ಕಬಡ್ಡಿ: ಪರ್ಲ್ ಸಿಟಿ ಸ್ಮ್ಯಾಶರ್ಸ್ ಚಾಂಪಿಯನ್
Team Udayavani, Jul 23, 2018, 11:34 AM IST
ಮಂಗಳೂರು: ಫುಜ್ಲಾನಾ ಜಿಎಸ್ ಬಿ ಪ್ರೊ ಕಬಡ್ಡಿ ಪಂದ್ಯಾಟದ ಅಂತಿಮ ಸುತ್ತಿನಲ್ಲಿ ಡಿವಿಕೆ ವಾರಿಯರ್ಸ್ ತಂಡವನ್ನು ಸೋಲಿಸಿದ ಪರ್ಲ್ ಸಿಟಿ ಸ್ಮ್ಯಾಶರ್ಸ್ ಪುತ್ತೂರು ಪ್ರಶಸ್ತಿ ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ ಅದು 37-24 ಅಂತರದ ಜಯ ಸಾಧಿಸಿ ಜಿಎಸ್‌ಬಿ ಟ್ರೋಫಿ ಮತ್ತು ಒಂದು ಲಕ್ಷ ರೂ. ಬಹುಮಾನವನ್ನು ತನ್ನದಾಗಿಸಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಕ್ರೀಡೆಯಲ್ಲಿ ಪ್ರತಿಭೆಗಳನ್ನು ಪೋ›ತ್ಸಾಹಿಸಲು ಕೊಡಿಯಾಲ್ ಸೋರ್ಟ್ಸ್ ಅಸೋಸಿಯೇಶನ್ ಎರಡು ವರ್ಷಗಳಿಂದ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸುತ್ತಿದೆ. ಜತೆಗೆ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಲು ಶ್ರಮಿಸುವ ಜಿಎಸ್‌ಬಿ ಕ್ರೀಡಾಳುಗಳಿಗೆ ಸಹಾಯಹಸ್ತ ಕೂಡ ಚಾಚುವ ಕೆಲಸ ಮಾಡುತ್ತಿದೆ ಎಂದರು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಡಿವಿಕೆ ತಂಡದ ಶ್ರೀಕಾಂತ್ ಪ್ರಭು, ಬೆಸ್ಟ್ ಕ್ಯಾಚರ್ ಆಗಿ ನಿತಿನ್ ಪುತ್ತೂರು, ಫುಜ್ಲಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪರ್ಲ್ ಸಿಟಿ ಪುತ್ತೂರು ತಂಡದ ಸುಬ್ರಾಯ್ ಕಾಮತ್, ಮಾಡರ್ನ್ ಎಮರ್ಜಿಂಗ್ ಪ್ಲೇಯರ್ ಆಗಿ ನಮೋ ವಾರಿಯರ್ ಮುಂಬೈ ತಂಡದ ರಕ್ಷಿತ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಸಮಾರೋಪ ಸಮಾರಂಭದಲ್ಲಿ ಕಾಮತ್ ಕೇಟರರ್ಸ್ ಮಾಲಕರಾದ ಸುಧಾಕರ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ರಾಮಚಂದ್ರ ಕಾಮತ್, ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್, ಉದ್ಯಮಿಗಳಾದ ಸುರೇಶ್ ಕಾಮತ್, ಅನಂತ ಕಾಮತ್, ನರೇಂದ್ರ ನಾಯಕ್, ರಾಜೇಶ್ ಕಿಣಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮಂಜುನಾಥ ಪೈ, ರಮೇಶ್ ಮಲ್ಯ, ಪೂಜಾ ಪೈ, ಕಬಡ್ಡಿ ಎಸೋಸಿಯೇಶನ್ ಅಮರನಾಥ ರೈ, ವಕೀಲ ಸತೀಶ್ ಭಟ…, ಅರವಿಂದ ಪ್ರಭು, ಹನುಮಂತ ಕಾಮತ್, ನರೇಶ್ ಶೆಣೈ, ಶಿವಾನಂದ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.