ಕದ್ರಿ: ಮೊದಲ ದಿನ ತಗ್ಗದ ವೀಕ್ಷಕರ ಸಂಖ್ಯೆ
Team Udayavani, Apr 21, 2018, 10:12 AM IST
ಮಹಾನಗರ: ಕದ್ರಿ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ, ಲೇಸರ್ ಶೋ ಹಾಗೂ ಉದ್ಯಾನವನ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಎ. 20ರಿಂದ ದರ ನಿಗದಿಪಡಿಸಲಾಗಿದ್ದು, ಮೊದಲ ದಿನ ಸಾಮಾನ್ಯ ದಿನದಂತೆಯೇ ವೀಕ್ಷಕರು ಆಗಮಿಸಿದ್ದರು.
ನೂತನ ದರದ ಬಗ್ಗೆ ಐದು ದಿನಗಳ ಹಿಂದೆಯೇ ಕದ್ರಿ ಉದ್ಯಾನವನದ ದ್ವಾರದಲ್ಲಿ ನಮೂದು ಮಾಡಲಾಗಿದ್ದು, ಇದರಿಂದಾಗಿ ಪ್ರವಾಸಿಗರು ಯಾವುದೇ ರೀತಿಯ ಗೊಂದಲಕ್ಕೊಳಗಾಗಲಿಲ್ಲ. ಸದ್ಯ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಇದ್ದುದರಿಂದ ಹೊರ ಜಿಲ್ಲೆಯ ಪ್ರವಾಸಿಗರು ಕೂಡ ಸಂಗೀತ ಕಾರಂಜಿ ಲೇಜರ್ ಶೋ ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ.
ಕದ್ರಿ ಉದ್ಯಾನವನದಲ್ಲಿ ಸಂಗೀತ ಕಾರಂಜಿ ಲೇಸರ್ ಶೋ ಪ್ರತೀ ದಿನ ಸಂಜೆ 7.30 ರಿಂದ 8 ಗಂಟೆಯವರೆಗೆ ಇದ್ದು, ರಜಾ ದಿನಗಳಂದು (2ನೇ ಶನಿವಾರ, 4ನೇ ಶನಿವಾರ ಸೇರಿ) ಸಂಜೆ 7 ಗಂಟೆಯಿಂದ 7.30 ಮತ್ತು ರಾತ್ರಿ 8 ಗಂಟೆಯಿಂದ 8.30ರ ವರೆಗೆ ಪ್ರದರ್ಶನ ನಿಗದಿಪಡಿಸಲಾಗಿದೆ.
ಸಂಗೀತ ಕಾರಂಜಿ ಮತ್ತು ಲೇಸರ್ ಶೋ ವೀಕ್ಷಣೆಗೆ ವಯಸ್ಕರಿಗೆ 50 ರೂ., ಮಕ್ಕಳಿಗೆ 25 ರೂ. (6 ವರ್ಷದಿಂದ
12 ವರ್ಷದೊಳಗೆ), ಹಳೆ ಜಿಂಕೆ ಉದ್ಯಾನವನ ವೀಕ್ಷಣೆಗೆ ವಯಸ್ಕರಿಗೆ 10 ರೂ., ಮಕ್ಕಳಿಗೆ 5 ರೂ.(6 ವರ್ಷದಿಂದ 12 ವರ್ಷದೊಳಗೆ)ವನ್ನು ತೋಟಗಾರಿಕಾ ಇಲಾಖೆ ಈಗಾಗಲೇ ನಿಗದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.