ಜುಲೈ 7 ವಿಶ್ವ ಚಾಕ್ಲೇಟ್ ದಿನಾಚರಣೆ
Team Udayavani, Jul 8, 2018, 6:00 AM IST
ಹೆಸರು ಆಧುನಿಕ ಮತ್ತು ಪ್ರಚೀನ ಕಾಲದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಪ್ರಾಮುಖ್ಯದ ಸಂಕೇತ. ಕೋಕೋ ಗಿಡ ಹಾಗೂ ಅದರ ಬೀಜಗಳನ್ನು ಸಂಸ್ಕರಣೆಯ ಮುನ್ನ ಅಮೆರಿಕನ್ ಇಂಗ್ಲಿಷ್‌ನಲ್ಲಿ ಕಕಾವೋ ಅನ್ನಲಾಗುತ್ತದೆ. ಹುರಿದ ಮತ್ತು ಸಂಸ್ಕರಿಸಿದ ಬಳಿಕ ಇದು ಕೋಕೋ ಎಂದಾಗುತ್ತದೆ. ಹುರಿದ ಕೋಕೋ ಬೀಜ ಬಳಸಿ ಇತರ ವೈವಿಧ್ಯಗಳನ್ನು ಬೆರೆಸಿ ಬಗೆಬಗೆಯ ಚಾಕ್ಲೇಟ್ ತಯಾರಿಸಲಾಗುತ್ತದೆ. ಇದನ್ನು ಪೂರ್ಣ ಆಹಾರ ಎಂದೇ ವರ್ಣಿಸಲಾಗುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ಚಾಕ್ಲೇಟ್‌ನ ವಿವಿಧ ಪರಿಣಾಮಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ.
ಕ್ಯಾಂಪ್ಕೋ ಸಾಧನೆ
ಚಾಕ್ಲೇಟ್‌ನ ಇತಿಹಾಸದಲ್ಲಿ ಕರ್ನಾಟಕ ಕರಾವಳಿ ಮೂಲದ ಕ್ಯಾಂಪ್ಕೋ ಸಂಸ್ಥೆಯದ್ದು ಸವಿಸವಿಯಾದ ಪುಟಗಳು. ಅಡಿಕೆ ಮತ್ತು ಕೋಕೋ ಬೆಳೆಗಾರರ ಹಿತರಕ್ಷಣೆಗೆ ಸ್ಥಾಪನೆಯಾದ ಕ್ಯಾಂಪ್ಕೋ ಸಂಸ್ಥೆ ದೇಶದ ಸಹಕಾರಿ ರಂಗದಲ್ಲಿ ಆದರ್ಶಯುತವಾದ ಹೆಸರು. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೋ ಚಾಕ್ಲೇಟ್ ತಯಾರಿ ಕ್ಷೇತ್ರವನ್ನು ಪ್ರವೇಶಿಸಿ, ಅಪೂರ್ವ ಸಾಧನೆಯನ್ನು ದಾಖಲಿಸಿದೆ.
ಪುತ್ತೂರಿನಲ್ಲಿ ಕ್ಯಾಂಪ್ಕೋ ಚಾಕ್ಲೇಟ್ ತಯಾರಿಕಾ ಫ್ಯಾಕ್ಟರಿಯನ್ನು 1986ರಲ್ಲಿ ಸ್ಥಾಪಿಸಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿತು. ಮುಂದೆ ನೆಸ್ಲೆ (ಇಂಡಿಯಾ) ಜತೆ ತಾಂತ್ರಿಕ ಸಹಯೋಗವನ್ನು ಹೊಂದಿತು. ಕೋಕೋ ಮಾಸ್, ಕೋಕೋ ಬಟರ್, ಕೋಕೋ ಪೌಡರ್, ಚಾಕ್ಲೇಟ್ ಡ್ರಿಂಕ್ಸ್, ಚಾಕ್ಲೇಟ್‌ಗಳಿಂದ ಕ್ಯಾಂಪ್ಕೋ ಯಶಸ್ಸು ಸಾಧಿಸಿದೆ.
ಇಂದು ಜಗತ್ತಿನ ಸಿಹಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಚಾಕ್ಲೇಟ್ ಉತ್ಪನ್ನಗಳು ಹೊಂದಿವೆ. ಚಾಕ್ಲೇಟ್‌ಗಳ ವೈವಿಧ್ಯಗಳಂತೂ ಅನನ್ಯ. ಹೊಸ ಹೊಸ ರುಚಿಯ (ಫ್ಲೇವರ್) ಚಾಕ್ಲೇಟ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಚಾಕ್ಲೇಟ್ ಅಂದರೆ ಕೇವಲ ಸಿಹಿಯಲ್ಲ; ಅದು ಮಧುರ ಬಾಂಧವ್ಯ!
