿಂತರೆ ಇನ್ನು ಕೆಲವು ಟಿ.ಸಿ. ಸ್ಟ್ಯಾಂಡ್ ಬಳಿ ನಿಲ್ಲುತ್ತದೆ. ಒಂಟಿ ಮಹಿಳೆಯರಿಗೆ ಇದು ಸಮಸ್ಯೆಯಾಗಿದೆ.
ಗುರು ಮುಂಡಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್ಎಕ್ಸ್ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.