ಕಬಕ: ಓದುಗರ ಬಳಕೆಗೆ ಸಿಗಲಿ ಹೊಸ ಗ್ರಂಥಾಲಯ


Team Udayavani, Sep 22, 2018, 10:48 AM IST

22-sepctember-5.jpg

ಕಬಕ: ಕಬಕ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡದ ಕಾಮಗಾರಿ ಮುಗಿದು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಒಂದೂವರೆ ವರ್ಷದ ಹಿಂದೆ ಕೇಂದ್ರ ಗ್ರಂಥಾಲಯ ಇಲಾಖೆಯಿಂದ ಬಿಡುಗಡೆಯಾದ 10 ಲಕ್ಷ ರೂ. ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆದಿವೆ. ವಿದ್ಯುತ್‌ ಸಂಪರ್ಕ, ಸುಣ್ಣ-ಬಣ್ಣ, ಕುಡಿಯುವ ನೀರು, ಪೀಠೊಪಕರಣಗಳ ಸಹಿತ ಎಲ್ಲ ಕೆಲಸಗಳು ಮುಗಿದಿವೆ. ಆವರಣ ಗೋಡೆಯ ಕಾರಣ ನೀಡಿ ಕಳೆದ ಒಂದು ವರ್ಷದಿಂದ ಕಟ್ಟಡ ಉದ್ಘಾಟನೆಯಾಗದೆ ಸ್ಥಗಿತಗೊಂಡಿದೆ. ಇದರಿಂದ ಪುಸ್ತಕ ಪ್ರೇಮಿಗಳು ನಿರಾಶರಾಗಿದ್ದಾರೆ.

ಎರಡೂವರೆ ದಶಕ ಹಿಂದಿನ ಲೈಬ್ರೆರಿ
1994ರ ಅವಧಿಯಲ್ಲಿ ಗ್ರಾ.ಪಂ. ಕಟ್ಟಡದ ಸಣ್ಣ ಕೋಣೆಯೊಂದರಲ್ಲಿ ಪ್ರಾರಂಭವಾದ ಸಾರ್ವಜನಿಕ ಗ್ರಂಥಾಲಯ 450 ಖಾಯಂ ಸದಸ್ಯರಿಗೆ ಮತ್ತು ಇತರ ಓದುಗರಿಗಾಗಿ ದಿನನಿತ್ಯ 6,500 ಪುಸ್ತಕಗಳು ಮತ್ತು ದಿನಪತ್ರಿಕೆ ವಾಚನಕ್ಕೆ ಅವಕಾಶ ಒದಗಿಸುತ್ತಿದೆ. ಹಿ.ಪ್ರಾ. ಶಾಲೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.

ಸ್ಥಳಾವಕಾಶದ ಕೊರತೆ
ಈಗಿನ ಹಳೆಯ ಗ್ರಂಥಾಲಯದಲ್ಲಿ ಸ್ಥಳಾವಕಾಶದ ಕೊರತೆಯಿಂದ ಪುಸ್ತಕ ಜೋಡಣೆಗೆ ಮತ್ತು ಓದುಗರಿಗೂ ತುಂಬಾ ಸಮಸ್ಯೆ ಇದೆ. ಪುಸ್ತಕಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಿಕ್ಕ ಸಿಕ್ಕ ಜಾಗದಲ್ಲಿ ಇಡಲಾಗಿದೆ. ಇದರಿಂದ ತಮಗೆ ಬೇಕಾದ ಪುಸ್ತಕಗಳನ್ನು ಓದುವ ಅವಕಾಶ ಸಾರ್ವಜನಿಕರಿಗೆ ಇಲ್ಲಿ ಸಿಗುತ್ತಿಲ್ಲ. ವಾಚನಾಲಯದ ಒಳಗೆ ನೋಡಿದಾಗ ಸರಕಾರಿ ಕಚೇರಿಯಲ್ಲಿ ಹಳೆಯ ದಾಖಲೆ ಪತ್ರಗಳಂತೆ ಪುಸ್ತಕಗಳನ್ನು ಕಟ್ಟಿ ಇಡಲಾಗಿದೆ. ಈ ಮಧ್ಯೆ ಮೂವರು ಕುಳಿತುಕೊಳ್ಳಲಷ್ಟೇ ಜಾಗವಿದೆ. ಮೇಲ್ವಿಚಾರಕರು ಅವರ ಮಧ್ಯೆಯೇ ಕುಳಿತುಕೊಳ್ಳಬೇಕು.

ಸ್ಥಳಾಂತರಗೊಂಡರೆ ಸಮಸ್ಯೆ ಪರಿಹಾರ
ತುಂಬಾ ಜನ ಪುಸ್ತಕ ಓದಲು ಮತ್ತು ಒಯ್ಯಲು ಗ್ರಂಥಾಲಯಕ್ಕೆ ಬರುತ್ತಾರೆ. ಇಲ್ಲಿ ಉತ್ತಮ ಪುಸ್ತಕಗಳ ಭಂಡಾರವೇ ಇದೆ. ಆದರೆ ಸ್ಥಳಾವಕಾಶದ ಕೊರತೆಯಿಂದ ಕ್ರಮಬದ್ಧವಾಗಿ ಜೋಡಿಸಲು ಆಗುತ್ತಿಲ್ಲ. ಇದರಿಂದಾಗಿ ಇಲ್ಲಿರುವ ಎಲ್ಲ ಪುಸ್ತಕಗಳು ಜನರಿಗೆ ತಲುಪುತ್ತಿಲ್ಲ. ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಗ್ರಂಥಾಲಯ ಮೇಲ್ವಿಚಾರಕ ಗಂಗಾಧರ ಕೆ. ಹೇಳಿದ್ದಾರೆ.

ವಾರದಲ್ಲಿ ಉದ್ಘಾಟನೆ
ಚಿಕ್ಕ ತಂತಿ ಬೇಲಿ ಕೆಲಸ ಮಾತ್ರ ಬಾಕಿ ಇದೆ. ಒಂದು ವಾರದಲ್ಲಿ ಗ್ರಂಥಾಲಯ ಕಟ್ಟಡ ಉದ್ಘಾಟನೆಗೆ ವ್ಯವಸ್ಥೆ ಮಾಡುತ್ತೇವೆ.
– ಹರೀಶ್‌,
ನಿರ್ಮಿತಿ ಕೇಂದ್ರದ ಎಂಜಿನಿಯರ್‌

ಡಿಸಿ ಗಮನಕ್ಕೆ
ಗ್ರಂಥಾಲಯ ಕಟ್ಟಡದ ಎಲ್ಲ ಕಾಮಗಾರಿ ನಡೆದು ಆವರಣ ಕೆಲಸ ಬಾಕಿ ಉಳಿದುಕೊಂಡಿರುವ ಕಾರಣ ಕಟ್ಟಡ ಉದ್ಘಾಟನೆಗೊಂಡಿಲ್ಲ. ಇದರಿಂದ ಸಾರ್ವಜನಿರಿಗೆ ನಿರಾಸೆ ಉಂಟಾಗಿದೆ. ಈ ಬಗ್ಗೆ ಪಂಚಾಯತ್‌ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದೆ.
– ಪ್ರೀತಾ ಬಿ.,
ಕಬಕ ಗ್ರಾ.ಪಂ. ಅಧ್ಯಕ್ಷೆ

ಉಮ್ಮರ್‌ ಜಿ. ಕಬಕ

ಟಾಪ್ ನ್ಯೂಸ್

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

1-pb

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.