ಕಡಬ ಕಾಲೇಜಿಗೆ ಬಾಧಿಸುತ್ತಿದೆ ಕೊಠಡಿ ಕೊರತೆ


Team Udayavani, Dec 5, 2018, 10:41 AM IST

5-december-3.gif

ಕಡಬ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ನೂತನ ತರಗತಿ ಕೊಠಡಿಗಳ ನಿರ್ಮಾಣದ ಕಾಮಗಾರಿ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ಮಂಜೂರಾಗಿದ್ದ ಅನುದಾನಕ್ಕೇ ಕತ್ತರಿ ಬಿದ್ದಿದೆ. ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ಅನುದಾನವನ್ನು ಮತ್ತೆ ಸರಕಾರದ ಖಜಾನೆಗೆ ಹಿಂದಿರುಗಿಸುವಂತೆ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ.

ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದು ಹೆಸರು ಪಡೆದಿರುವ ಕಡಬದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತೀವ್ರ ಸಮಸ್ಯೆಗೆ ಕಾರಣವಾಗಿರುವುದು ತರಗತಿ ಕೊಠಡಿಗಳ ಕೊರತೆ. ಕಾಲೇಜು ವಿಭಾಗಕ್ಕೆ ತರಗತಿ ನಡೆಸಲಾಗುತ್ತಿದ್ದ ಪ್ರೌಢಶಾಲಾ ವಿಭಾಗದ ಹಳೆಯ ಕಟ್ಟಡ ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದು ಸಮಸ್ಯೆ ಇನ್ನಷ್ಟು ಬಿಗಡಾಯಿಸಿತ್ತು. ಈ ಮಧ್ಯೆ ನಿರಂತರ ಮನವಿ ಸಲ್ಲಿಸಿದ ಪರಿಣಾಮವಾಗಿ ಕಾಲೇಜಿಗೆ ನೂತನವಾಗಿ 4 ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಅನುದಾನ ಲಭಿಸಿತ್ತು. ನಿರ್ಮಾಣ ಕಾಮಗಾರಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿ ತಾಂತ್ರಿಕ ಮಂಜೂರಾತಿಯೂ ಲಭಿಸಿತ್ತು. ಆದರೆ ಕಟ್ಟಡ ನಿರ್ಮಿಸಬೇಕಾಗಿದ್ದ ಜಾಗದಲ್ಲಿ ಹಾದುಹೋಗುತ್ತಿದ್ದ ವಿದ್ಯುತ್‌ ಲೈನನ್ನು ಸ್ಥಳಾಂತರಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕೆನ್ನುವಷ್ಟರಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸದಂತೆ ತಡೆ ನೀಡಿದೆ. ಸಾಕಷ್ಟು ಪ್ರಯತ್ನದ ಬಳಿಕ ಲಭಿಸಿದ್ದ 1 ಕೋಟಿ ರೂ. ಅನುದಾನ ಕೈತಪ್ಪುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಅನುದಾನ ಕೈತಪ್ಪದಂತೆ ಸೂಕ್ತ ಪ್ರಯತ್ನ ನಡೆಸಬೇಕಿದೆ.

