July 22ರಿಂದ ಎಐ ಎಕ್ಸ್‌ಪ್ರೆಸ್ ಅಬುಧಾಬಿಗೆ ದಿನಂಪ್ರತಿ ಸಂಚಾರ
Team Udayavani, Jun 12, 2024, 7:20 AM IST
ಮಂಗಳೂರು: ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆ ಯನ್ನು ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ಧರಿಸಿದ್ದು, ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ವಿಮಾನ ಗಳು ಜುಲೈ 22ರಿಂದ ಪ್ರತೀ ದಿನ ಕಾರ್ಯಾಚರಿಸಲಿವೆ.
ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ 1 ವಿಮಾನ ಸೇರಿ ನಿತ್ಯ 5 ವಿಮಾನಗಳು ಬೆಂಗಳೂರು – ಮಂಗಳೂರು ನಡುವೆ ಕಾರ್ಯಾಚರಿಸುತ್ತಿವೆ. ಜುಲೈ 8ರಿಂದ ಈ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ 2ನೇ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಯಾನ ಆರಂಭಿ ಸುತ್ತಿದೆ. ಇದು ಜು.22ರಿಂದ ಲಭ್ಯವಾಗಲಿದ್ದು, ಇದು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿ ಸಲಿದ್ದು, ಈ ವಿಮಾನ ಮಂಗಳೂರಿಗೆ ಬಂದು ಅಬುಧಾಬಿಗೆ ಪ್ರಯಾಣಿಸಲಿದೆ.
ಬೆಂಗಳೂರಿಗೆ ಇನ್ನಷ್ಟು ವಿಮಾನ
ಆಗಸ್ಟ್ 1ರಿಂದ ಬೆಂಗಳೂರು- ಮಂಗಳೂರು ಸೆಕ್ಟರ್‌ನಲ್ಲಿ ವಾರದಲ್ಲಿ ಮೂರು ದಿನ (ಸೋಮ, ಬುಧ ಮತ್ತು ಶುಕ್ರವಾರ) ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಇನ್ನೊಂದು ವಿಮಾನ ಸೇವೆ ಆರಂಭಿಸಲಿದೆ. ಮುಂಬಯಿ-ಮಂಗಳೂರು ಸೆಕ್ಟರ್‌ನಲ್ಲಿಯೂ ಏರ್ ಇಂಡಿಯಾ ಎಕ್ಸ್‌ಪ್ರಸ್ ಮಧ್ಯಾಹ್ನದ ಅನಂತರದ ವಿಮಾನವನ್ನು ಜು. 16ರಿಂದ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.