ದೇವರ ಪಾನೀಯ
ಚಾಕ್ಲೇಟ್ ಸ್ವಾದವು ದ್ರವ ಮತ್ತು ಘನ ಸ್ವರೂಪದಲ್ಲಿ ದೊರೆಯುತ್ತಾ, ಮನುಕುಲಕ್ಕೆ ಸಿಹಿ ಉಣ ಬಡಿಸುತ್ತಿದೆ. ಚಾಕ್ಲೇಟ್ ಸೇವನೆಯ ಅನೇಕ ಧನಾತ್ಮಕ ಕಾರಣಗಳಿಂದ ಅದನ್ನು ಇತಿಹಾಸ ಕಾಲದಲ್ಲಿ “ದೇವರ ಪಾನೀಯ’ ಎಂದು ಹೆಸರಿಸಿದ್ದರು! ಕೋಕೋ ಗಿಡದ ವೈಜ್ಞಾನಿಕ ಹೆಸರು: ಥಿಯೋಬ್ರೋಮಾ ಕಕಾವೊ. ಗ್ರೀಕ್ ಭಾಷೆಯಲ್ಲಿ ಥಿಯೋ ಅಂದರೆ ದೇವರು; ಬ್ರೋಮಾ ಅಂದರೆ ಪಾನೀಯ!
ಚಾಕ್ಲೇಟ್ ಎಂಬ ಉಚ್ಚಾರವೇ ಸಾಕು: ಆ ಪರಿಸರವೆಲ್ಲ ಸಿಹಿಯಾಗಿ ಪರಿವರ್ತನೆಯಾಗುತ್ತದೆ. ಇದು ಚಾಕ್ಲೇಟ್‌ನ ಮಹಿಮೆ. ಆಬಾಲವೃದ್ಧರಾಗಿ ಚಾಕ್ಲೇಟ್ ಸವಿಯುವವರೇ ಎಲ್ಲ; ಚಾಕ್ಲೇಟ್‌ನ ಸವಿಯ ರೋಮಾಂಚನವನ್ನು ಸವಿದವನೇ ಬಲ್ಲ! ಜಗತ್ತಿನಾದ್ಯಂತ ಪ್ರತೀ ವರ್ಷ ಜುಲೈ 7ನ್ನು ಚಾಕ್ಲೇಟ್ ದಿನವಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕ್ಲೇಟ್ ದಿನ ಎಂದು ಕೂಡಾ ಉಲ್ಲೇಖೀಸಲಾಗುತ್ತದೆ. 2009ರಿಂದ ಈ ಆಚರಣೆಯು ವಿಶ್ವದಾದ್ಯಂತ ನಡೆಯುತ್ತಿದೆ. ಹಾಗೆ ನೋಡಿದರೆ, ಜಗತ್ತಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುವ ಸಿಹಿ ತಿಂಡಿ ಅಂದರೆ ಅದು ಚಾಕ್ಲೇಟ್. ಬಹುತೇಕ ಎಲ್ಲಾ ಆಚರಣೆಗಳಲ್ಲೂ ಚಾಕ್ಲೇಟ್‌ಗೆ ಮಹತ್ವದ ಸ್ಥಾನವಿದೆ.
ಸ್ನೇಹ ಸಂಬಂಧಗಳನ್ನು ಬೆಸೆಯುವಲ್ಲಿ ಕೂಡಾ ಚಾಕ್ಲೇಟ್‌ಗೆ ಅಗ್ರಸ್ಥಾನವಿದೆ. ಹೃದಯ ಹೃದಯಗಳನ್ನು ಬೆಸೆಯುವ ಪ್ರೇಮಾನುಬಂಧಗಳಲ್ಲಿ ಕೂಡಾ ಚಾಕ್ಲೇಟ್‌ನ ವಿನಿಮಯ ನಿರ್ಣಯಕ ಪಾತ್ರವನ್ನು ಹೊಂದಿರುತ್ತದೆ ಎಂಬ ಮಾತನ್ನು ಪ್ರಣಯಿಗಳು ತತ್‌ಕ್ಷಣಕ್ಕೇ ಒಪ್ಪಿಕೊಂಡಾರು!
ಜಗತ್ತಿನಾದ್ಯಂತ ವೈಟ್ ಚಾಕ್ಲೇಟ್ ಡೇ ಮತ್ತು ಮಿಲ್ಕ್ ಚಾಕ್ಲೇಟ್ ಡೇ ಎಂಬ ಪ್ರತ್ಯೇಕ ಆಚರಣೆಗಳಿದ್ದರೂ ಜುಲೈ 7ರ ಆಚರಣೆಯೇ ಮುಖ್ಯವಾಗಿರುತ್ತದೆ.
ಮನೋಹರ ಪ್ರಸಾದ್
ಬೇಬಿ ವನ್ಯ, ಮಂಗಳೂರು
ಸಹಕಾರ: ಮೊನಾರ್ಕ್ ಸ್ಟುಡಿಯೋ ಚಿತ್ರ: ಸತೀಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.