ಕುಸಿದ ಕಟ್ಟಡ ತೆರವುಗೊಂಡಿಲ್ಲ
ಶಿಥಿಲಗೊಂಡಿರುವ ಕಟ್ಟಡದ ಒಂದು ಭಾಗ ಕುಸಿದುಬಿದ್ದಿರುವುದರಿಂದ ಶಾಲೆಯ ರಂಗಮಂದಿರ ಸಹಿತ ಇಡೀ ತರಗತಿ ಕೊಠಡಿಗಳ ಬ್ಲಾಕ್‌ ಹಾನಿಗೊಳ್ಳುವ ಭೀತಿ ಎದುರಾಗಿದೆ. ಕೊಠಡಿ ಸಮಸ್ಯೆ ಎದುರಿಸುತ್ತಿದ್ದ ಪದವಿಪೂರ್ವ ಕಾಲೇಜು ವಿಭಾಗದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಈ ತರಗತಿ ಕೊಠಡಿಯನ್ನು ಪಾಠ – ಪ್ರವಚನಕ್ಕೆ ಉಪಯೋಗಿಸಲಾಗುತ್ತಿತ್ತು. ಗೋಡೆಯ ಬಿರುಕು ಹೆಚ್ಚಾದ ಕಾರಣದಿಂದ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಇದೀಗ ಕಟ್ಟಡ ಕುಸಿದಿದೆ. ಆದರೆ ವಿದ್ಯಾರ್ಥಿಗಳು ಓಡಾಡುತ್ತಿರುವ ಪ್ರದೇಶವಾಗಿರುವುದರಿಂದ ಉಳಿದಿರುವ ಶಿಥಿಲ ಕಟ್ಟಡ ಕುಸಿದರೆ ಜೀವಹಾನಿಯಾಗುವ ಆತಂಕವೂ ಇದೆ. ಇತ್ತ ನಿಗದಿಪಡಿಸಿದ ದರ ಹೆಚ್ಚಾಗಿದೆ ಎನ್ನುವ ಕಾರಣದಿಂದಾಗಿ ಶಿಥಿಲ ಕಟ್ಟಡದ ವಸ್ತುಗಳನ್ನು ಹರಾಜಿನಲ್ಲಿ ಕೊಳ್ಳಲು ಬಿಡ್ಡುದಾರರು ಮುಂದೆ ಬರುತ್ತಿಲ್ಲ. ದರ ಕಡಿಮೆ ಮಾಡಲು ಇಲಾಖೆಗೆ ತಾಂತ್ರಿಕ ಅಡಚಣೆ ಇದೆ. ಸಂಬಂಧಪಟ್ಟವರು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹಳೆಯ ಕಟ್ಟಡವನ್ನು ತೆರವುಗೊಳಿಸದೇ ಇದ್ದಲ್ಲಿ ಅಪಾಯ ತಪ್ಪಿದ್ದಲ್ಲ.

ರದ್ದಾಗದಂತೆ ಒತ್ತಡ
ಕೊಠಡಿಗಳ ಕೊರತೆ ಅನುಭವಿಸುತ್ತಿರುವ ಕಡಬ ಕಾಲೇಜಿಗೆ ನೂತನ ತರಗತಿ ಕೊಠಡಿ ನಿರ್ಮಿಸಲು ಸಾಕಷ್ಟು ಪ್ರಯತ್ನದ ಬಳಿಕ ಅನುದಾನ ಲಭಿಸಿತ್ತು. ಇದೀಗ ಪ್ರಾಕೃತಿಕ ವಿಕೋಪ, ರೈತರ ಸಾಲಮನ್ನಾ ಮುಂತಾದ ವಿಚಾರಗಳಿಂದಾಗಿ ಸರಕಾರಕ್ಕೆ ಹಣಕಾಸಿನ ಕೊರತೆ ಎದುರಾಗಿದ್ದು, ಮಂಜೂರುಗೊಂಡಿರುವ ಅನುದಾನಗಳನ್ನು ಸರಕಾರ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಕಡಬ ಕಾಲೇಜಿಗೆ ಮಂಜೂರಾಗಿರುವ ಅನುದಾನ ರದ್ದಾಗದಂತೆ ನಾವು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರುತ್ತಿದ್ದೇವೆ.
– ಪಿ.ಪಿ. ವರ್ಗೀಸ್‌,
ಜಿ.ಪಂ. ಸದಸ್ಯರು, ಕಡಬ

5 ಕಡೆ ಸಮಸ್ಯೆ
ಅನುದಾನ ಬಿಡುಗಡೆಯಾಗಿಯೂ ನಿರ್ಮಾಣ ಕಾಮಗಾರಿಗಳು ಆರಂಭಗೊಳ್ಳದಿರುವ ಪ್ರಕರಣಗಳಲ್ಲಿ ಅನುದಾನ ಬಳಕೆ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಕಡಬ, ಉಪ್ಪಿನಂಗಡಿ ಸಹಿತ ಜಿಲ್ಲೆಯ 5 ಸರಕಾರಿ ಪ.ಪೂ. ಕಾಲೇಜುಗಳಿಗೆ ತರಗತಿ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿರುವ ಅನುದಾನಕ್ಕೆ ಇದೇ ಸಮಸ್ಯೆ ಎದುರಾಗಿದೆ.
 - ಕನಿಷ್ಕ,
  ಸಹಾಯಕ ಎಂಜಿನಿಯರ್‌, ಪಿಡಬ್ಲ್ಯೂಡಿ

ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.