ಕಡಲಕೆರೆ: “ಕೋಟಿ-ಚೆನ್ನಯ’ ಕಂಬಳ
Team Udayavani, Dec 2, 2018, 2:15 PM IST
ಮೂಡಬಿದಿರೆ: ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 16ನೇ ವರ್ಷದ ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಶನಿವಾರ ಮುಂಜಾನೆ ಪ್ರಾರಂಭವಾಯಿತು.
ಆಲಂಗಾರು ಚರ್ಚ್‌ನ ವಂ| ವಾಲ್ಟರ್ ಡಿ’ಸೋಜಾ, ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ ಭಟ್ ಹಾಗೂ ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಮೌಲಾನ ಝಿಯ್ನಾಲ್ಲಾ ವಿಶೇಷ ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದರು. ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆ ವಹಿಸಿದ್ದರು.
ಬಾರಕೂರಿನಿಂದ ಚಂದ್ರಗಿರಿ ವರೆಗೆ
ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ, ಬಡಗಿನ ಬಾರಕೂರಿನಿಂದ ತೆಂಕಿನ ಚಂದ್ರಗಿರಿವರೆಗಿನ ತುಳುವರೆಲ್ಲ ಒಂದಾಗಿ ಸೇರಿದ್ದರಿಂದ ಮೂಡುಬಿದಿರೆಯಲ್ಲಿ ಕಂಬಳ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಗಿದೆ ಎಂದರು.
5 ಕೋಟಿ ರೂ: ಐವನ್
ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, “ಕಳೆದ ಬಜೆಟ್‌ನ ಸಂದರ್ಭ ಕಂಬಳವನ್ನು ಉಳಿಸಿ ಬೆಳೆಸಲು 5 ಕೋಟಿ ರೂ.ಗಳನ್ನು ಮೀಸಲಿರಿಸಲು ತಾವು ಸರಕಾರವನ್ನು ಆಗ್ರಹಿಸಿದ್ದು ಅದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಕಂಬಳ ಕ್ಷೇತ್ರದ ಸಾಧಕರಿಗೆ ಕ್ರೀಡಾರತ್ನ ಪ್ರಶಸ್ತಿ ನೀಡುವ ಜತೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು
ಸರಕಾರವನ್ನು ಆಗ್ರಹಿಸಿರುವುದಾಗಿಯೂ ತಿಳಿಸಿದರು.
“ಬೆತ್ತ ಹಿಡಿಯಲು ಬಿಡಿ’
ಕಂಬಳಕ್ಕೆ ರಾತ್ರಿ ಆಗಮಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು, “ಕೋಣಗಳಿಗೆ ಹೊಡೆಯುವುದಿಲ್ಲ; ಆದರೆ ಬೆತ್ತವನ್ನು ಹಿಡಿಯಲು ಬಿಡಿ’ ಎಂದು ನ್ಯಾಯಾಲಯವನ್ನು ನಾವೆಲ್ಲ ಕೋರಿಕೊಳ್ಳಬೇಕಾಗಿದೆ’ ಎಂದರು.
ಗಣ್ಯರಾದ ಕೆ.ಪಿ. ಸುಚರಿತ ಶೆಟ್ಟಿ, ಸುಜಾತಾ ಕೆ.ಪಿ., ವಂ| ಮೆಲ್ವಿನ್ ನೊರೋನ್ಹಾ, ದಿನೇಶ್ ಕುಮಾರ್ ಆನಡ್ಕ, ಜಿ. ಉಮೇಶ್ ಪೈ, ಡಾ| ರಮೇಶ್, ಪ್ರವೀಣ್ ಜೈನ್, ವಿನ್ಸೆಂಟ್ ಡಿ’ಸೋಜಾ, ಡಾ| ನಿತ್ಯಾನಂದ ಶೆಟ್ಟಿ, ಹೆರಾಲ್ಡ್ ತಾವ್ರೋ ಮೊದಲಾದವರಿದ್ದರು.
ಸಮಿತಿಯ ಕೋಶಾಧಿಕಾರಿ ಭಾಸ್ಕರ ಎಸ್. ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ,
ಮೇಘನಾಥ ಶೆಟ್ಟಿ ಅವರು ಕಂಬಳ ಕೋಣಗಳ ಯಜಮಾನರನ್ನು ಸೀಯಾಳ, ವೀಳ್ಯದೆಲೆ, ಅಡಿಕೆ ನೀಡಿ ಸ್ವಾಗತಿಸಿದರು.
ಬೆತ್ತ ಹಿಡಿಯದೆಯೇ ಕಂಬಳ ನಡೆಯಿತು
ಸುಪ್ರೀಂ ಕೋರ್ಟ್ ಆದೇಶದಂತೆ ಬೆತ್ತ ಹಿಡಿಯದೆಯೇ ಕೋಟಿ - ಚೆನ್ನಯ ಕಂಬಳ ಯಶಸ್ವಿಯಾಗಿ ನಡೆದಿದ್ದು 146 ಜೋಡಿ ಕೋಣಗಳು ಭಾಗವಹಿಸಿದ್ದವು. ಜನಸಾಗರವೇ ಹರಿದುಬಂದು ರಾತ್ರಿ ಒಂಟಿಕಟ್ಟೆ ಆಸುಪಾಸಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.