ಕದ್ರಿ ಶ್ರೀ ಮಂಜುನಾಥ ದೇವಸ್ಥಾನ: ವೈಭವದ ವರ್ಷಾವಧಿ ಜಾತ್ರೆ
Team Udayavani, Jan 17, 2018, 10:29 AM IST
ಮಹಾನಗರ: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರೆಯು ಜ. 14ಕ್ಕೆ ಆರಂಭಗೊಂಡಿದ್ದು, ಅತ್ಯಂತ ವೈಭವದಿಂದ ಜರಗುತ್ತಿದೆ. ಜಾತ್ರೆ ಅಂಗವಾಗಿ ಕ್ಷೇತ್ರವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ಭಕ್ತರು ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ.
ಜ. 21: ಕದ್ರಿ ರಥೋತ್ಸವ
ಜ. 17ರಂದು ಮಲ್ಲಿಕಟ್ಟೆ ಸವಾರಿ ಬಲಿ, ಜ. 18ರಂದು ಮುಂಡಾಣಕಟ್ಟೆ ಸವಾರಿ ಬಲಿ, ಜ. 19ರಂದು ಕೊಂಚಾಡಿ
ಸವಾರಿ ಬಲಿ, ಜ. 20ರಂದು ಏಳನೇ ದೀಪೋತ್ಸವ ಜರಗಲಿದೆ. ಜ. 21ರಂದು ಮಧ್ಯಾಹ್ನ ರಥಾರೋಹಣ, ಸಂಜೆ ಶ್ರೀ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಕವಾಟ ಬಂಧನ, ಜ. 22ರಂದು ಅವಭೃಥ ಸ್ನಾನ, ಕವಾಟೋದ್ಘಾಟನೆ, ತುಲಾಭಾರ ಸೇವೆ, ರಾತ್ರಿ ಚಂದ್ರಮಂಡಲ ಉತ್ಸವ, ಅವಭೃತ ಬಳಿಕ ಕದ್ರಿ ಹತ್ತು ಸಮಸ್ತರಿಂದ ಧ್ವಜಾವರೋಹಣ ನಡೆಯಲಿದೆ.
ಜ. 24ರಂದು ದೇಗುಲದಿಂದ ಮಲರಾಯ ದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12ಕ್ಕೆ ಸಂಪ್ರೋಕ್ಷಣೆ, ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ ಸೇವೆ ಹಾಗೂ ರಾತ್ರಿ ಮಲರಾಯ ಹಾಗೂ ಪರಿವಾರ ದೈವಗಳ ನೇಮ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಕ್ಷೇತ್ರದ ಉತ್ಸವದ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದದ ವತಿಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ. 17ರಂದು ಸಂಜೆ ಭಕ್ತಿಗಾಯನ, ಭಜನೆ, ಭಕ್ತಿಸುಧೆ, ಸಾಂಸ್ಕೃತಿಕ ವೈಭವ, ನೃತ್ಯ, ತಾಳಮದ್ದಳೆ. ಜ. 18ರಂದು ಸಂಜೆ ಭಜನೆ, ಭಕ್ತಿಗಾಯನ, ನೃತ್ಯ ನಡೆಯಲಿದೆ.
ಜ. 19ರಂದು ಸಂಜೆ ಸಂಗೀತ, ಯಕ್ಷನೃತ್ಯ, ಸಂಗೀತ ವೈಭವ, ಭರತನಾಟ್ಯ, ತುಳುನಾಟಕ, ಭಕ್ತಿ ಗಾಯನ ಸಂಭ್ರಮ, ಜ. 20ರಂದು ಬೆಳಗ್ಗೆ ಭಜನೆ, ಭಕ್ತಿಗೀತೆ, ಸಂಜೆ ವೈವಿಧ್ಯಮಯ ಕಾರ್ಯಕ್ರಮ, ಭಕ್ತಿ ರಸಧಾರೆ, ಮಕ್ಕಳ ಯಕ್ಷಗಾನ. ಜ. 21ರಂದು ಬೆಳಗ್ಗೆ ವಾದ್ಯಗೋಷ್ಠಿ, ಭಜನೆ, ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಹಿಂದೂಸ್ಥಾನಿ ಗಾಯನ, ಭಜನೆ, ಯಕ್ಷಗಾನ, ಸಂಜೆ ಭಕ್ತಿಲಹರಿ, ಚೆಂಡೆವಾದನ ಜರಗಲಿದೆ.
ಜ. 22ರಂದು ಬೆಳಗ್ಗೆ ಭಜನೆ, ಸಂಗೀತ, ಭರತನಾಟ್ಯ, ಸಾಂಸ್ಕೃತಿಕ ವೈವಿಧ್ಯ, ಭರತನಾಟ್ಯ. ಜ. 23ರಂದು ಸಂಜೆ ಗೀತ ಗಾಯನ, ಸಂಗೀತ, ವಾದ್ಯಗೋಷ್ಠಿ, ನಾಟ್ಯ. 24ರಂದು ಸಂಜೆ ಭಜನೆ, ಭರತನಾಟ್ಯ, ದಾಸವಾಣಿ, ಇಂದ್ರಜಾಲ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.