ಜು. 21: ಅರ್ಜುನ್ ವೆಡ್ಸ್ ಅಮೃತ ತೆರೆಗೆ
Team Udayavani, Jul 20, 2017, 3:45 AM IST
ಮಂಗಳೂರು: ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಪತ್ರಕರ್ತ ರಘು ಶೆಟ್ಟಿ ನಿರ್ದೇಶನದ ಕೋಸ್ಟಲ್‌ವುಡ್‌ನ ಬಹುನಿರೀಕ್ಷಿತ “ಅರ್ಜುನ್ ವೆಡ್ಸ್ ಅಮೃತ’ ತುಳು ಸಿನೆಮಾ ಜು. 21ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರಘು ಶೆಟ್ಟಿ ಅವರು, ಮಂಗಳೂರಿನ ಜ್ಯೋತಿ, ಸಿನೆಪೊಲೀಸ್, ಪಿವಿಆರ್, ಬಿಗ್ ಸಿನೆಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದಿರೆಯಲ್ಲಿ ಅಮರಶ್ರೀ, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‌ನಲ್ಲಿ ನಟರಾಜ್ ಹಾಗೂ ಉಡುಪಿಯಲ್ಲಿ ತೆರೆಕಾಣಲಿದೆ ಎಂದರು.
ಚಿತ್ರದಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರು ವಿಭಿನ್ನ ಪಾತ್ರದ ಮೂಲಕ ಗಮನಸೆಳೆದಿದ್ದಾರೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಕೂಡ ವಿಶೇಷ ಪಾತ್ರದ ಮೂಲಕವೇ ಈ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ನಾಯಕ ನಟನಾಗಿ ಅನೂಪ್ ಸಾಗರ್, ನಾಯಕಿಯಾಗಿ ಆರಾಧ್ಯ ಶೆಟ್ಟಿ ಚಿತ್ರದಲ್ಲಿದ್ದಾರೆ ಎಂದು ವಿವರಿಸಿದರು.
ಈ ಚಿತ್ರಕ್ಕೆ ಸುಮಾ ಎಲ್.ಎನ್. ಶಾಸ್ತ್ರಿ ಸಂಗೀತ ನೀಡಿದ್ದಾರೆ. ರಾಜೇಶ್ ಶೆಟ್ಟಿ, ದಾಮೋದರ ದೊಂಡೋಲೆ, ಲೋಕು ಕುಡ್ಲ ಅವರ ಸಾಹಿತ್ಯ ಈ ಚಿತ್ರಕ್ಕಿದ್ದು, ಕಿರಣ್ ತರುಣ್‌ರಾಜ್ ಕೊರಿಯೋಗ್ರಾಫರ್ ಆಗಿದ್ದಾರೆ. ರಾಜೇಶ್ ಕೃಷ್ಣನ್, ಹೇಮಂತ್, ಎಲ್.ಎನ್. ಶಾಸ್ತ್ರಿ ಸುಪ್ರಿಯಾ ಮತ್ತು ಸುಮಾ ಎಲ್.ಎನ್. ಶಾಸ್ತ್ರಿ ಸ್ವರ ನೀಡಿದ್ದಾರೆ. ಕಲಾ ನಿರ್ದೇಶಕರಾಗಿ ಚೇತನ್ ಮುಂಡಾಡಿ, ಛಾಯಾಚಿತ್ರಗ್ರಾಹಕರಾಗಿ ಆನಂದ ಸುಂದರೇಶ್, ಸಹನಿರ್ದೇಶಕರಾಗಿ ತ್ರಿಶೂಲ್ ಶೆಟ್ಟಿ, ರಾಮ್‌ದಾಸ್ ಸಸಿಹಿತ್ಲು ಕಾರ್ಯನಿರ್ವಹಿಸಿದ್ದಾರೆ ಎಂದರು.
ಉಳಿದಂತೆ ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ, ಸುನೀಲ್ ನೆಲ್ಲಿಗುಡ್ಡೆ, ಸುಧೀರ್ ರಾಜ್ ಉರ್ವ, ಸತೀಶ್ ಬಂದಲೆ, ಪವಿತ್ರ ಶೆಟ್ಟಿ ಕಟಪಾಡಿ, ಹರಿಣಿ ಕಾರ್ಕಳ, ಆರ್.ಜೆ. ಅನುರಾಗ್, ಪ್ರಜ್ವಲ್ ಪಾಂಡೇಶ್ವರ ಮುಂತಾದವರು ತಾರಾಗಣದಲ್ಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್‌ಡಿ ಪಡೀಲ್, ಅನೂಪ್ ಸಾಗರ್, ಆರಾಧ್ಯ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.