ಕಡಬ ತಾಲೂಕು ಘೋಷಣೆ: ಹರ್ಷಾಚರಣೆ


Team Udayavani, Mar 16, 2017, 3:26 PM IST

1503kdb2.jpg

ಕಡಬ: ಪರಿಸರದ ಜನರ ಬಹುಕಾಲದ ಬೇಡಿಕೆಯಾಗಿರುವ ಕಡಬ ತಾಲೂಕು ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಅನುದಾನ ಇರಿಸಿರುವುದಾಗಿ ಪ್ರಕಟಿಸಿರುವುದು ಕಡಬ ಪರಿಸರದ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಕಡಬವೂ ಸಹಿತ 43 ಹೊಸ ತಾಲೂಕುಗಳನ್ನು ಘೋಷಿಸುವುದರೊಂದಿಗೆ ಕಡಬ ಪರಿಸರದ ಜನತೆಯ ಸುಮಾರು 5 ದಶಕಗಳಿಗೂ ಹಿಂದಿನ ಹೋರಾಟಕ್ಕೆ ಜಯ ದೊರೆತಂತಾಗಿತ್ತು. 

ಆದರೆ ಆ ಬಳಿಕ ಅಧಿಕಾರಕ್ಕೇರಿದ ಸಿದ್ದರಾಮಯ್ಯ ನೇತೃತ್ವದ ಸರಕಾರ ಘೋಷಣೆಯಾದ ಹೊಸ ತಾಲೂಕುಗಳ ಅನುಷ್ಠಾನಕ್ಕೆ ಅನುದಾನ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನುವ ನೋವು ಜನರಿಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಈ ಹಿಂದಿನ 43 ಘೋಷಿತ ತಾಲೂಕುಗಳೊಂದಿಗೆ ಇನ್ನೂ ಹೊಸದಾಗಿ 6 ತಾಲೂಕುಗಳನ್ನು ಸೇರ್ಪಡೆಗೊಳಿಸಿ ಅವುಗಳ ಅನುಷ್ಠಾನಕ್ಕೆ ತಲಾ 6.5 ಕೋಟಿ. ರೂ. ಬಜೆಟ್‌ನಲ್ಲಿ ಇರಿಸಿರುವುದು ಜನರಿಗೆ ಖುಷಿ ತಂದಿದೆ.

ದೃಶ್ಯ ಮಾಧ್ಯಮಗಳಲ್ಲಿ ಬುಧವಾರ ಮಧ್ಯಾಹ್ನ  ಹೊಸ ತಾಲೂಕು ರಚನೆಯ ವಿಷಯ ಪ್ರಸಾರವಾಗುತ್ತಿದ್ದಂತೆಯೇ ಕಡಬ ಪೇಟೆಯಲ್ಲಿ  ಹೊಸ ಹುರುಪು ಮೂಡಿತು. ಜನರು ಸಂತಸದಿಂದ ಹರ್ಷಾಚರಣೆ ಮಾಡಿದರು.

ತಾಲೂಕು ಪುನಾರಚ ನೆಯ ಉದ್ದೇಶದಿಂದ ಈ ಹಿಂದೆ ಸರಕಾರದಿಂದ ರಚಿಸಲ್ಪಟ್ಟ ಸಮಿತಿಗಳು (ಗದ್ದೀ ಗೌಡರ್‌ ಸಮಿತಿ ಹಾಗೂ ಹುಂಡೇಕರ್‌ ಸಮಿತಿ) ಕಡಬ ವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಶಿಫಾರಸು ಮಾಡಿರುವುದರೊಂದಿಗೆ ಕಡಬಕ್ಕೆ ವಿಶೇಷ ತಹಶೀಲ್ದಾರ್‌ ಅವರನ್ನು ನೇಮಿಸಿರುವುದು ಕಡಬವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಪೂರಕವಾಗಿತ್ತು. ಪುತ್ತೂರು ತಾಲೂಕಿನ 27, ಬೆಳ್ತಂಗಡಿ ತಾಲೂ ಕಿನ 5 ಹಾಗೂ ಸುಳ್ಯ ತಾಲೂಕಿನ 10  ಗ್ರಾಮ ಗಳನ್ನೊಳಗೊಂಡ ಕಡಬ ಕೇಂದ್ರಿತ 42 ಗ್ರಾಮಗಳ ಕಡಬ ತಾಲೂಕು ರಚನೆಗೆ ಪ್ರಸ್ತಾ ವನೆ ಸಲ್ಲಿಸಿ ಸರಕಾರಕ್ಕೆ ಬೇಡಿಕೆ ಇಟ್ಟು 50 ವರ್ಷಗಳು ಕಳೆದಿವೆ. 1961ರಲ್ಲಿ ಆರಂಭಗೊಂಡ ತಾಲೂಕು ಹೋರಾಟದ ಪ್ರಯತ್ನಕ್ಕೆ 1973ರಲ್ಲಿ ಹೊಸ ವೇಗ ದೊರೆಯಿತು. ಕಡಬದ ಹಿರಿಯ ಉದ್ಯಮಿ ಸಿ. ಫಿಲಿಪ್‌ ಅವರ ಅಧ್ಯಕ್ಷತೆಯಲ್ಲಿ ಪ್ರಫುಲ್ಲಚಂದ್ರ ರೈ ಮಾಣಿಗ, ಮನವಳಿಕೆ ಉಮೇಶ್‌ ರೈ, ಸಯ್ಯದ್‌ಮೀರಾ ಸಾಹೇಬ್‌ ಮುಂತಾದವರ ನ್ನೊಳಗೊಂಡ ತಾಲೂಕು ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂದು ಹಲವು ಹೋರಾಟಗಳನ್ನು ಸಂಘಟಿಸಿತು.

