‘ಅರ್ಥಪೂರ್ಣ ಕೆಲಸದಿಂದ ಅರ್ಥಪೂರ್ಣ ಬದುಕು’
Team Udayavani, Jul 3, 2017, 3:20 AM IST
ಕಾರ್ಕಳ: ಬದಲಾವಣೆಯೊಂದಿಗೆ ಅನುಭವ ಗಳಿಕೆ ಇಂದಿನ ಸವಾಲು. ಅರ್ಥಪೂರ್ಣ ಬದುಕನ್ನು ಸಾಗಿಸಲು ಅರ್ಥಪೂರ್ಣ ಕೆಲಸಗಳೇ ಮುಖ್ಯವಾಗುತ್ತವೆ ಎಂದು ರಂಗಭೂಮಿ ಹಾಗೂ ಚಿತ್ರೋದ್ಯಮಿ ಬೆಂಗಳೂರಿನ ಪ್ರಕಾಶ ಬರೆ ಹೇಳಿದ್ದಾರೆ. ಅವರು ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಉದ್ಯಮಾಡಳಿತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದು ಘಟಿಕೋತ್ಸವ ಭಾಷಣ ಮಾಡಿದರು.
ಉದ್ಯೋಗದ ಕಲ್ಪನೆ ಇಂದು ಬದಲಾಗುತ್ತಿದೆ. ವಿಸ್ತಾರವಾದ ಅವಕಾಶಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಿರಬೇಕು. ಬಹು ಕೌಶಲಗಳನ್ನು ಬಳಸಿಕೊಳ್ಳಲು ಇಂದು ಅವಕಾಶವಿದೆ. ಜಾಗತೀಕರಣ ನಮ್ಮ ಮುಂದೆ ಅನೇಕ ಸವಾಲುಗಳನ್ನು ಒಡ್ಡುತ್ತಿದೆ. ಹೀಗಾಗಿ ಬದುಕಿನ ಯಶಸ್ಸು ವೈಫಲ್ಯದಿಂದಲೆ ಉದ್ಯಮಾಡಳಿತದ ವಿದ್ಯಾರ್ಥಿಗಳು ಹೊಸ ಚಿಂತನಾ ಕ್ರಮಗಳನ್ನು ಬೆಳೆಸಿಕೊಳ್ಳಬೇಕು. ಇಂದು ಒಂದೇ ಉದ್ಯಮ ನಡೆಸಬೇಕಾಗಿಲ್ಲ. ವಿಶೇಷವಾದ ಸಾಧನೆಯ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು. ಹೆತ್ತವರಿಗೆ, ಪೋಷಕರಿಗೆ ತನ್ಮೂಲಕ ಸಮಾಜಕ್ಕೆ ಕೃತಜ್ಞರಾಗಬಹುದು ಎಂದವರು ಹೇಳಿದರು. ಅದರಿಂದ ಪಾಠ ಕಲಿತು ಮುಂದೆ ಬರಲು ಸಾಧ್ಯ ಎಂದರು.
ಜಸ್ಟಿಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕ ಡಾ| ಕೆ. ಶಂಕರನ್ ಸ್ವಾಗತಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಡಾ| ಎನ್.ಎಸ್. ಶೆಟ್ಟಿ, ಎನ್.ಎಂ.ಎ.ಎಂ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಚಿಪ್ಳೂಣ್ಕರ್, ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ.ಆರ್, ಡಾ| ಸುಧೀರ್ ಎಂ., ಡಾ| ಆಶಾಲತಾ ಕೆ, ರಾಕೇಶ್ ಶೆಟ್ಟಿ, ಐಸಾಕ್ ವರ್ಗೀಸ್, ಕೃಷ್ಣಪ್ರಸಾದ್, ಹರಿಶ್ಚಂದ್ರ, ಜ್ಞಾನೇಶ್ವರ ಪೈ, ಸಂಧ್ಯಾ ರಾವ್, ರೀಟಾ ಮೊನಿ ಬೊರೊ, ಶೀತಲ್ ಕುಮಾರ್ ಉಪಸ್ಥಿತರಿದ್ದರು. ಡಾ| ಸುಧೀರರಾಜ್ ನಿರೂಪಿಸಿದರು. ಪ್ರೊ| ರಾಧಾಕೃಷ್ಣ ಶರ್ಮ ವಂದಿಸಿದರು. ಈ ಸಂದರ್ಭದಲ್ಲಿ ಉದ್ಯಮಾಡಳಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿ ಅತ್ಯುತ್ತಮ ಉದ್ಯಮಾಡಳಿತ ಪ್ರಾಜೆಕ್ಟ್ಗಾಗಿ ಮೊದಲ ಸ್ಥಾನ ಪಡೆದವರಿಗೆ ಹಾಗೂ ಹೊರ ತೆರಳುವ ಅತ್ಯುತ್ತಮ ವಿದ್ಯಾರ್ಥಿಗಳನ್ನು ಅರ್ಹತಾ ಪತ್ರ ನೀಡಿ ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.