ನನ್ನ ಮೇಲೆ ಬೈರಪ್ಪ ಸಾಹಿತ್ಯ ಪ್ರಭಾವ: ನಝೀರ್
Team Udayavani, Mar 13, 2017, 5:17 PM IST
ಮೂಡಬಿದಿರೆ : ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಶನಿವಾರ ಮೊದಲ ಬಾರಿಗೆ ಹುಟ್ಟೂರು ಮೂಡಬಿದಿರೆಗೆ ಆಗಮಿಸಿದ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಅವರನ್ನು ಮೂಡಬಿದಿರೆ ವಕೀಲರ ಸಂಘದ ವತಿಯಿಂದ ಅಭಿನಂದಿಸಿ ಸಮ್ಮಾನಿಸಲಾಯಿತು.
ಕೋರ್ಟ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎ.ಎನ್. ವೇಣುಗೋಪಾಲ ಗೌಡ ಅವರು ನ್ಯಾ| ಮೂ| ಅಬ್ದುಲ್ ನಝೀರ್ ಅವರನ್ನು ಸಮ್ಮಾನಿಸಿದರು.
ತಮಗೆ ನೀಡಿದ ಸಮ್ಮಾನಕ್ಕೆ ಪ್ರತಿಕ್ರಿಯೆ ನೀಡಿದ ನಝೀರ್ ತಮ್ಮ ಶಿಕ್ಷಣ, ವೃತ್ತಿ ಕ್ಷೇತ್ರದ ಗುರುಗಳನ್ನು ಸ್ಮರಿಸಿಕೊಂಡರು. ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಎದ್ದು ಕಾಣಿಸುವ ಮೂಡಬಿದಿರೆ, ಬೈರಪ್ಪರಂಥವರ ಕಾದಂಬರಿಗಳ ಓದು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಅವರು ಹೇಳಿದರು.
ಸರಳ, ಪ್ರಾಮಾಣಿಕ ಗುಣ ನಡತೆಗಳಿಂದ ಹಿರಿಯ ಕಿರಿಯ ನ್ಯಾಯಾಧೀಶರು, ವಕೀಲರ ಪ್ರೀತಿ ಪಾತ್ರರಾಗಿರುವ ನಝೀರ್ ಅವರು ಕೆಳಹಂತದ ನ್ಯಾಯಾಧೀಶರನ್ನು ಗೌರವದಿಂದ ಕಾಣುವವರು ಎಂದು ಜ| ವೇಣುಗೋಪಾಲ ಗೌಡ ಹೇಳಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜ| ಎ.ಎಸ್. ಬೋಪಣ್ಣ, ಜ| ಜಾನ್ ಮೈಕಲ್ ಡಿ’ ಕುನ್ಹಾ ಮೊದಲಾದವರು ನಝೀರ್ ಅವರ ಸಾಧನೆ, ಗುಣನಡತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಅಬ್ದುಲ್ ನಝೀರ್ ಅವರ ವೃತ್ತಿ ಗುರು ನ್ಯಾಯವಾದಿ ಎಂ.ಕೆ ವಿಜಯ ಕುಮಾರ್ ಮಾತನಾಡಿ, ಪ್ರತಿಭೆ ಮತ್ತು ಸರಳತೆಯಿಂದಾಗಿ ನಝೀರ್ ಈ ಎತ್ತರಕ್ಕೆ ಏರಿದ್ದಾರೆ ಎಂಬುದು ತನಗೆ ಹೆಮ್ಮೆ, ಅಭಿಮಾನದ ಸಂಗತಿ ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬೀಳಗಿ, ಮೂಡಬಿದಿರೆ ನ್ಯಾಯಾಲಯದ ನ್ಯಾಯಾಧೀಶೆ ಅರುಣಾ ಕುಮಾರಿ, ಸೀನಿಯರ್ ಡಿವಿಶನ್ ನ್ಯಾಯಾಧೀಶೆ ಶಿಲ್ಪಾ ಕೆ. ಎಸ್., ಮೂಡಬಿದಿರೆ ವಕೀಲರ ಸಂಘದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಲೋಬೋ ಉಪಸ್ಥಿತರಿದ್ದರು.
ಗುರುಗಳಿಗೆ ಅಭಿನಂದನೆ
ಶ್ರೀಮಹಾವೀರ ಕಾಲೇಜಿನಲ್ಲಿ ತನಗೆ ಗುರುವಾಗಿದ್ದು ಪ್ರಸ್ತುತ ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಅವರು ರಾಷ್ಟ್ರ ಮಟ್ಟದ “ಭಾರತ ಜ್ಯೋತಿ’ ಪ್ರಶಸ್ತಿ ಪಡೆದಿರುವುದನ್ನು ಜ| ನಝೀರ್ ಉಲ್ಲೇಖೀಸಿ ಅವರನ್ನು ಸಮ್ಮಾನಿಸಿದರು.
ಮೂಡಬಿದಿರೆಗೆ ನಝೀರ್ ಕೊಡುಗೆ
ಎಂ. ಬಾಹುಬಲಿ ಪ್ರಸಾದ್ ಪ್ರಸ್ತಾವಿಸಿ, ಇನ್ನೂ ಹೋಬಳಿ ಹಂತದಲ್ಲಿರುವ ಮೂಡಬಿದಿರೆಗೆ ನ್ಯಾಯಾಲಯ ಒದಗಿ ಬರುವಲ್ಲಿ ಹಾಗೂ ಸುಮಾರು 6 ಕೋಟಿ ರೂ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣವಾಗುವಲ್ಲಿ ಅಬ್ದುಲ್ ನಝೀರ್ ಅವರ ಶ್ರಮವನ್ನು ಸ್ಮರಿಸಿದರು.
ಡಾಕ್ಯುಮೆಂಟರಿ
ವಕೀಲರ ಸಂಘದ ಕಾರ್ಯದರ್ಶಿ ಪ್ರವೀಣ್ ಲೋಬೋ ದಂಪತಿ ನಿರ್ಮಿಸಿದ ನಝೀರ್ ಅವರ ಜೀವನದ ಪ್ರಮುಖ ಬೆಳವಣಿಗೆಗಳನ್ನು ಚಿತ್ರಿಸುವ ಸಾಕ್ಷé ಚಿತ್ರವನ್ನು ಪ್ರದರ್ಶಿಸಲಾಯಿತು.
ಹಿರಿಯ ನ್ಯಾಯವಾದಿ ಕೆ. ಆರ್. ಪಂಡಿತ್ ಸಮ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರವೀಣ್ ಲೋಬೋ ವಂದಿಸಿದರು. ನ್ಯಾಯವಾದಿ ಶ್ವೇತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.