ಕಳೆದ ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆಗಿನ ಜಿ.ಪಂ. ಸದಸ್ಯ ಕೃಷ್ಣ ಶೆಟ್ಟಿ (ಈಗ ಪುತ್ತೂರು ಎಪಿಎಂಸಿ ಅಧ್ಯಕ್ಷ) ಅವರನ್ನು ಸಮಿತಿಗೆ ಸಂಚಾಲಕರನ್ನಾಗಿ ಸೇರಿಸಿಕೊಳ್ಳಲಾಯಿತು.

ಅಂದು ಹೆಸರು ಕೈಬಿಟ್ಟ ಆಯೋಗ
ಎಂ.ಬಿ. ಪ್ರಕಾಶ ನೇತೃತ್ವದ ತಾಲೂಕು ಪುನಾರಚನೆ ಸಮಿತಿ 2009ರಲ್ಲಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕಡಬದ ಹೆಸರನ್ನು ಕೈಬಿಟ್ಟಿದ್ದುದು ಈ ಭಾಗದ ಜನರ ನಿರಾಸೆಗೆ ಕಾರಣವಾಗಿತ್ತು. ಆದರೂ  ಆಗಿನ ಬಿಜೆಪಿ ಸರಕಾರ 43 ಹೊಸ ತಾಲೂಕುಗಳ ಪಟ್ಟಿಯಲ್ಲಿ ಕಡಬವನ್ನು ಸೇರಿಸುವ ಮೂಲಕ ಜನರಲ್ಲಿ ಉತ್ಸಾಹ ತುಂಬಿತ್ತು. 

ಕಾಂಗ್ರೆಸ್‌ನಿಂದ ಪ್ರಯತ್ನ
ಕಡಬದ ಕಾಂಗ್ರೆಸ್‌ ಮುಖಂಡರು ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಕಂದಾಯ ಸಚಿವರು ಹಾಗೂ ಸಿಎಂ ಅನ್ನು ಭೇಟಿ ಮಾಡಿ ಕಡಬ ತಾಲೂಕನ್ನು ಕೈಬಿಡದಂತೆ ಒತ್ತಡ ಹೇರಿದ್ದರು. 

ಗ್ರಾಮಗಳು
ಪುತ್ತೂರು ತಾಲೂಕಿನ ಕೊçಲ, ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಪೆರಾಬೆ, ಬಲ್ಯ, ಕುಂತೂರು, ಕುಟ್ರಾಪ್ಪಾಡಿ, ಕಡಬ, 102ನೇ ನೆಕ್ಕಿಲಾಡಿ, ಕೋಡಿಂಬಾಳ, ಬಂಟ್ರ, ರೆಂಜಿಲಾಡಿ, ನೂಜಿಬಾಳ್ತಿಲ, ಐತ್ತೂರು, ಕೊಂಬಾರು, ಬಿಳಿನೆಲೆ, ದೋಳ್ಪಾಡಿ, ಶಿರಿಬಾಗಿಲು, ಕೊಣಾಜೆ, ಬಜತ್ತೂರು, ಗೋಳಿತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಹತ್ಯಡ್ಕ, ರೆಖ್ಯ, ಶಿಬಾಜೆ, ಶಿಶಿಲ, ಸುಳ್ಯ ತಾಲೂಕಿನ ಎಡಮಂಗಲ, ಎಣ್ಮೂರು, ಐವತ್ತೂಕ್ಲು, ಕೇನ್ಯ, ಬಳ್ಪ, ಪಂಬೆತ್ತಾಡಿ, ಕೂತುRಂಜ, ಏನೆಕಲ್ಲು, ಸುಬ್ರಹ್ಮಣ್ಯ ಹಾಗೂ ಐನೆಕಿದು.
 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.